08:06 AM (IST) Oct 07

Karnataka News Live 7 October 2026 ಹಿರಿಯರನ್ನು ನಿರ್ಲಕ್ಷಿಸಿದರೇ 3 ತಿಂಗಳು ಜೈಲು, 5000 ರು. ದಂಡ - ಜಿಲ್ಲಾಧಿಕಾರಿ ಸ್ವರೂಪ

ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ 3 ತಿಂಗಳ ಜೈಲು ಮತ್ತು 5,000 ರೂ. ದಂಡ ವಿಧಿಸಲಾಗುವುದು ಎಂದು ಉಡುಪಿ ಡಿಸಿ ಸ್ವರೂಪ ಎಚ್ಚರಿಸಿದ್ದಾರೆ. ಒಂಟಿ ಹಿರಿಯರ ಮನೆಗೆ ಪೊಲೀಸರು ಭೇಟಿ ನೀಡಬೇಕು ಹಾಗೂ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
Read Full Story
07:57 AM (IST) Oct 07

Karnataka News Live 7 October 2026 ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಅಫಜಲಪುರ ತಾಲೂಕಿನ ಹವಳಗ ಗ್ರಾಮದ ಸೃಷ್ಟಿ ಪೂಜಾರಿ ಓಟ

ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಪೂಜಾರಿ 200 ಮೀಟರ್ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರತಿಭೆಯ ಈ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read Full Story
07:47 AM (IST) Oct 07

Karnataka News Live 7 October 2026 ಇಂದಿನಿಂದ ಮುದ್ದೇಬಿಹಾಳ, ತಾಳಿಕೋಟೆ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ. ಶಾಸಕ ಸಿ.ಎಸ್.ಅಪ್ಪಾಜಿ ನಾಡಗೌಡ ಅವರ ಮನವಿಯ ಮೇರೆಗೆ ಅಕ್ಟೋಬರ್ 7ರಿಂದ ನೀರು ಬಿಡಲಾಗುತ್ತಿದೆ.

Read Full Story
07:39 AM (IST) Oct 07

Karnataka News Live 7 October 2026 ₹8703 ಕೋಟಿಗೆ ಏರಿಕೆಯಾದ ಕೆ-ಶಿಪ್ ವೆಚ್ಚ; ಸಂಕಷ್ಟದಲ್ಲಿ 10 ಪ್ರಮುಖ ರಾಜ್ಯ ಹೆದ್ದಾರಿಗಳ ನಿರ್ಮಾಣ

ಲೋಕೋಪಯೋಗಿ ಇಲಾಖೆಯ ವಿಳಂಬ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿಯಿಂದಾಗಿ ಕೆ-ಶಿಪ್ 4 ಹೆದ್ದಾರಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇದರಿಂದಾಗಿ 780 ಕಿ.ಮೀ ರಸ್ತೆ ನಿರ್ಮಾಣದ ವೆಚ್ಚ ಬರೋಬ್ಬರಿ 3,000 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ

Read Full Story
07:27 AM (IST) Oct 07

Karnataka News Live 7 October 2026 ಬರವಿದ್ದರೂ ಬತ್ತದ ರಾಮನಗರದ ನಾಲ್ಕು ಜಲಾಶಯಗಳು; ಅಪಾರ ನೀರು, ಅಂತರ್ಜಲ ಮಟ್ಟ ವೃದ್ಧಿ

ತೀವ್ರ ಮಳೆಯ ಕೊರತೆಯ ನಡುವೆಯೂ ರಾಮನಗರ ಜಿಲ್ಲೆಯ 4 ಜಲಾಶಯಗಳಲ್ಲಿ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸಿದ್ದು, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಮತ್ತು ವನ್ಯಜೀವಿಗಳಿಗೆ ಅನುಕೂಲವಾಗಿದೆ.

Read Full Story
07:15 AM (IST) Oct 07

Karnataka News Live 7 October 2026 ರೈಲ್ವೆ ಪ್ರಯಾಣಿಕರೇ ಗಮನಿಸಿ - ಮೈಸೂರು ದಸರಾ ಹಬ್ಬಕ್ಕೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ! ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯು ವಿಶೇಷ ಕಾಯ್ದಿರಿಸದ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಕೆಎಸ್ಆರ್ ಬೆಂಗಳೂರು, ಮೈಸೂರು, ಅಶೋಕಪುರಂ ಮತ್ತು ಚಾಮರಾಜನಗರ ನಡುವೆ ಈ ಹೆಚ್ಚುವರಿ ರೈಲುಗಳು ಸಂಚರಿಸಲಿವೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ, ತಿಳಿಯಿರಿ.

Read Full Story
07:12 AM (IST) Oct 07

Karnataka News Live 7 October 2026 ಬಿಗ್‌ಬಾಸ್ ಮನೆಯಲ್ಲಿ ಆತಂಕ - ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!

ಬಿಗ್‌ಬಾಸ್ ಮನೆಯ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ವೇಳೆ ಉಸಿರಾಟದ ಸಮಸ್ಯೆಯಿಂದ ಬಳಲಿದ ಸಂಗೀತಾ ಭಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆದು ಮತ್ತೆ ಮನೆಗೆ ಮರಳುತ್ತಾರಾ ಅಥವಾ ಆಟದಿಂದ ಹೊರಬರುತ್ತಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ.
Read Full Story