- Home
- News
- State
- Karnataka News Live: Hassan - 45 ವರ್ಷಗಳ ಬಳಿಕ ಒಂದಾದ ಎ.ವಿ ಶಿವಲಿಂಗಮ್ಮ ಪ್ರೌಢಶಾಲೆಯ ಗುರುಗಳು ಶಿಷ್ಯರು
Karnataka News Live: Hassan - 45 ವರ್ಷಗಳ ಬಳಿಕ ಒಂದಾದ ಎ.ವಿ ಶಿವಲಿಂಗಮ್ಮ ಪ್ರೌಢಶಾಲೆಯ ಗುರುಗಳು ಶಿಷ್ಯರು

ಬೆಂಗಳೂರು: ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ಆರ್)ಗೆ ಸಂಪರ್ಕಿಸುವ ಪ್ರಸ್ತಾವಿತ ನೈಸ್-ಪಿಆರ್ಆರ್ ಇಂಟಿಗ್ರೇಶನ್ ಲಿಂಕ್ ರಸ್ತೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಮಾದಾವರ, ಶ್ರೀಕಂಠ ಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ ಹಾಗೂ ತಮ್ಮೇನಹಳ್ಳಿ ಭಾಗದ ನಿವಾಸಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದರು.
ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ನೂರಾರು ನಿವಾಸಿಗಳು ಪಾಲ್ಗೊಂಡು, ಪ್ರಸ್ತಾವಿತ ರಸ್ತೆ ಯೋಜನೆಯಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಲಿಂಕ್ ರಸ್ತೆ ನಿರ್ಮಾಣದಿಂದ ಈಗಾಗಲೇ ಅಭಿವೃದ್ಧಿಯಾಗಿರುವ ವಸತಿ ಬಡಾವಣೆ ಗಳು ಹಾಗೂ ಸಾವಿರಾರು ಮನೆ, ನಿವೇಶನಗಳು ಹಾನಿಗೊಳ ಗಾಗುವ ಸಾಧ್ಯತೆ ಇದೆ. ಯೋಜನೆ ಜಾರಿ ಯಾದರೆ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮನೆ, ನಿವೇಶನ ಮತ್ತು ಭೂಮಿ ಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಈ.ಕೃಷ್ಣಪ್ಪ, ಜವರಾಯಿಗೌಡ, ಅಂದಾನಪ್ಪ, ರಮೇಶ್ಗೌಡ, ಮುನಿಸ್ವಾಮಪ್ಪ, ವೇಣುಗೋಪಾಲ್, ಕಿರಣ್ ಕುಮಾರ್, ವೇಣು ಕುಮಾರ್, ಅಪ್ಪಿರಾಜು, ಶ್ರೀನಿವಾಸ್, ಚಂದ್ರಶೇಖರ್, ಮಂಜುನಾಥ್ ಸೇರಿ ಹಲವರು ಇದ್ದರು.
Karnataka News Live 28 September 2026 Hassan - 45 ವರ್ಷಗಳ ಬಳಿಕ ಒಂದಾದ ಎ.ವಿ ಶಿವಲಿಂಗಮ್ಮ ಪ್ರೌಢಶಾಲೆಯ ಗುರುಗಳು ಶಿಷ್ಯರು
Karnataka News Live 28 September 2026 ಅಂಬರೀಶ್ ಅವರಂತೆ ರಾಜಕೀಯ ಬರಲು, ನಟ ವಿಷ್ಣುವರ್ಧನ್‌ಗೆ ಇತ್ತು ಗೊಂದಲ!
ನಟ ವಿಷ್ಣುವರ್ಧನ ಅವರ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ಪತ್ರಕರ್ತರು ಅವರ ಒಡನಾಟವನ್ನು ಸ್ಮರಿಸಿದರು. ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿಯಿದ್ದರೂ, ಅಭಿಮಾನಿಗಳು ಮತ್ತು ಸಿನಿಮಾವನ್ನು ಕಳೆದುಕೊಳ್ಳುವ ಭೀತಿಯಿಂದ ಆ ಕ್ಷೇತ್ರಕ್ಕೆ ಬರಲಿಲ್ಲ. ಬದಲಾಗಿ ಅವರು ಲೌಕಿಕ ಮತ್ತು ದೈವಿಕ ವಿಚಾರಗಳತ್ತ ವಾಲಿದರು ಎಂದು ಸಂಪಾದಕರು ತಿಳಿಸಿದರು.
Karnataka News Live 28 September 2026 ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ - ಉಲ್ಲಾಳ ಠಾಣೆ ಇನ್‌ಸ್ಪೆಕ್ಟರ್‌ಗೆ ಕೋರ್ಟ್ ಎಚ್ಚರಿಕೆ
Karnataka News Live 28 September 2026 ಕೇರಳದ ಮಾದರಿಯಲ್ಲಿ ಕರ್ನಾಟಕ ಕರಾವಳಿಗೂ ವಾಟರ್ ಮೆಟ್ರೋ - ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಕೇರಳದ ಮಾದರಿಯಲ್ಲಿ ಕರ್ನಾಟಕ ಕರಾವಳಿಯಲ್ಲೂ ವಾಟರ್ ಮೆಟ್ರೋ ಆರಂಭಿಸಲು ಸರ್ಕಾರ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜೊತೆಗೆ, ಕರಾವಳಿ ಅಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾವಣೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ.
Karnataka News Live 28 September 2026 Dharwad - ಮಳೆನೀರು ಹಿಡಿದು ಅಂತರ್ಜಲ ಹೆಚ್ಚಿಸಿದ ವಾಲ್ಮಿ; 1,000 ಲಕ್ಷ ಲೀ. ನೀರು ಸಂಗ್ರಹ
ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣದ ಮೂಲಕ ಜಲಸಂರಕ್ಷಣೆಯಲ್ಲಿ ಮಾದರಿಯಾಗಿದೆ. ಕೆರೆ ಪುನಃಶ್ಚೇತನ, ಇಂಗುಕೆರೆ ಹಾಗೂ ಮರುಪೂರಣ ಗುಂಡಿಗಳ ಮೂಲಕ 1,000 ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಸಂರಕ್ಷಿಸಿದೆ.
Karnataka News Live 28 September 2026 ತೀವ್ರ ಬರಗಾಲ ಭೀತಿ - ಜಾನುವಾರುಗಳ ರಕ್ಷಣೆಗೆ 500 ಎಕರೆಯಲ್ಲಿ ಮೇವು ಬೆಳೆಯಲು ಚಿಂತನೆ
Karnataka News Live 28 September 2026 ಬೆಂಗಳೂರಿನ ಮಾರುತಿ ಮಂದಿರ ಬಿಎಂಟಿಸಿ ಬಸ್ ನಿಲ್ದಾಣವೀಗ ಫುಡ್‌ಸ್ಟ್ರೀಟ್!
ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದ ಬಸ್ ನಿಲ್ದಾಣಗಳು ಸಂಜೆಯಾಗುತ್ತಿದ್ದಂತೆ ಫುಡ್‌ಸ್ಟ್ರೀಟ್ ಆಗಿ ಮಾರ್ಪಡುತ್ತಿದ್ದು, ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಪರದಾಡುವಂತಾಗಿದೆ.