05:35 PM (IST) May 18

ಹೀಗ್ಯಾಕೆ ಬರೆದುಕೊಂಡ್ರು ವಿಜಯ ರಾಘವೇಂದ್ರ? ಒಂದು ಮಾತು, ಹತ್ತಾರು ಅರ್ಥ- ಫ್ಯಾನ್ಸ್​ ಕಣ್ಣೀರು...

ನಟ ವಿಜಯ ರಾಘವೇಂದ್ರ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವು ದಿನಗಳ ಹಿಂದೆ ಬರೆದುಕೊಂಡಿರುವ ಪೋಸ್ಟ್​ ವೈರಲ್​ ಆಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಪೂರ್ತಿ ಓದಿ
02:44 PM (IST) May 18

ಬಾಗಲಕೋಟೆಯಲ್ಲಿ ಚಿಂದಿ ಆಯುವ ನೆಪದಲ್ಲಿ ಕಳ್ಳತನ; ನಿರ್ಮಾಣ ಹಂತದ ಮನೆಗಳೇ ಟಾರ್ಗೆಟ್! ದೇವರ ವಿಗ್ರಹವನ್ನೂ ಬಿಡದೇ ದೋಚ್ತಾರೆ!

ಬಾಗಲಕೋಟೆಯಲ್ಲಿ ಚಿಂದಿ ಆಯುವ ನೆಪದಲ್ಲಿ ಮಹಿಳೆಯರ ಗ್ಯಾಂಗ್ ಕಳ್ಳತನ ಮಾಡುತ್ತಿದೆ. ನಿರ್ಮಾಣ ಹಂತದ ಮನೆಗಳು, ಅಂಗಡಿಗಳು ಮತ್ತು ದೇವರ ವಿಗ್ರಹಗಳನ್ನು ಕೂಡಾ ಕಳವು ಮಾಡುತ್ತಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೂರ್ತಿ ಓದಿ
01:50 PM (IST) May 18

ಚಿತ್ರಮಂದಿರಗಳ ಉಳಿವಿಗಾಗಿ ಒಗ್ಗಟ್ಟಿನ ಕೂಗು, ಶಿವರಾಜ್‌ಕುಮಾರ ನೇತೃತ್ವದಲ್ಲಿ ಸಿಎಂ ಗೆ ಮನವಿ

ಸಂಕಷ್ಟದಲ್ಲಿರುವ ಚಿತ್ರಮಂದಿರಗಳನ್ನು ಉಳಿಸಲು ಸರ್ಕಾರದಿಂದ ನೆರವು ಕೋರಲು ಚಿತ್ರರಂಗ ನಿರ್ಧರಿಸಿದೆ. ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.

ಪೂರ್ತಿ ಓದಿ
01:31 PM (IST) May 18

ಮುಸ್ಲಿಂ ಧರ್ಮಗ್ರಂಥ ಕುರಾನ್ ಬಗ್ಗೆ ಬ್ಯಾಡ್ ಕಾಮೆಂಟ್; ಠಾಣೆಗೆ ಮುತ್ತಿಗೆ ಹಾಕಿದ ಸಮುದಾಯದಿಂದ ಆಕ್ರೋಶ!

ಬೆಳಗಾವಿಯಲ್ಲಿ ಮುಸ್ಲಿಂ ಧರ್ಮಗ್ರಂಥ ಕುರಾನ್ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಘಟನೆ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಂ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಫೇಕ್ ಖಾತೆ ಸೃಷ್ಟಿಸಿ ಈ ಕೃತ್ಯವೆಸಗಿದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಶಹಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಪೂರ್ತಿ ಓದಿ
12:08 PM (IST) May 18

ಕೃಷಿ ಕ್ರಾಂತಿ: ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ: - ಎನ್. ಚಲುವರಾಯಸ್ವಾಮಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ರೈತರ ಆರ್ಥಿಕ ಸ್ಥಿರತೆ, ಸಮೃದ್ಧ ಜೀವನ ಮತ್ತು ಕೃಷಿಯ ಆಧುನೀಕರಣವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

ಪೂರ್ತಿ ಓದಿ
11:37 AM (IST) May 18

ಹಾವೇರಿ: ಗುತ್ತಲದಲ್ಲಿ 6307 ಶವಗಳ ಸಂಸ್ಕಾರ ಮಾಡಿದ ಶಾಸನ ಶಿಲ್ಪ ಪತ್ತೆ!

ಗುತ್ತಲದಲ್ಲಿ ಪತ್ತೆಯಾದ ಶಾಸನವು 1539ರಲ್ಲಿ ಬರಗಾಲದಿಂದ ಮೃತಪಟ್ಟ 6307 ಜನರ ಸಾಮೂಹಿಕ ಸಮಾಧಿಯ ಕುರಿತು ಮಾಹಿತಿ ನೀಡುತ್ತದೆ. ಮರುಳಯ್ಯ ಎಂಬ ವ್ಯಕ್ತಿಯು ಈ ಶವಗಳನ್ನು ಸಂಸ್ಕರಿಸಿದ್ದಾನೆ ಎಂದು ಶಾಸನದಲ್ಲಿ ಉಲ್ಲೇಖವಿದೆ.

ಪೂರ್ತಿ ಓದಿ
11:18 AM (IST) May 18

ಹುಣಸೂರು ಬಸ್ ನಿಲ್ದಾಣದಲ್ಲಿ ಸೌತೆಕಾಯಿ ಮಾರಾಟ ನಿಷೇಧ! ಕಾರಣವೇನು ಗೊತ್ತಾ?

ಹುಣಸೂರಿನಲ್ಲಿ ಸೌತೆಕಾಯಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲು ಆಗ್ರಹಿಸಿ ನಗರಸಭಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ನಾಗರಿಕರು ಪ್ರತಿಭಟನೆ ನಡೆಸಿದರು. ಕೆಎಸ್ಆರ್ಟಿಸಿ ಅಧಿಕಾರಿಗಳ ದುರ್ವರ್ತನೆ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪೂರ್ತಿ ಓದಿ
11:09 AM (IST) May 18

ಬೆಂಗಳೂರು ಸಂಚಾರ ನಿಯಂತ್ರಣಕ್ಕಾಗಿ ಡ್ರೋನ್‌ಗಳ ಕಣ್ಗಾವಲು

ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣಕ್ಕೆ 10 ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಹೆಚ್ಚು ವಾಹನ ದಟ್ಟಣೆಯಿರುವ ಪ್ರದೇಶಗಳಲ್ಲಿ ಡ್ರೋನ್‌ಗಳು ನೈಜ ಸಮಯದ ಮಾಹಿತಿ ನೀಡಲಿವೆ. ಜೂನ್ 2023ರಲ್ಲಿ ಪ್ರಾಯೋಗಿಕವಾಗಿ ಬಳಸಿದ್ದು, ಜನವರಿ 2024ರಿಂದ ಅಧಿಕೃತವಾಗಿ ಬಳಕೆ ಶುರುವಾಗಿದೆ.

ಪೂರ್ತಿ ಓದಿ
09:58 AM (IST) May 18

ಮಕ್ಕಳು, ಅಂಗವಿಕಲರ ಮೇಲೆ ಕಾಮುಕರ ಕಣ್ಣು, ಕರಿಕ್ಯಾತನಹಳ್ಳಿಯಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಲೈಂಗಿಕ ದೌರ್ಜನ್ಯ!

ಕರಿಕ್ಯಾತನಹಳ್ಳಿಯಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿರುವ ಘಟನೆ ನಡೆದಿದೆ. ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಪೂರ್ತಿ ಓದಿ
09:19 AM (IST) May 18

ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ

ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶದ ಬೆನ್ನಲ್ಲೇ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 9 ರಿಂದ 20 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಮೇ 26 ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷೆ 1 ಮತ್ತು 2ರಲ್ಲಿ ಅನುತ್ತೀರ್ಣರಾದವರಿಗೆ ಈ ಬಾರಿ ಶುಲ್ಕ ಇರುವುದಿಲ್ಲ.

ಪೂರ್ತಿ ಓದಿ
08:27 AM (IST) May 18

ಬಿಜೆಪಿಯವರಿಗೆ ಪಾಕಿಸ್ತಾನ, ದೇವಸ್ಥಾನ ಬಿಟ್ಟು ಬೇರೆ ವಿಷಯವೇ ಇಲ್ಲ: ಮಧು ಬಂಗಾರಪ್ಪ

ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದ ಸಚಿವ ಮಧು ಬಂಗಾರಪ್ಪ, ಬಿಜೆಪಿಯ ಟೀಕೆಗಳನ್ನು ತಳ್ಳಿ ಹಾಕಿದರು. ಬಿಜೆಪಿ ಕೇವಲ ಹಿಂದುತ್ವ ಮತ್ತು ಪಾಕಿಸ್ತಾನದಂತಹ ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತದೆ ಎಂದು ಆರೋಪಿಸಿದರು.

ಪೂರ್ತಿ ಓದಿ
08:08 AM (IST) May 18

ಮಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಸಿಎಂ ಡಿಕೆ ಶಿವಕುಮಾರ ಭರವಸೆ

ಬೆಂಗಳೂರಿನಲ್ಲಿ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಸಿ, ಜನರ ಮನೆ ಬಾಗಿಲಿಗೆ ಖಾತೆ ದಾಖಲೆ ತಲುಪಿಸುವ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. ಈಗಾಗಲೇ ಶೇ.60 ರಷ್ಟು ಆಸ್ತಿಗಳ ಪರಿಶೀಲನೆ ಮುಗಿದಿದೆ ಎಂದು ಅವರು ತಿಳಿಸಿದ್ದಾರೆ.

ಪೂರ್ತಿ ಓದಿ
07:36 AM (IST) May 18

ಮಂಡ್ಯದಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ: 4 ಮಹಿಳೆಯರ ರಕ್ಷಣೆ

ಮಂಡ್ಯದಲ್ಲಿ ಸಲೂನ್‌ ಅಂಡ್‌ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಪಿಇಎಸ್ ಕಾಲೇಜು ಪಕ್ಕದ ಕ್ಲೌಡ್-11 ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮಾಲಕಿ ಎಲಿಜೆಬತ್, ಪಿಂಪ್ ಮತ್ತು ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೂರ್ತಿ ಓದಿ