08:22 AM (IST) May 08

Karnataka News Live 8 May 2026ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ

ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

Read Full Story
08:17 AM (IST) May 08

Karnataka News Live 8 May 2026Tamil Nadu government formation - ಟಿವಿಕೆ ವಿಜಯ್ ಹಾದಿಗೆ ರಾಜ್ಯಪಾಲರು ಅಡ್ಡಗಾಲು? 118 ಶಾಸಕರ ಬೆಂಬಲ ಸಾಬೀತುಪಡಿಸಲು ಸೂಚನೆ!

ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ತಡೆ ನೀಡಿದ್ದಾರೆ. ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದು, ಅಗತ್ಯ ಬೆಂಬಲಕ್ಕಾಗಿ ವಿಜಯ್ ಪಕ್ಷವು ಇದೀಗ ಇತರ ಪಕ್ಷಗಳ ಬೆಂಬಲ ಯಾಚಿಸುತ್ತಿದೆ.
Read Full Story
08:03 AM (IST) May 08

Karnataka News Live 8 May 2026Adidwara app ವಿಶೇಷಚೇತನರಿಗೆ ಗುಡ್‌ನ್ಯೂಸ್ - ಉದ್ಯೋಗಕ್ಕಾಗಿ ಸರ್ಕಾರದಿಂದಲೇ ‘ಆದಿದ್ವಾರ’ ಆ್ಯಪ್‌

ವಿಶೇಷ ಚೇತನರಿಗೆ ಉದ್ಯೋಗ ಮತ್ತು ಕೌಶಲ್ಯ ವೇದಿಕೆ ಒದಗಿಸುವ 'ಆದಿದ್ವಾರ' ಆ್ಯಪ್ ಬಿಡುಗಡೆಯಾಗಿದೆ. ಇದರೊಂದಿಗೆ, ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ದಿವ್ಯಾಂಗರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಘೋಷಿಸಿದ್ದಾರೆ.
Read Full Story
07:55 AM (IST) May 08

Karnataka News Live 8 May 2026ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಬಂಧನ ಭೀತಿ

ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಮಹಿಳಾ ಪೇದಿ ದೂರು ನೀಡಿದ್ದು, ಇದೀಗ ಇಡೀ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪಿಎಸ್ಐ ವಿರುದ್ಧ ಹಲವು ಕೇಸ್ ದಾಖಲಾಗಿದೆ.

Read Full Story
07:52 AM (IST) May 08

Karnataka News Live 8 May 2026Karnataka vs Centre - ಜಿ ರಾಮ್‌ ಜಿ ವಿರುದ್ಧ ಕೋರ್ಟ್‌ಗೆ ಮೊರೆ; ಸಂಪುಟ ನಿರ್ಧಾರ ನರೇಗಾದಡಿಯೇ ಕಾಮಗಾರಿಗಾಗಿ ಹೋರಾಟ

ಕೇಂದ್ರ ಸರ್ಕಾರವು ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಹಾಗೂ ಪ್ರಸಕ್ತ ಸಾಲಿನಲ್ಲಿ ಮನರೇಗಾ ಮುಂದುವರಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Read Full Story
07:18 AM (IST) May 08

Karnataka News Live 8 May 2026ತುಮಕೂರು ಅಪಘಾತ, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೈಕ್‌ನಲ್ಲಿ ತೆರಳುತ್ತಿದ್ದ ಆಕಾಶ್ ಹಾಗೂ ಮಂಜುನಾಥ್ ಇಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಆಕಾಶ್ ಮೃತಪಟ್ಟರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮಂಜುನಾಥ್ ಸಾವು ಕಂಡಿದ್ದಾರೆ. ಕುಣಿಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.