Asianet Suvarna News Asianet Suvarna News

ಕರಾವಳಿ ಜಿಲ್ಲೆಗಳಿಗೆ 3 ದಿನ ರೆಡ್ ಅಲರ್ಟ್; ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ಒಳಹರಿವು ಹೆಚ್ಚಳ

ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆ, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಒಳಹರಿವು ಏರಿಕೆಯಾಗಿದೆ.

Karnataka Rain Costal district get red Alert and Kaveri Krishna basins inflows Increase sat
Author
First Published Jun 8, 2024, 7:09 PM IST

ಬೆಂಗಳೂರು (ಜೂ.08): ರಾಜ್ಯದ ನದಿ ಪಾತ್ರಗಳಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕಾವೇರಿ ಜಲಾನಯನ ಪ್ರದೇಶದ ಮೂರು ಜಲಾಶಯಗಳ ಒಳ ಹರಿವಿನ ಪ್ರಮಾಣ 3,303 ಕ್ಯೂಸೆಕ್‌ಗೆ ಹಾಗೂ ಕೃಷ್ಣಾ ಜಲಾಯನದ ಪ್ರದೇಶದ 6 ಜಲಾಶಯಗಳಿಗೆ ಒಳಹರಿವಿನ ಪ್ರಮಾಣ 15,960 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ.

ಹೌದು, ರಾಜ್ಯಕ್ಕೆ ಮುಂಗಾರು ಮಳೆ ಆಗಮಿಸುತ್ತಿದ್ದಂತೆ ಮಳೆ ಪ್ರಮಾಣ ಹೆಚ್ಚಾಗಿದ್ದು, ಎಲ್ಲೆಡೆ ಮಳೆಯಾಗಿರುವ ಘಟನೆಗಳು ವರದಿ ಆಗುತ್ತಿವೆ. ಕೊಡಗು, ಮಲೆನಾಡು, ಕರಾವಳಿ ತೀರ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಕರಾವಳಿ ತೀರ ಪ್ರದೇಶಗಳಿಗೆ ರೆಡ್ ಅಲರ್ಟ್‌ ಕೂಡ ಘೋಷಣೆ ಮಾಡಲಾಗಿದೆ. ಉಳಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮಿಂಚು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ಸಾದ್ಯತೆಯಿದೆ. 

ಮುಂದಿನ 5 ದಿನ ಕರಾವಳಿಗೆ ರೆಡ್ ಅಲರ್ಟ್:  ಭಾರತೀಯ ಹವಾಮಾನ ಇಲಾಖೆಯು ಮುಂದಿನ 5 ದಿನಗಳಲ್ಲಿ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾದ್ಯತೆಗಳಿವೆ. ಜೂನ್ 08-09 ರಂದು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕೆಂಪು ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ, ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಗುಲ್ಬರ್ಗ, ರಾಯಚೂರು ಭಾಗಗಳಲ್ಲಿಯೂ ಅತ್ಯಧಿಕ ಮಳೆಯಾಗಲಿದೆ. ಉಳಿದಂತೆ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಮತ್ತು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯಕ್ಕೆ ಬಂತು ಮುಂಗಾರು ಮಳೆ, ಜಲಾಶಯಗಳಿಗೆ ಬಂತು ಜೀವ ಕಳೆ; ನೀರಿನ ಮಟ್ಟ ಇಲ್ಲಿದೆ ನೋಡಿ

ರಾಜ್ಯದಲ್ಲಿ ಜಲಾಶಯಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಮಳೆಯಾದ ನಂತರ ಎಷ್ಟು ಪ್ರಮಾಣದಲ್ಲಿ ಒಳಹರಿವು ಹೆಚ್ಚಳ ಆಗುತ್ತಿದೆ ಎಂಬುದನ್ನು ಲೆಕ್ಕ ಮಾಡಲಾಗುತ್ತಿದೆ. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ಜೊತೆಗೆ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಾಣ ಮಾಡಲಾದ ಜಲಾಶಯಗಳು ಹಾಗೂ ಎಲ್ಲದರಿಂದ ಪ್ರತ್ಯೇಕವಾಗಿರುವ ವಾಣಿವಿಲಾಸ ಸಾಗರ ಜಲಾಶಯಗಳನ್ನು ವಿಭಾಗ ಮಾಡಲಾಗಿದೆ.

ಜಲಾನಯನ ಪ್ರದೇಶವಾರು ಒಳಹರಿವು ಪ್ರಮಾಣ
ಜಲಾನಯನ ಪ್ರದೇಶಗಳು            ಒಳಹರಿವಿನ ಪ್ರಮಾಣ 

1) ಕಾವೇರಿ ಜಲಾನಯನ ಪ್ರದೇಶ     3,308 ಕ್ಯೂಸೆಕ್
2) ಕೃಷ್ಣಾ ಜಲಾನಯನ ಪ್ರದೇಶ        15,960 ಕ್ಯೂಸೆಕ್
3) ಜಲವಿದ್ಯುತ್ ಪ್ರದೇಶ            1,516 ಕ್ಯೂಸೆಕ್
4) ವಾಣಿವಿಲಾಸ ಸಾಗರ                1,400 ಕ್ಯೂಸೆಕ್

1. ಕೆ.ಆರ್ ಎಸ್ ಜಲಾಶಯ 
ಗರಿಷ್ಠ ನೀರಿನ ಮಟ್ಟ -38.04 ಮೀಟರ್, 
ಇಂದಿನ ನೀರಿನ ಮಟ್ಟ- 13.14 ಟಿಎಂಸಿ 
ಒಳಹರಿವು - 1,423 ಕ್ಯೂಸೆಕ್‌, 
ಹೊರಹರಿವು - 444 ಕ್ಯೂಸೆಕ್‌

2. ಹಾರಂಗಿ ಜಲಾಶಯ 
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 3.06 ಟಿಎಂಸಿ 
ಒಳಹರಿವು - 289 ಕ್ಯೂಸೆಕ್‌ 
ಹೊರಹರಿವು - 200 ಕ್ಯೂಸೆಕ್‌ 

3. ಹೇಮಾವತಿ ಜಲಾಶಯ
​ಗರಿಷ್ಠ ನೀರಿನ ಮಟ್ಟ -890.58 ಮೀಟರ್ 
ಇಂದಿನ ನೀರಿನ ಮಟ್ಟ - 10.01 ಟಿಎಂಸಿ 
ಒಳಹರಿವು - 388 ಕ್ಯೂಸೆಕ್‌ 
ಹೊರಹರಿವು - 250 ಕ್ಯೂಸೆಕ್‌

4. ಕಬಿನಿ ಜಲಾಶಯ​
ಗರಿಷ್ಠ ನೀರಿನ ಮಟ್ಟ - 696.13 ಮೀಟರ್ 
ಇಂದಿನ ನೀರಿನ ಮಟ್ಟ - 7.82 ಟಿಎಂಸಿ 
ಒಳಹರಿವು - 1,658 ಕ್ಯೂಸೆಕ್‌ 
ಹೊರಹರಿವು - 300 ಕ್ಯೂಸೆಕ್‌ 

5. ಭದ್ರಾ ಜಲಾಶಯ​
ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌ 
ಇಂದಿನ ನೀರಿನ ಮಟ್ಟ - 14.39 ಟಿಎಂಸಿ 
ಒಳಹರಿವು - 445 ಕ್ಯೂಸೆಕ್‌ 
ಹೊರಹರಿವು - 341 ಕ್ಯೂಸೆಕ್‌ 

ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

6. ತುಂಗಭದ್ರಾ ಜಲಾಶಯ​
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 3.94 ಟಿಎಂಸಿ 
ಒಳಹರಿವು - 1,490 ಕ್ಯೂಸೆಕ್‌ 
ಹೊರಹರಿವು - 43 ಕ್ಯೂಸೆಕ್‌ 

7. ಘಟಪ್ರಭಾ ಜಲಾಶಯ
​ಗರಿಷ್ಠ ನೀರಿನ ಮಟ್ಟ - 662.91 ಮೀಟರ್ 
ಇಂದಿನ ನೀರಿನ ಮಟ್ಟ - 8.41 ಟಿಎಂಸಿ 
ಒಳಹರಿವು - 201 ಕ್ಯೂಸೆಕ್‌
ಹೊರಹರಿವು -  1,606 ಕ್ಯೂಸೆಕ್‌ 

8. ಮಲಪ್ರಭಾ ಜಲಾಶಯ
​ಗರಿಷ್ಠ ನೀರಿನ ಮಟ್ಟ - 633.80 ಮೀಟರ್ 
ಇಂದಿನ ನೀರಿನ ಮಟ್ಟ - 6.65 ಟಿಎಂಸಿ 
ಒಳಹರಿವು - 0 ಕ್ಯೂಸೆಕ್‌ 
ಹೊರಹರಿವು - 194 ಕ್ಯೂಸೆಕ್‌ 

9. ಆಲಮಟ್ಟಿ ಜಲಾಶಯ​
ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌ 
ಇಂದಿನ ನೀರಿನ ಮಟ್ಟ - 20.83 ಟಿಎಂಸಿ 
ಒಳಹರಿವು - 2,578 ಕ್ಯೂಸೆಕ್‌ 
ಹೊರಹರಿವು - 530 ಕ್ಯೂಸೆಕ್‌  

10. ಲಿಂಗನಮಕ್ಕಿ ಜಲಾಶಯ​ 
ಗರಿಷ್ಠ ನೀರಿನ ಮಟ್ಟ - 554.44 ಮೀಟರ್ 
ಇಂದಿನ ನೀರಿನ ಮಟ್ಟ - 13.32 ಟಿಎಂಸಿ 
ಒಳಹರಿವು - 924 ಕ್ಯೂಸೆಕ್‌ 
ಹೊರಹರಿವು - 2,456 ಕ್ಯೂಸೆಕ್‌ 

11. ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ - 652.24 ಮೀಟರ್ 
ಇಂದಿನ ನೀರಿನ ಮಟ್ಟ - 18.41 ಟಿಎಂಸಿ 
ಒಳಹರಿವು - 1,400 ಕ್ಯೂಸೆಕ್‌ 
ಹೊರಹರಿವು - 147 ಕ್ಯೂಸೆಕ್‌ 

Latest Videos
Follow Us:
Download App:
  • android
  • ios