ಶಿವಮೊಗ್ಗ: ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬ!
ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ-ನಿಟ್ಟೂರು ಮಾರ್ಗದಲ್ಲಿ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಬಿದ್ದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಶಿವಮೊಗ್ಗ (ಜು.26): ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ-ನಿಟ್ಟೂರು ಮಾರ್ಗದಲ್ಲಿ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಬಿದ್ದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬೆಂಗಳೂರಿನಿಂದ ಹೊಸನಗರ - ನಗರ ಮಾರ್ಗವಾಗಿ ಕೊಲ್ಲೂರು ಕಡೆ ಚಲಿಸುತ್ತಿದ್ದ ಬಸ್. ಈ ವೇಳೆ ಹಠಾತ್ತನೇ ಉರುಳಿಬಿದ್ದ ವಿದ್ಯುತ್ ಕಂಬ. ಬಸ್‌ನ ಹಿಂಬದಿಯ ಒಂದು ಬದಿಗೆ ವಿದ್ಯುತ್ ತಂತಿ ಸಮೇತ ಬಿದ್ದಿದೆ. ಕ್ಷಣಕಾಲ ಆತಂಕಗೊಂಡ ಚಾಲಕ, ಕಾರ್ಯನಿರ್ವಾಹಕ ಹಾಗೂ ಪ್ರಯಾಣಿಕರು. ಆದರೆ ಹೊಸನಗರ ಸುತ್ತಮುತ್ತು ಭಾರೀ ಮಳೆ ಹಿನ್ನೆಲೆ ವಿದ್ಯುತ್ ಕಡಿತಗೊಂಡಿತ್ತು.
ಮನೆ ಗೋಡೆ ಕುಸಿದುಇಡೀ ಕುಟುಂಬವೇ ಜೀವಂತ ಸಮಾಧಿಯಾಗುವುದು ಸ್ವಲ್ಪ ದರಲ್ಲೇ ತಪ್ಪಿತ್ತು!
ಬಳಿಕ ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದ ಬಸ್ ಚಾಲಕ, ಕಾರ್ಯನಿರ್ವಾಹಕ ಸ್ಥಳಕ್ಕೆ ಆಗಮಿಸಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದ ನೂರಾರು ಮರಗಳು ಧರೆಗುರುಳಿವೆ. ಮನೆಗಳು ಕುಸಿದುಬಿದ್ದು ಜನಜೀವನ ಅಸ್ತವ್ಯವಸ್ತವಾಗಿದೆ.