11:17 PM (IST) Jul 27

karnataka news live 27th july 2025 Pratham Rakshak Bullet controversy - ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ಪ್ರಥಮ್, ರಕ್ಷಕ್ ಬುಲೆಟ್!

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ಷಕ್ ಬುಲೆಟ್ ವಿರುದ್ಧದ ಆರೋಪಗಳು ಮತ್ತು ಪ್ರಥಮ್‌ನ ಜೀವ ಬೆದರಿಕೆ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ. 

Read Full Story
10:32 PM (IST) Jul 27

karnataka news live 27th july 2025 ಚಿಕ್ಕಮಗಳೂರು - ಕಾಡಾನೆ ದಾಳಿಗೆ ಮತ್ತೊಂದು ಬಲಿ; ನಾಲ್ಕು ದಿನದಲ್ಲಿ ಇಬ್ಬರು ಸಾವು, ಮಲೆನಾಡಿಗರು ಆಕ್ರೋಶ, ನಾಳೆ ಬಾಳೆಹೊನ್ನೂರು ಬಂದ್

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸುಬ್ರಾಯಗೌಡ ಬಲಿ. ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಲಿ. ಕಾಡಾನೆ ಹಾವಳಿಗೆ ಆತಂಕಿತರಾಗಿರುವ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ನಾಳೆ ಬಾಳೆಹೊನ್ನೂರು ಬಂದ್‌ಗೆ ಕರೆ ನೀಡಿದ್ದಾರೆ.
Read Full Story
09:32 PM (IST) Jul 27

karnataka news live 27th july 2025 ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಶಾಕಿಂಗ್ ಕೇಸ್, ವಂಚಕರಿಗೆ ಪೊಲೀಸರಿಂದಲೇ ಸಾಥ್!?

ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂಪಾಯಿ ವಂಚಿಸಲಾಗಿದೆ. ಆಘಾತಕಾರಿಯಾಗಿ, ಈ ವಂಚನೆಯಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ.
Read Full Story
09:00 PM (IST) Jul 27

karnataka news live 27th july 2025 Kundapra Kannada Habba-2025 - ಕುಂದಾಪುರ ಪ್ರವಾಸಿ ತಾಣವನ್ನಾಗಿಸುವುದು ಮೊದಲ ಆದ್ಯತೆ - ಡಿಸಿಎಂ ಭರವಸೆ

ಕುಂದಾಪುರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ವಿಮಾನ ನಿಲ್ದಾಣದ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. 

Read Full Story
08:09 PM (IST) Jul 27

karnataka news live 27th july 2025 AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ!

ಮಲ್ಲಿಕಾರ್ಜುನ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read Full Story
07:52 PM (IST) Jul 27

karnataka news live 27th july 2025 ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶದಲ್ಲಿ ಆರೆಸ್ಸೆಸ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಬೆಳಗಾವಿಯಲ್ಲಿ ನಡೆದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವಿಸುವುದಿಲ್ಲ, ಕೇವಲ ತೋರಿಕೆಗೆ ದೇಶಭಕ್ತಿಯ ಮಾತನಾಡುತ್ತಾರೆ ಎಂದು ಆರೋಪಿಸಿದರು.

Read Full Story
07:21 PM (IST) Jul 27

karnataka news live 27th july 2025 ಇವರನ್ನ ಮದ್ವೆಯಾದ ಗಂಡನ ಜೀವನ ಅಧೋಗತಿ - ಅಮೃತಾ & ರಮೋಲಾ ಲೆಕ್ಕಾಚಾರಕ್ಕೆ ಹುಡುಗರೆಲ್ಲಾ ಸುಸ್ತು!

ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ರಮೋಲಾ ಮತ್ತು ಅಮೃತಾ ತಮ್ಮ ತಿಂಗಳ ಖರ್ಚುವೆಷ್ಟು ಎಂದು ಬಹಿರಂಗಪಡಿಸಿದ್ದಾರೆ. ರಮೋಲಾ ತಿಂಗಳಿಗೆ 55 ಸಾವಿರ ರೂ. ಖರ್ಚು ಮಾಡಿದರೆ, ಅಮೃತಾ 1 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡುತ್ತಾರೆ.
Read Full Story
07:19 PM (IST) Jul 27

karnataka news live 27th july 2025 ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ - ಮನೆ, ಆಸ್ತಿ, ಹೆಂಡತಿ ಆಭರಣ ಮಾರಿ 70,000 ಉಚಿತ ಹೆಲ್ಮೆಟ್ ವಿತರಣೆ!

ಗೆಳೆಯನ ಸಾವಿನಿಂದ ಜಾಗೃತರಾದ ರಾಘವೇಂದ್ರ ಕುಮಾರ್, 'ಹೆಲ್ಮೆಟ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ. ತಮ್ಮ ಆಸ್ತಿಯನ್ನೇ ಮಾರಿ 70,000ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಜಾಗೃತಿಗಾಗಿ ದೇಶಾದ್ಯಂತ ಸಂಚರಿಸುತ್ತಿರುವ ರಾಘವೇಂದ್ರ, ಹೆಲ್ಮೆಟ್ ಬ್ಯಾಂಕ್‌ ಸ್ಥಾಪಿಸುತ್ತಿದ್ದಾರೆ.

Read Full Story
07:00 PM (IST) Jul 27

karnataka news live 27th july 2025 'ತೀರ್ಮಾನ ಹೈಕಮಾಂಡ್‌ನದ್ದು..' ಕರ್ನಾಟಕಕ್ಕೆ ದಲಿತ ಸಿಎಂ ಫಿಕ್ಸ್? ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿಕೆ ಸಂಚಲನ!

ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದೆ. ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಅವರು ದಲಿತ ಸಿಎಂ ಬಗ್ಗೆ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದಿದ್ದಾರೆ.
Read Full Story
06:20 PM (IST) Jul 27

karnataka news live 27th july 2025 ಶಿವಮೊಗ್ಗದಲ್ಲಿ ಸಸ್ಪೆನ್ಸ್ ಮರ್ಡರ್ - ಅಕ್ಕ-ಪಕ್ಕದಲ್ಲಿ ಮಲಗಿದ್ದ ಅಣ್ಣನ ಕೊಲೆ, ತಮ್ಮ ನಾಪತ್ತೆ!

ಶಿವಮೊಗ್ಗದಲ್ಲಿ ಅಣ್ಣನ ಭೀಕರ ಕೊಲೆಯಾಗಿದ್ದು, ತಮ್ಮ ನಾಪತ್ತೆಯಾಗಿದ್ದಾನೆ. ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read Full Story
05:56 PM (IST) Jul 27

karnataka news live 27th july 2025 ಮೈಸೂರಿನಲ್ಲಿ ಡ್ರಗ್ಸ್ ತಯಾರಿಕ ಘಟಕ ಪತ್ತೆ ಪ್ರಕರಣ; 'ಕರ್ನಾಟಕಲ್ಲೇ ನಡೆತಿರೋದು ಆತಂಕಕಾರಿ' - ಗೃಹ ಸಚಿವ

ಮೈಸೂರಿನಲ್ಲಿ ಭಾರೀ ಪ್ರಮಾಣದ MDMA ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿದ್ದು, ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರಿಂದ ಲಭ್ಯವಾದ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದ್ದು, ಕರ್ನಾಟಕ ಪೊಲೀಸರು ತನಿಖೆ ನಡೆಸಲಿದ್ದಾರೆ.
Read Full Story
05:18 PM (IST) Jul 27

karnataka news live 27th july 2025 ಬ್ರೆಜ್ಜಾಗಿಂತ ದೊಡ್ಡದು, ಸೆ.3ಕ್ಕೆ ಮಾರುತಿ ಸುಜುಕಿ ಮಿಡ್‌ಸೈಜ್ ಎಸ್‌ಯುವಿ ಕಾರು ಲಾಂಚ್

ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಹೊಸ ಮಿಡ್‌ಸೈಜ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ ಕಾರಿಗಿಂತ ದೊಡ್ಡದು, ಗ್ರ್ಯಾಂಡ್ ವಿಟಾರ ಕಾರಿಗಿಂತ ಚಿಕ್ಕದು, ಜೊತೆಗೆ ಕಡಿಮೆ ಬೆಲೆಯಲ್ಲಿ ಈ ಕಾರು ಬಿಡುಗಡೆಯಗುತ್ತಿದೆ.

Read Full Story
05:06 PM (IST) Jul 27

karnataka news live 27th july 2025 ದರ್ಶನ್ ಅಭಿಮಾನಿಗಳ ಮುಂದೆ ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿದೆ; ನಟ ಒಳ್ಳೆ ಹುಡುಗ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ದಾಳಿ ನಡೆದಿದೆ. ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, 15-20 ಜನರು ಮಾರಕಾಸ್ತ್ರಗಳೊಂದಿಗೆ ಪ್ರಥಮ್‌ರನ್ನು ಬೆದರಿಸಿದ್ದಾರೆ. ನಟ ಪ್ರಥಮ್ ಅವರ ಮುಂದೆ ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿ ಹೊರಗೆ ಬಂದಿದ್ದಾರೆ. 

Read Full Story
05:04 PM (IST) Jul 27

karnataka news live 27th july 2025 ಮ್ಯಾಂಚೆಸ್ಟರ್‌ ಟೆಸ್ಟ್‌ - 700 ರನ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟ ಶುಭ್‌ಮನ್ ಗಿಲ್

ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹಾಗೂ ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ.

Read Full Story
04:47 PM (IST) Jul 27

karnataka news live 27th july 2025 ಎಐ ಟೆಕ್‌ನಿಂದ ಟಾಟಾ ಕಂಪನಿಯಲ್ಲಿ 12,000 ಉದ್ಯೋಗ ಕಡಿತ, ಯಾರ ಜಾಬ್‌ಗೆ ಕತ್ತರಿ?

ದಿಗ್ಗಜ ಕಂಪನಿಗಳ ಬಳಿಕ ಇದೀಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುತ್ತಿದೆ. ಈ ಕುರಿತು ಕಂಪನಿ ಸಿಇಒ ಹೇಳಿದ್ದಾರೆ.

Read Full Story
03:58 PM (IST) Jul 27

karnataka news live 27th july 2025 ವಿಜ್ಞಾನಿಗಳ ಅಚ್ಚರಿಗೊಳಿಸಿದ ಘಟನೆ, ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ

ಸೌರವ್ಯೂಹದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಖಗೋಳಶಾಸ್ತ್ರಜ್ಞರ ಅಚ್ಚರಿಗೊಳಿಸಿದೆ. ನೆಪ್ಚೂನ್ ಗ್ರಹದ ಜೊತೆ ವಿಚಿತ್ರ ವಸ್ತುವೊಂದು ಡ್ಯಾನ್ಸ್ ಮಾಡುತ್ತಿರುವುದ ಪತ್ತೆಯಾಗಿದೆ.

Read Full Story
03:42 PM (IST) Jul 27

karnataka news live 27th july 2025 ಕರಾವಳಿ ದೈವದ ಪವಾಡ; ಕಡಿಯಾಳಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದು ಮೂರ್ಛೆಹೋಗಿ, ಸಿಕ್ಕಿಬಿದ್ದ ಕಳ್ಳರು!

ಕರ್ನಾಟಕದ ಕರಾವಳಿಯಲ್ಲಿ ಮತ್ತೊಂದು ದೈವದ ಪವಾಡ ಘಟನೆಯೊಂದು ನಡೆದಿದೆ. ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಒಬ್ಬ ಕಳ್ಳ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story
03:29 PM (IST) Jul 27

karnataka news live 27th july 2025 ಚಿಕನ್​ ಪ್ರಿಯರಿಗೆ ಮರ್ಮಾಘಾತ - ಎಂಪೈರ್​ ರೆಸ್ಟೋರೆಂಟ್​ ಕಬಾಬ್​ ತಿಂದೋರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ

ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್​ ಒಂದರಲ್ಲಿ ಬಳಲಾಗ್ತಿರೋ ಚಿಕನ್​ ಕಬಾಬ್​ ಅಸುಕ್ಷಿತವಾಗಿರುವುದಾಗಿ ರಾಜ್ಯ ಆಹಾರ ಇಲಾಖೆ ನೋಟಿಸ್​ ಜಾರಿ ಮಾಡಿದೆ. ವರದಿಯಲ್ಲಿ ಕಂಡು ಬಂದ ಸತ್ಯವೇನು?

Read Full Story
03:24 PM (IST) Jul 27

karnataka news live 27th july 2025 ವಾಶಿಂಗ್ ಮಷಿನ್‌ಗೂ ಕಾಲಿಟ್ಟ ಎಐ ತಂತ್ರಜ್ಞಾನ, 20 ವರ್ಷ ವಾರೆಂಟಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದೀಗ ವಾಶಿಂಗ್ ಮಶಿನ್‌ನಲ್ಲೂೂ ಎಐ ತಂತ್ರಜ್ಞಾನದ ಬಳಸಿಕೊಳ್ಳಲಾಗಿದೆ. ಇದು ನೀರು ಶುದ್ಧೀಕರಿಸಿ ಬಟ್ಟೆ ತೊಳೆಯಲಿದೆ.ಬರೋಬ್ಬರಿ 20 ವರ್ಷ ವಾರೆಂಟಿ ನೀಡುತ್ತಿದೆ.

Read Full Story
02:49 PM (IST) Jul 27

karnataka news live 27th july 2025 ತಮ್ಮನಿಗೆ ಹೆಚ್‌ಐವಿ ಪಾಸಿಟಿವ್; ಮನೆ ಮರ್ಯಾದೆ ಹೋಗುತ್ತೆಂದು ಅಕ್ಕ-ಭಾವ ಸೇರಿ ಕುತ್ತಿಗೆ ಹಿಸುಕಿ ಕೊಂದೇಬಿಟ್ರು!

ಚಿತ್ರದುರ್ಗ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತ ಯುವಕನನ್ನು ಆತನ ಅಕ್ಕ ಮತ್ತು ಭಾವ ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ. ಇದೊಂದು ಮರ್ಯಾದಾ ಹತ್ಯೆಯಾಗಿದೆ. ಮೃತ ಯುವಕನ ಕತ್ತಿನ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story