ಕೊಂಚ ಬದಲಾವಣೆ: ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ
* ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ
* ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ
* ವಾಹನ ಬಳಕೆಗೆ ಅನುಮತಿ ಕೊಟ್ಟ ರಾಜ್ಯ ಪೊಲೀಸ್ ಇಲಾಖೆ
* ಈ ಮೊದಲು ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧವಿತ್ತು.
ಬೆಂಗಳೂರು, (ಮೇ.10): ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆಯಾಗಿದ್ದು, ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಹೌದು....ದಿನಸಿ, ತರಕಾರಿ ಹಾಗೂ ಇತರೆ ದೈನಂದಿನ ಅಗತ್ಯ ವಸ್ತುಗಳ ಖರೀದಿಗೆ ನೆರೆಹೊರೆಯ ಅಂಗಡಿಗಳಿಗೆ ಹೋಗಿಬರಲು ಸಾರ್ವಜನಿಕರು ವಾಹನ ಬಳಕೆ ಮಾಡಬಹುದು. ಹೀಗಂತ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಇಂದು (ಸೋಮವಾರ) ಟ್ವೀಟ್ ಮೂಲಕ ಖಚಿತಪಡಿಸಿದೆ.
ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಖಡಕ್ ಸೂಚನೆ
ಈ ಮೊದಲು ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ವಿಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, ಮನೆಯ ಹತ್ತಿರ ಸಂಚಾರ ನಡೆಸಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ, ನಗರದಲ್ಲಿ ಮನೆಯ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆ ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.