11:14 PM (IST) Apr 05

ಭಾರತದಲ್ಲೇ ಅತಿ ಕಡಿಮೆ ಬೆಲೆಗೆ ಸಿಗೋ ವಿದೇಶಿ ಕಾರ್‌ ಇದೇನಾ? ಬೆಲೆ ಕೇಳಿದ್ರೆ ನೀವಂತೂ ಫುಲ್‌ ಖುಷ್!‌

ವಿಯೆಟ್ನಾಂನ ಎಲೆಕ್ಟ್ರಿಕ್ ಕಾರ್ ತಯಾರಿಕಾ ಕಂಪನಿಯಾದ ವಿನ್‌ಫಾಸ್ಟ್ ತನ್ನ ಮೊದಲ ಸಣ್ಣ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ VF3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಈ ಕಾರನ್ನು ಪರಿಚಯಿಸಿತು. ಭಾರತದಲ್ಲಿ, ಇದು MG Comet EV ಜೊತೆ ಸ್ಪರ್ಧಿಸಲಿದೆ.

ಪೂರ್ತಿ ಓದಿ
10:43 PM (IST) Apr 05

ಆ ಬ್ರಹ್ಮ ಬಂದರೂ ಈ ಜಾಗವನ್ನು ಮುಸ್ಲಿಂರಿಗೆ ಬಿಟ್ಟುಕೊಡುವುದಿಲ್ಲ: ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

ತಿಲಕ್‍ ನಗರದ ಡಿಸಿ ಕಚೇರಿ ಎದುರಿರುವ ಜಾಗ ಆಟದ ಮೈದಾನವೇ ಹೊರತು ಈದ್ಗಾ ಮೈದಾನವಲ್ಲ. ಅದು ಆಟದ ಮೈದಾನ ಎನ್ನುವುದಕ್ಕೆ ಹಲವು ದಾಖಲೆಗಳು ನಮ್ಮಲ್ಲಿವೆ, ಆ ಬ್ರಹ್ಮ ಬಂದರೂ ಈ ಜಾಗವನ್ನು ಮುಸ್ಲಿಂರಿಗೆ ಬಿಟ್ಟುಕೊಡುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು. 

ಪೂರ್ತಿ ಓದಿ
08:46 PM (IST) Apr 05

ವಿದೇಶದಿಂದ ಚಿನ್ನ ತರಲು ಭಾರತದಲ್ಲಿರುವ ನಿಯಮಗಳು: ಓರ್ವ ಮಹಿಳೆ ಅಥವಾ ಪುರುಷ ಎಷ್ಟು ತರಬಹುದು?

ಚಿನ್ನದ ಬೆಲೆ ಏರುತ್ತಿರುವಾಗ, ವಿದೇಶದಿಂದ ಚಿನ್ನ ತರುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಎಷ್ಟು ಚಿನ್ನ ತರಬಹುದು, ತೆರಿಗೆ ವಿನಾಯಿತಿ ಮತ್ತು ಕಸ್ಟಮ್ಸ್ ಡ್ಯೂಟಿ ಬಗ್ಗೆ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ
08:43 PM (IST) Apr 05

ಸಚಿವ ರಾಜಣ್ಣ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಸಾಕ್ಷ್ಯ ಸಿಕ್ಕಿಲ್ಲ: ಪರಮೇಶ್ವರ್‌ಗೆ ಸಿಐಡಿ ಡಿಜಿಪಿ ವಿವರಣೆ

ರಾಜ್ಯ ಸಹಕಾರ ಮಂತ್ರಿ ಕೆ.ಎನ್‌.ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಡಿಜಿಪಿ ಡಾ.ಎಂ.ಎ.ಸಲೀಂ ಮೌಖಿಕವಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. 

ಪೂರ್ತಿ ಓದಿ
08:30 PM (IST) Apr 05

ನನ್ನ, ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಗೃಹ ಸಚಿವ ಪರಮೇಶ್ವರ್‌

ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ಸಣ್ಣಪುಟ್ಟ ಅಭಿಪ್ರಾಯ ಭೇದಗಳು ಸಹಜ. ಅದನ್ನೇ ಭಿನ್ನಮತ ಎನ್ನುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಪೂರ್ತಿ ಓದಿ
08:24 PM (IST) Apr 05

ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಯಾಗಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಮನವಿ ಸಲ್ಲಿಸಿದರು. 

ಪೂರ್ತಿ ಓದಿ
08:18 PM (IST) Apr 05

ನವಜಾತ ಶಿಶುಗಳ ತಾಯಂದಿರ ಸಾವು ತಡೆಗೆ ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ಸಣ್ಣಪುಟ್ಟ ಚಿಕಿತ್ಸೆ, ಆರೈಕೆ ದೋಷಗಳಿಂದಾಗಿ ಸಾವಿಗೀಡಾಗುವ ನವಜಾತ ಶಿಶುಗಳ ತಾಯಂದಿರ ಮರಣ ಪ್ರಮಾಣ ಇಳಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ದಿಸೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇಂಥ ಸಾವಿನ ಪ್ರಮಾಣ ಶೂನ್ಯಕ್ಕಿಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಪೂರ್ತಿ ಓದಿ
07:23 PM (IST) Apr 05

34.17 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಜಿಲ್ಲಾಧಿಕಾರಿ ಜಗದೀಶ್‌

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ.34.17 ಕೋಟಿ ಅಂದಾಜು ಮೌಲ್ಯದ ಒಟ್ಟು 12ಎಕರೆ 0.25 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು. 

ಪೂರ್ತಿ ಓದಿ
06:47 PM (IST) Apr 05

ನಿತ್ಯ 1 ಗಂಟೆ ಮೊಬೈಲ್ ಆಫ್ ಮಾಡಿ ನಿಮ್ಮ ಜತೆ ಬೆರೆಯಿರಿ: ನಟ ರವಿಚಂದ್ರನ್

ಜೀವನದ ಪ್ರತಿ ಘಳಿಗೆಯನ್ನು ಆಸ್ವಾದಿಸುತ್ತಲೇ ಪ್ರೀತಿ, ಸ್ನೇಹ ಮತ್ತು ವಿದ್ಯೆಗೆ ನಾವು ತಲೆಬಾಗಬೇಕು ಮತ್ತು ಮಹಿಳೆಯರ ಬಗ್ಗೆ ಗೌರವದಿಂದ ಇರಬೇಕು, ಆಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ ಎಂದು ನಟ ರವಿಚಂದ್ರನ್ ಹೇಳಿದರು. 

ಪೂರ್ತಿ ಓದಿ
02:56 PM (IST) Apr 05

ಏಪ್ರಿಲ್ 15 ರಿಂದ ಅನಿರ್ಧಷ್ಟಾವಧಿ ಲಾರಿ ಮುಷ್ಕರ, ರಾಜ್ಯಕ್ಕೆ ಬೇರೆ ಲಾರಿ ಎಂಟ್ರಿ ಇಲ್ಲ!

ಡೀಸೆಲ್ ದರ ಏರಿಕೆ ವಿರೋಧಿಸಿ ಏಪ್ರಿಲ್ 15 ರಿಂದ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ಟ್ರಾನ್ಸ್ಪೋರ್ಟ್ ಸಂಪೂರ್ಣ ಬಂದ್ ಆಗಲಿದೆ.

ಪೂರ್ತಿ ಓದಿ
02:17 PM (IST) Apr 05

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಕೆಲಸ ಕಳೆದುಕೊಂಡ ಮಗ-ಸೊಸೆ; ಶಾಕ್‌ನಿಮದ ತಾಯಿ ಸಾವು!

Burdwan News: ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಗ ಮತ್ತು ಸೊಸೆ ಒಟ್ಟಿಗೆ ಕೆಲಸ ಕಳೆದುಕೊಂಡರು. ಮನೆಯ ಮಗ ಮತ್ತು ಸೊಸೆಯ ಕೆಲಸ ಹೋದ ನೋವನ್ನು ತಡೆಯಲಾರದೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪೂರ್ತಿ ಓದಿ
01:35 PM (IST) Apr 05

ಪೆನಾಲ್ಟಿಗಳಿಂದ ತಪ್ಪಿಸಿಕೊಳ್ಳಿ..ಕರ್ನಾಟಕದ ಹೊರಗೆ ರಿಜಿಸ್ಟರ್‌ ಆದ ವಾಹನಗಳು ಮಾಡಬೇಕಾಗಿರೋದೇನು?

ಕರ್ನಾಟಕಕ್ಕೆ ಬೇರೆ ರಾಜ್ಯದ ವಾಹನ ತರುವ ಮುನ್ನ ನಿಯಮಗಳೇನು? ಮರು ನೋಂದಣಿ, ತೆರಿಗೆ ಪಾವತಿ, NOC ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.

ಪೂರ್ತಿ ಓದಿ
11:55 AM (IST) Apr 05

ಮಮತಾ ಬ್ಯಾನರ್ಜಿಗೆ ಮುಖಭಂಗ: ಹೌರಾದಲ್ಲಿ ರಾಮನವಮಿ ಮೆರವಣಿಗೆಗೆ ಅನುಮತಿ ನೀಡಿದ ಹೈಕೋರ್ಟ್‌!

ಕಲ್ಕತ್ತಾ ಹೈಕೋರ್ಟ್ ಅಂಜನಿ ಪುತ್ರ ಸೇನೆಗೆ ಹೌರಾದಲ್ಲಿ ರಾಮ ನವಮಿ ಮೆರವಣಿಗೆ ನಡೆಸಲು ಅನುಮತಿ ನೀಡಿದೆ. ಪೊಲೀಸರು ಭದ್ರತಾ ಕಾರಣಗಳಿಂದ ನಿರಾಕರಿಸಿದ್ದರೂ, ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದೆ.

ಪೂರ್ತಿ ಓದಿ
11:11 AM (IST) Apr 05

Kancha Gachibowli row: ಬೀದಿ ನಾಯಿಗಳ ದಾಳಿಗೆ ಬಲಿಯಾದ ಚುಕ್ಕೆ ಜಿಂಕೆ!

ತೆಲಂಗಾಣ ಸರ್ಕಾರವು ಹೈದರಾಬಾದ್ ವಿವಿಯ ಬಳಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ. ಇದೇ ವೇಳೆ ವಿವಿ ಆವರಣದಲ್ಲಿ ನಾಯಿಗಳು ಜಿಂಕೆಯನ್ನು ಕೊಂದಿವೆ.

ಪೂರ್ತಿ ಓದಿ
10:39 AM (IST) Apr 05

ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾದ ಪವನ್‌ ಕಲ್ಯಾಣ್‌ ಅಭಿಮಾನಿಯ ಗಿಫ್ಟ್‌!

ಯುವ ಅಭಿಮಾನಿಯೊಬ್ಬರು ರಕ್ತವನ್ನು ಬಳಸಿ ಪವನ್ ಕಲ್ಯಾಣ್ ಅವರ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟ ಹರಿಚರಣ್ ಎಂಬ ವಿದ್ಯಾರ್ಥಿ ಈ ವಿಶೇಷ ಗೌರವ ಸಲ್ಲಿಸಿದ್ದಾರೆ. ಈ ಕಲಾಕೃತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ
10:07 AM (IST) Apr 05

ಅಮೆರಿಕ-ಚೀನಾ ಟ್ರೇಡ್‌ ವಾರ್‌ ನಡುವೆ, ಮೂರು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾತೈಲದ ಬೆಲೆ!

ಚೀನಾ ಮತ್ತು ಅಮೆರಿಕದ ಟ್ರೇಡ್‌ ವಾರ್‌ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೇ. 7ರಷ್ಟು ಕುಸಿದಿದೆ. ಹೂಡಿಕೆದಾರರು ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಅಂದಾಜಿಸಿದ್ದು, ಜಾಗತಿಕ ಷೇರು ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿವೆ.

ಪೂರ್ತಿ ಓದಿ
09:15 AM (IST) Apr 05

ಕಲಬುರಗಿಯಲ್ಲಿ ಭೀಕರ ಅಪಘಾತ, ಬಾಗಲಕೋಟೆಯ ಐವರು ಸ್ಥಳದಲ್ಲೇ ಸಾವು!

ಕಲಬುರಗಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದರ್ಗಾಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದ ಟಿಟಿ ವಾಹನವು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ
08:50 AM (IST) Apr 05

ತಿಲಕ್‌ ವರ್ಮ ರಿಟೈರ್ಡ್‌ ಹರ್ಟ್‌ ಮಾಡಿ ಸರಿಯಾಗಿ ಉಗಿಸಿಕೊಂಡ ಮುಂಬೈ ಇಂಡಿಯನ್ಸ್‌ ಮ್ಯಾನೇಜ್‌ಮೆಂಟ್‌!

ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿದೆ. ತಿಲಕ್ ವರ್ಮರನ್ನು ರಿಟೈರ್ಡ್ ಔಟ್ ಮಾಡಿದ್ದು ಟೀಕೆಗೆ ಕಾರಣವಾಗಿದೆ, ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಮತ್ತು ವಿಶ್ಲೇಷಕರು ಮುಂಬೈ ಇಂಡಿಯನ್ಸ್ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ