10:56 PM (IST) Oct 06

Karnataka News Live 6th October: ಚೆನ್ನೈನಲ್ಲಿ ಅಪರೂಪದ ಕ್ಷಣಗಳನ್ನು ಕಳೆದ 80ರ ದಶಕದ ಲೆಜೆಂಡ್‌ಗಳು; ಯಾರೆಲ್ಲಾ ಬಂದಿದ್ದರು ನೋಡಿ!

ಇದರ ಉದ್ದೇಶ ಸ್ಪಷ್ಟವಾಗಿತ್ತು – ಕೇವಲ ವೈಭವವನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಆತ್ಮೀಯತೆಯನ್ನು ಮತ್ತು ಸೌಹಾರ್ದತೆಯನ್ನು ಆಚರಿಸುವುದು. ರಾಜ್‌ಕುಮಾರ್ ಸೇತುಪತಿ ಮತ್ತು ಶ್ರೀಪ್ರಿಯಾ ಅವರು ಈ ಪುನರ್ಮಿಲನಕ್ಕೆ ಸೂಕ್ತವಾದ ಆತಿಥ್ಯ ನೀಡಿದರು.

Read Full Story
10:34 PM (IST) Oct 06

Karnataka News Live 6th October: ಇಡೀ ಮನೆಗೆ ಒಂದು ಚಿಂತೆಯಾದ್ರೆ, ರಕ್ಷಿತಾ & ಕಾಕ್ರೋಚ್ ಸುಧಿಗೆ ಮತ್ತೊಂದು ಸಮಸ್ಯೆ

Bigg Boss Kannada Show: ಬಿಗ್‌ಬಾಸ್ ಮನೆಯಲ್ಲಿ ಅಡುಗೆ ವಿಚಾರವಾಗಿ ಒಂಟಿಗಳು ಮತ್ತು ಜಂಟಿಗಳ ನಡುವೆ ಜಗಳ ಶುರುವಾಗಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದವು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ನಿಯಮ ಉಲ್ಲಂಘನೆಗಾಗಿ ಬಿಗ್‌ಬಾಸ್ ಜಂಟಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ.

Read Full Story
08:44 PM (IST) Oct 06

Karnataka News Live 6th October: ನಿಶ್ಚಿತಾರ್ಥದ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ; ಮುಂದೆ ಕಾದಿದೆಯಾ ಗಂಡಾಂತರ?

ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥದ ನಂತರ, ನಟ ವಿಜಯ್ ದೇವರಕೊಂಡ ಅವರು ತೆಲಂಗಾಣದ ಗದ್ವಾಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇನ್ನು ಬುಲೆರೋ ವಾಹನದಿಂದಲೇ ಈ ಅಪಘಾತವಾಗಲು ಕಾರಣವೆಂದು ಹೇಳಲಾಗುತ್ತಿದೆ.

Read Full Story
08:40 PM (IST) Oct 06

Karnataka News Live 6th October: ಮಲೆನಾಡು ಭಾಗದ ಪ್ರಯಾಣಿಕರಿಗೆ ಸಂತಸದ ಸುದ್ದಿ, ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಟ್ರೈನ್ ಸಂಚಾರ, ಈಗಲೇ ಟಿಕೆಟ್‌ ಬುಕ್ ಮಾಡಿ

ದೀಪಾವಳಿ ಹಬ್ಬದ ಪ್ರಯುಕ್ತ, ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ ರೈಲುಗಳು ಅಕ್ಟೋಬರ್ 17, 18, 24, ಮತ್ತು 25 ರಂದು ಸಂಚರಿಸಲಿದ್ದು, ಮಲೆನಾಡು ಭಾಗದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿವೆ.
Read Full Story
08:21 PM (IST) Oct 06

Karnataka News Live 6th October: ಹೆಂಡ್ತಿಗೆ ₹18 ಲಕ್ಷ, 120 ಗ್ರಾಂ ಚಿನ್ನ ಕೊಟ್ಟು ಡಿವೋರ್ಸ್; ಹಾಲಿನ ಸ್ನಾನ ಮಾಡಿ, ಕೇಕ್ ಕತ್ತರಿಸಿ ಸಂಭ್ರಮ!

ವಿಚ್ಛೇದನವನ್ನು ದುಃಖದ ಬದಲು ಸ್ವಾತಂತ್ರ್ಯದ ಸಂಭ್ರಮವಾಗಿ ಆಚರಿಸಿದ ಯುವಕನೊಬ್ಬನ ವಿಡಿಯೋ ವೈರಲ್ ಆಗಿದೆ. ಹಾಲಿನ ಸ್ನಾನ ಮಾಡಿ, 'ಹಾಪಿ ಡೈವೋರ್ಸ್' ಎಂದು ಬರೆದ ಕೇಕ್ ಕತ್ತರಿಸಿದ ಈತನ ವಿಶಿಷ್ಟ ಆಚರಣೆಯು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
Read Full Story
08:00 PM (IST) Oct 06

Karnataka News Live 6th October: ಬಿಗ್‌ಬಾಸ್ ಶೋ ನಿಲ್ಲಿಸಿ? ವಿದ್ಯುತ್ ಕಡಿತಗೊಳಿಸಿ, ಮಾಲಿನ್ಯ ಮಂಡಳಿಯಿಂದ ಶಾಕಿಂಗ್ ನೋಟಿಸ್

Bigg Boss Kannada pollution notice: ಬಿಡದಿಯಲ್ಲಿರುವ ಬಿಗ್‌ಬಾಸ್ ಹೌಸ್, ಸಂಸ್ಕರಿಸದ ತ್ಯಾಜ್ಯ ನೀರನ್ನು ಹೊರಬಿಟ್ಟು ಪರಿಸರ ಮಾಲಿನ್ಯ ಉಂಟುಮಾಡಿದ ಆರೋಪದ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಪಡೆದಿದೆ. 

Read Full Story
07:48 PM (IST) Oct 06

Karnataka News Live 6th October: ಉದ್ಯಮಿ ಮೋಹನ್ ದಾಸ್ ಪೈ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಸ್ಫೋಟ - ಸರ್ಕಾರದ ನಿರಾಕರಣೆ, ವಿಪಕ್ಷಗಳ ಸವಾರಿ!

ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಕರ್ನಾಟಕ ಸರ್ಕಾರದ 12 ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಮಾಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದ್ದು, ದಾಖಲೆ ನೀಡುವಂತೆ ಸವಾಲು ಹಾಕಿದೆ.

Read Full Story
07:23 PM (IST) Oct 06

Karnataka News Live 6th October: ಯೂಟ್ಯೂಬರ್ ಮುಕಳೆಪ್ಪ-ಗಾಯತ್ರಿ ಮದುವೆ ವಿವಾದ ಸುಖಾಂತ್ಯ; ಕಿರಿಕಿರಿ ಮಾಡದಂತೆ ಕೈ-ಮುಗಿದು ಮನವಿ!

ಯೂಟ್ಯೂಬರ್ ಮುಕಳೆಪ್ಪ, ಹಿಂದೂ ಯುವತಿ ಗಾಯತ್ರಿಯನ್ನು ಮದುವೆಯಾದ ನಂತರ 'ಲವ್ ಜಿಹಾದ್' ಆರೋಪ ಎದುರಿಸಿದ್ದರು. ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಇದು ಪ್ರೀತಿಯಿಂದಾದ ಮದುವೆಯೇ ಹೊರತು ಮತಾಂತರವಲ್ಲ ಎಂದು ಮುಕಳೆಪ್ಪ ಸ್ಪಷ್ಟಪಡಿಸಿದ್ದಾರೆ. ವಿವಾದ ಬದಿಗೊತ್ತಿ ಸಂತೋಷದಿಂದಿರುವ ಫೋಟೋ ಹಂಚಿಕೊಂಡಿದ್ದಾರೆ.

Read Full Story
07:12 PM (IST) Oct 06

Karnataka News Live 6th October: ಭಾರತೀಯ ರೈಲು ಬೋಗಿಗಳ ಸ್ವಚ್ಛತೆಯ ಹೊಸ ಅಧ್ಯಾಯ, ಸ್ವದೇಶಿ ಡ್ರೋನ್ ತಂತ್ರಜ್ಞಾನ ಬಳಕೆಯ ಪರೀಕ್ಷೆ ಯಶಸ್ವಿ

ಭಾರತೀಯ ರೈಲ್ವೆಯು ಸ್ವದೇಶಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ರೈಲು ಬೋಗಿಗಳನ್ನು ತೊಳೆಯುವ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸೂರತ್‌ನ ಯುವಕರು ಅಭಿವೃದ್ಧಿಪಡಿಸಿದ ಈ ಕಡಿಮೆ ವೆಚ್ಚದ ವಿಧಾನವು, ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ 25 ಬೋಗಿಗಳನ್ನು ಕೇವಲ 30 ನಿಮಿಷಗಳಲ್ಲಿ ಶುಚಿಗೊಳಿಸಿದೆ.

Read Full Story
06:49 PM (IST) Oct 06

Karnataka News Live 6th October: ನವಜಾತ ಶಿಶುವಿನ ಗರ್ಭದಲ್ಲಿ ಇನ್ನೊಂದು ಮಗು! ಬೆಚ್ಚಿಬಿದ್ದ ಹುಬ್ಬಳ್ಳಿ ವೈದ್ಯರು- ಇದೇನಿದು ಪ್ರಕರಣ?

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ, ನವಜಾತ ಗಂಡು ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿ ವೈದ್ಯರನ್ನು ಅಚ್ಚರಿಗೊಳಿಸಿದೆ. ಇದು ಅವಳಿ ಶಿಶುಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಒಂದು ಭ್ರೂಣವು ಇನ್ನೊಂದರೊಳಗೆ ಬೆಳೆಯುತ್ತದೆ.

Read Full Story
06:20 PM (IST) Oct 06

Karnataka News Live 6th October: ಜಡ್ಜ್‌ ಮೇಲೆ ಶೂ ಎಸೆತ ಯತ್ನ - ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎಂದ ಸಿಎಂ ಸಿದ್ದರಾಮಯ್ಯ

CJI BR Gavai ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಇದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಎಂದು ಬಣ್ಣಿಸಿದ್ದು, ಕಿಡಿಗೇಡಿ ವಕೀಲನ ಬಂಧನಕ್ಕೆ ಆಗ್ರಹಿಸಿದ್ದಾರೆ.

Read Full Story
06:09 PM (IST) Oct 06

Karnataka News Live 6th October: ಹೊರಗಡೆ ವಿವಾದದಲ್ಲಿರುವ ಬಿಗ್‌ಬಾಸ್ ಜಾಹ್ನವಿ ಒಳಗಡೆ ಸಿಕ್ಕಾಪಟ್ಟೆ ಗ್ಲಾಮರ್, ವಯಸ್ಸಿನ ಬಗ್ಗೆ ನೆಟ್ಟಿಗರ ಹುಡುಕಾಟ

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಸ್ಪರ್ಧಿ, ನಿರೂಪಕಿ ಜಾಹ್ನವಿ ತಮ್ಮ ವಿಚ್ಛೇದನದ ಬಗ್ಗೆ ಮನೆಯಲ್ಲಿ ಮಾತನಾಡಿದ್ದಾರೆ. ತನ್ನ ಪತಿ ಜೀವಂತವಾಗಿರುವಾಗಲೇ ಬೇರೆ ಮದುವೆಯಾಗಿದ್ದೇ ಡಿವೋರ್ಸ್‌ಗೆ ಕಾರಣ ಎಂದಿದ್ದರು. ಆದರೆ, ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Read Full Story
05:55 PM (IST) Oct 06

Karnataka News Live 6th October: ಬಡ್ಡಿ ಬಂಗಾರಮ್ಮಾ ಮೊನಚಾದ ಮಾತಿನೇಟಿಗೆ ರಾಜಮಾತೆಯ ಕಣ್ಣೀರು; ದಿಗ್ಬ್ರಮೆಯಾಗಿ ನಿಂತ ರಕ್ಷಿತಾ ಶೆಟ್ಟಿ

Manju Bhashini angry reactionn: ಬಿಗ್‌ಬಾಸ್ ಸೀಸನ್ 12ರ ಎರಡನೇ ವಾರದಲ್ಲಿ ಒಂಟಿ ಮತ್ತು ಜಂಟಿ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದದಿಂದಾಗಿ ಮಂಜು ಭಾಷಿಣಿ ಆಕ್ರೋಶಗೊಂಡಿದ್ದು, ಈ ಬೆಳವಣಿಗೆಗಳಿಂದ ನೊಂದ ಒಂಟಿಗಳ ರಾಜಮಾತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.

Read Full Story
05:54 PM (IST) Oct 06

Karnataka News Live 6th October: ಶ್ರೀಕೃಷ್ಣದೇವರಾಯ ವಿವಿ ಅಂಕಪಟ್ಟಿಯಲ್ಲಿ ಸ್ವಾಮೀಜಿ ಫೋಟೋ - ಸಿಬ್ಬಂದಿ ಎಡವಟ್ಟಿಗೆ ವಿದ್ಯಾರ್ಥಿ ಭವಿಷ್ಯ ಅತಂತ್ರ!

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು (ವಿಎಸ್‌ಕೆವಿವಿ) ವಿದ್ಯಾರ್ಥಿಯೊಬ್ಬನ ಅಂಕಪಟ್ಟಿಯಲ್ಲಿ ಆತನ ಫೋಟೋ ಬದಲು ಗವಿಸಿದ್ದೇಶ್ವರ ಸ್ವಾಮೀಜಿ ಫೋಟೋ ಮುದ್ರಿಸಿ, ಫಲಿತಾಂಶವನ್ನೂ ತಪ್ಪಾಗಿ ನಮೂದಿಸಿದೆ. ವರ್ಷ ಕಳೆದರೂ ದೋಷ ಸರಿಪಡಿಸದ ಕಾರಣ, ವಿದ್ಯಾರ್ಥಿಯ ಭವಿಷ್ಯ ಅತಂತ್ರವಾಗಿದೆ.

Read Full Story
05:50 PM (IST) Oct 06

Karnataka News Live 6th October: Amruthadhaare - ವಠಾರಕ್ಕೆ ಗೌತಮ್​ನನ್ನು ಹುಡುಕಿಬಂದ ಪೊಲೀಸರು! ಮಗಳ ಬಗ್ಗೆ ಬಿಗ್​ ಅಪ್​ಡೇಟ್

ಕಾಣೆಯಾದ ಮಗಳ ಬಗ್ಗೆ ಪೊಲೀಸರು ವಿಚಾರಿಸಿದ್ದರಿಂದ ಗೌತಮ್‌ಗೆ ಹೊಸ ಭರವಸೆ ಮೂಡಿದೆ. ಇನ್ನೊಂದೆಡೆ, ಭೂಮಿಕಾಗೆ ಹೆಡ್ ಮಿಸ್ ಕೆಲಸ ಸಿಕ್ಕಿದ್ದು, ಗೌತಮ್ ನೆನಪಿನಿಂದ ದೂರವಿರಲು ಪ್ರಯತ್ನಿಸುತ್ತಾಳೆ. ಎರಡು ಮಕ್ಕಳಲ್ಲಿ ನಿಜವಾದ ಮಗು ಯಾರು ಎಂಬ ರಹಸ್ಯವು ಕಥೆಗೆ ಹೊಸ ತಿರುವು ನೀಡಿದೆ.
Read Full Story
05:09 PM (IST) Oct 06

Karnataka News Live 6th October: Lakshmi Nivasa - ತನು ಕೈಯಲ್ಲಿ ವಿಶ್ವನ ಜಾತಕ! ಜಾನುನೇ ಲವರ್​ ಎಂದು ಗೊತ್ತಾಗೋಗತ್ತಾ?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ವಿಶ್ವನ ಮೇಲಿನ ಅನುಮಾನದಿಂದ ತನು ಆತನ ಕಾಲೇಜಿಗೆ ಹೋಗಿ ಜಾಹ್ನವಿಯ ದಾಖಲೆಗಳನ್ನು ಪತ್ತೆಹಚ್ಚುತ್ತಾಳೆ. ವಿಶ್ವ ತಡೆಯಲು ಪ್ರಯತ್ನಿಸಿದರೂ, ಜಾಹ್ನವಿಯ ದಾಖಲೆ ತನು ಕೈ ಸೇರಿದ್ದು, ವಿಶ್ವ ಮತ್ತು ಜಾಹ್ನವಿಯ ರಹಸ್ಯ ಬಯಲಾಗುವ ಹಂತ ತಲುಪಿದೆ.
Read Full Story
05:05 PM (IST) Oct 06

Karnataka News Live 6th October: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ, ಗಂಡನ ಮನೆಯಲ್ಲಿ ನಿಗೂಢ ಹೆಣವಾದ ಗೃಹಿಣಿ ರಕ್ಷಿತಾ!

ಬೆಂಗಳೂರಿನ ಲಗ್ಗೆರೆಯಲ್ಲಿ ಗೃಹಿಣಿ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಪತಿ ರವೀಶ್ ಮತ್ತು ಆತನ ಸಹೋದರ ನಿರಂತರ ಕಿರುಕುಳ ನೀಡುತ್ತಿದ್ದು, ಅವರೇ ಕೊಲೆ ಮಾಡಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story
04:38 PM (IST) Oct 06

Karnataka News Live 6th October: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ - 2 ಹಂತದಲ್ಲಿ ಮತದಾನ, 14 ನವೆಂಬರ್‌ಗೆ ರಿಸಲ್ಟ್

Bihar Assembly poll dates: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಎಂ ನಿತೀಶ್ ಕುಮಾರ್, ಪಾಟ್ನಾದಲ್ಲಿ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. 2020ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Read Full Story
04:26 PM (IST) Oct 06

Karnataka News Live 6th October: Bigg Bossನಲ್ಲಿ ಪ್ರತಿಸಲನೂ ಯಾಕೋ ಹೀಗೆ ಗೊತ್ತಿಲ್ಲ, ಇದು ನೋವಿನ ಸಂಗತಿ ! ಐಶ್ವರ್ಯ ಸಿಂಧೋಗಿ ತೀವ್ರ ಅಸಮಾಧಾನ

ಬಿಗ್​ಬಾಸ್​ 12ರ ಮೊದಲ ವಾರದ ಎಲಿಮಿನೇಷನ್‌ ಬಗ್ಗೆ ಬಿಗ್​ಬಾಸ್​ 11ರ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಸ್ಪರ್ಧಿಗಳನ್ನು ಹೊರಹಾಕುವುದು ಅನ್ಯಾಯ ಎಂದಿರುವ ಅವರು, ತಮ್ಮ ಸೀಸನ್‌ನ ಅನುಭವವನ್ನೂ ಹಂಚಿಕೊಂಡಿದ್ದಾರೆ.

Read Full Story
03:55 PM (IST) Oct 06

Karnataka News Live 6th October: ನಿನ್ನಂತಹ ಆಂಟಿಗಳೇ ಇಷ್ಟವೆಂದ ಅಭಿಷೇಕ್‌ಗೆ ಖಡಕ್ ತಿರುಗೇಟು ಕೊಟ್ಟ ಜಾಹ್ನವಿ! ಬಿಗ್ ಬಾಸ್ ಅಸಲಿ ಆಟ ಈಗ ಶುರು!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ (ಅರಸರು) ಮತ್ತು ಜಂಟಿ (ಗುಲಾಮರು) ಎಂಬ ಥೀಮ್‌ನಿಂದಾಗಿ ಸ್ಪರ್ಧಿಗಳ ನಡುವೆ ಅಸಮಾನತೆ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ಎರಡೂ ಗುಂಪುಗಳ ನಡುವೆ ತೀವ್ರ ಕಿತ್ತಾಟ ಶುರುವಾಗಿದ್ದು, ಜಾಹ್ನವಿ ಜಂಟಿಗಳ ನಿಯಮ ಉಲ್ಲಂಘನೆಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.

Read Full Story