07:35 AM (IST) Oct 02

Karnataka News Live 2 October 2026 ಆಲಮಟ್ಟಿ ನಿಲ್ದಾಣಕ್ಕೆ ಅಂಡರ್‌ಪಾಸ್; ಬೇನಾಳ, ವಂದಾಲದಲ್ಲಿ ಮೂಲಸೌಕರ್ಯಕ್ಕೆ ಮನವಿ ಸಲ್ಲಿಕೆ

ಆಲಮಟ್ಟಿ, ಬೇನಾಳ ಮತ್ತು ವಂದಾಲ ರೈಲ್ವೆ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ನೈಋತ್ಯ ರೈಲ್ವೆ ಜಿಎಂಗೆ ಮನವಿ ಸಲ್ಲಿಸಲಾಗಿದೆ. ಆಲಮಟ್ಟಿಯಲ್ಲಿ ಅಂಡರ್‌ ಪಾಸ್ ನಿರ್ಮಾಣ ಹಾಗೂ ಪ್ರಮುಖ ರೈಲುಗಳಿಗೆ ನಿಲುಗಡೆ ಕಲ್ಪಿಸುವಂತೆ ನಿಯೋಗ ಒತ್ತಾಯಿಸಿದೆ.
Read Full Story
07:32 AM (IST) Oct 02

Karnataka News Live 2 October 2026 56 ವರ್ಷಗಳ ಬಳಿಕ ರಾಜ್ಯಕ್ಕೆ ಎದುರಾಯ್ತು ಆತಂಕ - ಮಳೆಗಾಲದಲ್ಲೇ ಉರಿಬಿಸಿಲು ನೀರಿಗೆ ಹಾಹಾಕಾರ! ತಜ್ಞರು ಹೇಳಿದ್ದೇನು?

ರಾಜ್ಯದಲ್ಲಿ ಕಳೆದ 56 ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ ಶೇ.34ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಇದರಿಂದ ಶೇ.90ರಷ್ಟು ತಾಲೂಕುಗಳು ಬರಪೀಡಿತವಾಗಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಎಲ್ ನೀನೋ ಪ್ರಭಾವದಿಂದ ತಾಪಮಾನ ಹೆಚ್ಚಾಗಿ, ಜಲಾಶಯಗಳಲ್ಲಿ ನೀರಿನ ಕೊರತೆಯೂ ಆತಂಕ.

Read Full Story
07:30 AM (IST) Oct 02

Karnataka News Live 2 October 2026 RSS Case ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ನಕಾರ

ಆರ್‌ಎಸ್‌ಎಸ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ. ಮ್ಯಾಜಿಸ್ಟ್ರೇಟ್ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
Read Full Story
07:23 AM (IST) Oct 02

Karnataka News Live 2 October 2026 ವೇದಾವತಿ ನದಿಗೆ ಹರಿಸುತ್ತಿರುವ ವಾಣಿವಿಲಾಸ ಸಾಗರದ ನೀರನ್ನು ತಕ್ಷಣವೇ ನಿಲ್ಲಿಸಲು ಆಗ್ರಹ

ಇತ್ತೀಚೆಗೆ ಉತ್ತಮ ಮಳೆಯಾಗಿ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ವಿವಿ ಸಾಗರ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.
Read Full Story
07:13 AM (IST) Oct 02

Karnataka News Live 2 October 2026 SIR - ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದೆ. ಕಾನೂನಿನ ಪ್ರಕಾರ ಚುನಾವಣಾ ಆಯೋಗ ದೂರು ನೀಡಿದರೆ ಮಾತ್ರ ಪೊಲೀಸರು ತನಿಖೆ ನಡೆಸಲು ಸಾಧ್ಯವಿರುವ ಕಾರಣ ಸರ್ಕಾರ ಈ ಪಟ್ಟು ಹಿಡಿದಿದೆ.

Read Full Story
07:13 AM (IST) Oct 02

Karnataka News Live 2 October 2026 ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ - ಚಾಮರಾಜಪೇಟೆಯಲ್ಲಿ ನಕಲಿ ಹಣ ಚಲಾವಣೆಗೆ ಯತ್ನ

ಚೆನ್ನೈನಲ್ಲಿ 8 ತಿಂಗಳುಗಳ ಕಾಲ ಗೌಪ್ಯವಾಗಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಚಾಮರಾಜಪೇಟೆ ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ತಮಿಳುನಾಡು ಮತ್ತು ತೆಲಂಗಾಣ ಮೂಲದ 7 ಜನ ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
Read Full Story
07:11 AM (IST) Oct 02

Karnataka News Live 2 October 2026 ಮಲೇಷ್ಯಾ ಕನ್ನಡ ಸಂಘದ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ - ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹೆಜ್ಜೆ

ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಮಲೇಷ್ಯಾ ಕನ್ನಡ ಸಂಘದ (MAKASA) ಅಧಿಕೃತ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಈ ವೆಬ್‌ಸೈಟ್ ಕನ್ನಡಿಗರಿಗೆ ಪಾಸ್‌ಪೋರ್ಟ್, ವೀಸಾ, ಉದ್ಯೋಗದ ಮಾಹಿತಿ ಜೊತೆಗೆ ಸಂಸ್ಕೃತಿ ಉಳಿಸುವ ಕಾರ್ಯ ಮಾಡಲಿದೆ. ರವಿ ಹೆಗಡೆ ಮತ್ತು ಭಾವನಾ ಅವರು ಈ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
Read Full Story