ದಾಖಲೆಯ 72,684 ಕೊರೋನಾ ಟೆಸ್ಟ್ : ಸೋಂಕಿತರೆಷ್ಟು? ಗುಣಮುಖರೆಷ್ಟು?
ರಾಜ್ಯದಲ್ಲಿ ಒಂದೇ ದಿನ ಅತೀ ಹೆಚ್ಚಿನ ಸಂಖ್ಯೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯ ವೇಳೆ ಸಾವಿರಾರು ಮಂದಿಯಲ್ಲಿ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ಬೆಂಗಳೂರು (ಆ.30): ರಾಜ್ಯದಲ್ಲಿ ಶನಿವಾರ ದಾಖಲೆಯ 72,684 ಕೊರೋನಾ ಪತ್ತೆ ಪರೀಕ್ಷೆ ಮಾಡಲಾಗಿದ್ದು, ಹೊಸದಾಗಿ 8,324 ಪ್ರಕರಣಗಳು ಬೆಳಕಿಗೆ ಬಂದಿದೆ. 115 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 721 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಪತ್ತೆಯಾದ 8,324 ಸೋಂಕಿತರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 86,446ಕ್ಕೆ ಏರಿದೆ. ಮಾಚ್‌ರ್ 8ರಿಂದ ಈವರೆಗೆ ಒಟ್ಟು 3.27 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ಇದೇ ವೇಳೆ 8,110 ಮಂದಿ ಕೊರೋನಾದಿಂದ ಮುಕ್ತರಾಗಿದ್ದು, 115 ಮಂದಿ ಸಾವನ್ನಪ್ಪುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 5,483ಕ್ಕೆ ತಲುಪಿದೆ.
ಗಾಲಿ ಜನಾರ್ಧನ ರೆಡ್ಡಿಗೂ ವಕ್ಕರಿಸಿದ ಕೊರೋನಾ: ಆಸ್ಪತ್ರೆಗೆ ದಾಖಲು...
ಸಾವಿನ ವಿವರ: ಬೆಂಗಳೂರಿನಲ್ಲಿ 25 ಮಂದಿ ಮೃತಪಟ್ಟಿದ್ದು, ಉಳಿದಂತೆ ಮೈಸೂರು, ಧಾರವಾಡ, ಹಾವೇರಿ ತಲಾ 9, ದಕ್ಷಿಣ ಕನ್ನಡ 7, ಹಾಸನ 6, ಶಿವಮೊಗ್ಗ ಮತ್ತು ತುಮಕೂರು ತಲಾ 5, ಬಳ್ಳಾರಿ, ಕಲಬುರಗಿ, ವಿಜಯಪುರ ತಲಾ 4, ಕೋಲಾರ, ಕೊಪ್ಪಳ, ಮಂಡ್ಯ, ದಾವಣಗೆರೆ, ಚಿಕ್ಕಮಗಳೂರು, ಬೆಳಗಾವಿ ತಲಾ 3, ಯಾದಗಿರಿ, ಉತ್ತರ ಕನ್ನಡ, ರಾಮನಗರ, ಕೊಡಗು, ಗದಗ, ಬಾಗಲಕೋಟೆ ತಲಾ 1 ಸಾವಿನ ಪ್ರಕರಣಗಳ ವರದಿಯಾಗಿದೆ.
ಸೋಂಕಿತರು ರಾಜಧಾನಿಯಲ್ಲಿ ಹೆಚ್ಚು: ಬೆಂಗಳೂರು ನಗರದಲ್ಲಿ 2,993, ಬಳ್ಳಾರಿ 468, ಶಿವಮೊಗ್ಗ 333, ಹಾಸನ 325, ದಾವಣಗೆರೆ 319, ಮೈಸೂರು 309, ಧಾರವಾಡ 290, ಬೆಳಗಾವಿ 276, ದಕ್ಷಿಣ ಕನ್ನಡ 272, ಮಂಡ್ಯ 194, ರಾಯಚೂರು 186, ಬೆಂಗಳೂರು ಗ್ರಾಮಾಂತರ 182, ಗದಗ 181, ಕಲಬುರಗಿ 173, ಉಡುಪಿ 172, ರಾಮನಗರ 153, ಬಾಗಲಕೋಟೆ 152, ತುಮಕೂರು 138, ವಿಜಯಪುರ, ಉತ್ತರ ಕನ್ನಡ 130, ಚಿಕ್ಕಮಗಳೂರು 129, ಚಿಕ್ಕಬಳ್ಳಾಪುರ 102, ಚಿತ್ರದುರ್ಗ 100, ಯಾದಗಿರಿ 98, ಹಾವೇರಿ 93, ಕೋಲಾರ 51, ಕೊಡಗು ಮತ್ತು ಬೀದರ್ 46 ಹಾಗೂ ಚಾಮರಾಜನಗರಲ್ಲಿ 45 ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ.