Karnatata Latest News Live: ನಾಳೆ ಅರ್ಧ ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತ

ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಆಪ್ತರು ಎನ್ನಲಾದ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂಬಸ್ಸಿ ಗ್ರೂಪ್ನ ಮುಖ್ಯಸ್ಥರು, ನಿರ್ದೇಶಕರು ಹಾಗೂ ಎಲೆಕ್ಟ್ರಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಶೋಧ ಮುಂದುವರೆಸಿದ್ದಾರೆ. ಕೆಲವು ವ್ಯವಹಾರಗಳ ಹಿನ್ನೆಲೆಯಲ್ಲಿ ಐಟಿ ಸರ್ವೇ ನಡೆಸಲಾಗಿದೆ ಎನ್ನಲಾಗಿದೆ. ಜು.28ರಂದು ಸಹ ಇಬ್ಬರು ಎಲೆಕ್ಟಿಕ್ ಗುತ್ತಿಗೆದಾರರ ಮನೆ, ಕಚೇರಿಗಳು ಸೇರಿ 12 ಕಡೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಇದರ ಮುಂದುವರೆದ ಭಾಗವಾಗಿ ಬುಧವಾರವೂ ನಗರದ ಕೆಲ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Karnatata Latest News Liveನಾಳೆ ಅರ್ಧ ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತ
Karnatata Latest News Liveಬಾಲಕನ ಕಿಡ್ನಾಪ್ ಮಾಡಿ ₹5 ಲಕ್ಷಕ್ಕೆ ಡಿಮ್ಯಾಂಡ್; ಪೊಲೀಸರಿಗೆ ಹೇಳಿದ್ದಕ್ಕೆ ಮಗನ ಕೊಂದು ಎಸೆದು ಹೋದರು!
ಬೆಂಗಳೂರಿನಲ್ಲಿ ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಅತ್ಯಂತ ಅಮಾನುಷ ಘಟನೆಗೆ ಸಾಕ್ಷಿ ಆಗಿದ್ದಾರೆ.
Karnatata Latest News Liveನಟ ಪ್ರಥಮ್ ಮುಖಕ್ಕೆ ಮಸಿ ಬಳಿದ ಹೋರಾಟಗಾರರು; ಪೊಲೀಸರ ಮುಂದೆ ನಡೆದೇ ಹೋಯ್ತು ಹೈಡ್ರಾಮಾ!
ನಟ ಪ್ರಥಮ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರು ನಟನ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಘಟನೆಯು ಪೊಲೀಸ್ ಠಾಣೆಯ ಮುಂದೆಯೇ ನಡೆದಿದ್ದು, ವೈರಲ್ ಆಗಿದೆ. ಪ್ರತಿಭಟನಾಕಾರರು ಪ್ರಥಮ್ ಬಂಧನಕ್ಕೆ ಆಗ್ರಹಿಸಿದ್ದಾರೆ.
Karnatata Latest News Liveಅನಾಮಿಕ ವ್ಯಕ್ತಿ ಹೆಣದ ಮೇಲಿನ ಹಣ, ಚಿನ್ನ ಕದಿಯುತ್ತಿದ್ದ - ಧರ್ಮಸ್ಥಳ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ್ ಗೌಡ!
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿರುವ ಅನಾಮಿಕ ದೂರುದಾರನ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಮಾಹಿತಿ ನೀಡಿದ್ದಾರೆ. ದೂರುದಾರನ ನಟೋರಿಯಸ್ ಕೃತ್ಯಗಳಿಂದಾಗಿ ಧರ್ಮಸ್ಥಳದಿಂದ ಹೊರಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
Karnatata Latest News Liveಶೋಧ ಕಾರ್ಯ ವೇಳೆ ಸಿಕ್ಕ ಕಾರ್ಡ್‌ಗಳ ರಹಸ್ಯ ಬಯಲು, ಡೆಬಿಟ್ ಕಾರ್ಡ್ ಯಾರದ್ದೆಂದು ಪತ್ತೆ ಹಚ್ಚಿಸ ಎಸ್ಐಟಿ
Karnatata Latest News Liveಧರ್ಮಸ್ಥಳ ಸಮಾಧಿ ರಹಸ್ಯ - 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ
Karnatata Latest News Liveಧರ್ಮಸ್ಥಳ ಸಮಾಧಿ ಪ್ರಕರಣ, ಸತ್ತ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿದ ಎಸ್ ಐ ಟಿ
Karnatata Latest News Liveಚಿಕ್ಕಮಗಳೂರು - ಕುಡಿದ ಮತ್ತಿನಲ್ಲಿ ತಾಯಿ ಕೊಂದು ಬೆಂಕಿ ಇಟ್ಟ ಪಾಪಿ ಪುತ್ರ, ಅಪ್ಪನಿಗೂ ಹಿಂಸೆ ಕೊಟ್ಟ!
Karnatata Latest News Liveಪತ್ನಿಯನ್ನ ಕೊಂದು ಆತ್ಮ*ತ್ಯೆ ಕತೆ ಕಟ್ಟಿದನಾ ಗಂಡ? ಮಗಳ ಸಾವಿನ ಬಗ್ಗೆ ಅನುಮಾನಗೊಂಡು ತಂದೆ ಎಫ್‌ಐಆರ್ ದಾಖಲಿಸುತ್ತಿದ್ದಂತೆ ಪತಿ ಪರಾರಿ!
Karnatata Latest News Liveಧರ್ಮಸ್ಥಳ ಸಮಾಧಿ ಪ್ರಕರಣ - 6 ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ
Karnatata Latest News Live'ಖರ್ಗೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ಲವಲ್ಲ?' - ಸತೀಶ್ ಜಾರಕಿಹೊಳಿ ಕುತೂಹಲಕಾರಿ ಹೇಳಿಕೆ
Karnatata Latest News Liveಧರ್ಮಸ್ಥಳ ಸಮಾಧಿ ಪ್ರಕರಣ - 9ನೇ ಪಾಯಿಂಟ್ ನಿಂದ ಶವ ಸಿಗೋದು ಖಚಿತ ಅನಾಮಿಕನ ಭಾರೀ ವಿಶ್ವಾಸ!
Karnatata Latest News Liveಪಿಯುಸಿ ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ! ಗ್ಯಾರೆಂಟಿ ಖ್ಯಾತಿಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ
ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದ್ದ ಸುಮಾರು 65 ಸಾವಿರ ಶಿಕ್ಷಕರಿಗೆ ನಾಲ್ಕು ತಿಂಗಳಾದರೂ ಸಂಭಾವನೆ ಸಿಕ್ಕಿಲ್ಲ. ಒಟ್ಟು ₹75 ಕೋಟಿ ಬಾಕಿ ಉಳಿದಿದ್ದು, ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnatata Latest News Liveಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆ! ಆಗಸ್ಟ್ 1 ರಿಂದ ದುಬಾರಿಯಾಗಲಿದೆ ಆಟೋ ಪ್ರಯಾಣ!
Karnatata Latest News Liveಕೃಷಿಯಲ್ಲಿ ಅತಿಯಾದ ಯೂರಿಯಾ ಬಳಕೆ, ತುಂಗಭದ್ರಾ ಅಚ್ಚುಕಟ್ಟು ಕ್ಯಾನ್ಸರ್ ಹಬ್!?
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕ್ಯಾನ್ಸರ್ ಹಬ್ ಆಗುವ ಭೀತಿ ಎದುರಾಗಿದೆ.
Karnatata Latest News Liveಗಾಯತ್ರಿ ಕಾಫಿ ಎಂಬ ಹಳೇ ಬೇರಿನಲ್ಲಿ ಚಿಗುರೊಡೆದ ಗೆಟ್ ಕಾಫಿ!
Karnatata Latest News LiveCRIB discovered - ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ!
ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಜಾಗತಿಕವಾಗಿ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯದ ಸಂಶೋಧನೆಯಿಂದ ಈ ಅಪರೂಪದ 'ಸಿಆರ್‌ಐಬಿ' ಗುಂಪು ಬೆಳಕಿಗೆ ಬಂದಿದೆ.
Karnatata Latest News Liveಕೃಷಿ ಮೇಳದಲ್ಲಿ ‘ನೀಲಿ’ ಅರಿಶಿಣ ಸೇರಿ 5 ಹೊಸ ತಳಿ ಲೋಕಾರ್ಪಣೆ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13 ರಿಂದ 16 ರವರೆಗೂ ಆಯೋಜಿಸಲಿರುವ ಬಹುನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಉತ್ಕೃಷ್ಟ ‘ನೀಲಿ ತಿರುಳ’ನ್ನು ಹೊಂದಿರುವ ಅರಿಶಿಣ ಸೇರಿದಂತೆ ಐದು ನೂತನ ತಳಿಗಳು ಲೋಕಾರ್ಪಣೆಯಾಗಲಿವೆ.