ಚಿಂದಿ ಆಯುವ ನೆಪದಲ್ಲಿ ಬೆಳ್ಳಂಬೆಳಗ್ಗೆ ಬಂದು, ನಿರ್ಮಾಣ ಹಂತದ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಿ, ಬೀಗ ಮುರಿದು ಸ್ಟೀಲ್, ವೈಯರ್‌ಗಳನ್ನು ದೋಚುವ ಕಳ್ಳಿಯರ ಗ್ಯಾಂಗ್ ಹಾವಳಿಗೆ ಬಾಗಲಕೋಟೆ ಜನ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ಬಾಗಲಕೋಟೆ (ಮೇ.18): ಚಿಂದಿ ಆಯುವ ನೆಪದಲ್ಲಿ ಬೆಳ್ಳಂಬೆಳಗ್ಗೆ ಬಂದು, ನಿರ್ಮಾಣ ಹಂತದ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಿ, ಬೀಗ ಮುರಿದು ಸ್ಟೀಲ್, ವೈಯರ್‌ಗಳನ್ನು ದೋಚುವ ಕಳ್ಳಿಯರ ಗ್ಯಾಂಗ್ ಹಾವಳಿಗೆ ಬಾಗಲಕೋಟೆ ಜನ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ದೇವರ ವಿಗ್ರಹಗಳನ್ನೂ ಬಿಡದ ಕಳ್ಳಿಯರು!
ಈ ಚಾಲಾಕಿ ಮಹಿಳೆಯರ ತಂಡದ ಕೃತ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಬಾಗಲಕೋಟೆಯ ವಿದ್ಯಾಗಿರಿಯ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರಸ್ಥರು ಪೂಜೆಗಾಗಿ ಪ್ರತಿಷ್ಠಾಪಿಸಿದ್ದ 10-15 ಕೆಜಿ ತೂಕದ ಕಂಚಿನ ಗಣೇಶ ವಿಗ್ರಹವನ್ನು ಒಬ್ಬ ಮಹಿಳೆ ಕಳವು ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾವುದೇ ಅಂಜಿಕೆ ಅಳುಕಿಲ್ಲದೇ ಖತರ್ನಾಕ್ ಗ್ಯಾಂಗ್ ಬಿಂದಾಸ್ ಆಗಿ ವಿಗ್ರಹವನ್ನು ದೋಚಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಅಪಘಾತ 9 ಜನರು ದುರ್ಮರಣ! ಹನುಮ ಜಯಂತಿ ಡಿಜೆ ನೋಡಲು ಹೋಗಿದ್ದ ಬಾಲಕರು ಮಸಣಕ್ಕೆ!
ಸ್ಟೋರ್ ರೂಂನಿಂದ ವೈಯರ್ ಕಳವು: ಮತ್ತೊಂದು ಘಟನೆಯಲ್ಲಿ, ಇನ್ನೊಬ್ಬ ಮಹಿಳೆ ಸ್ಟೋರ್ ರೂಂನ ಬೀಗವನ್ನು ಮುರಿದು ಅಲ್ಲಿದ್ದ ವೈಯರ್ ಬಂಡಲ್‌ಗಳನ್ನು ಕಳವು ಮಾಡಿದ್ದಾಳೆ. ಈ ಘಟನೆಯೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳಿಯರ ಧೈರ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕಳ್ಳಿಯರ ಹಾವಳಿ ಹೆಚ್ಚಳ: ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಪ್ರದೇಶಗಳಲ್ಲಿ ಈ ಕಳ್ಳಿಯರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಚಿಂದಿ ಆಯುವ ರೀತಿಯಲ್ಲಿ ಬಂದು, ಯಾರಿಗೂ ಸಂಶಯ ಬಾರದಂತೆ ವಸ್ತುಗಳನ್ನು ಎಗರಿಸಿ ಸ್ಥಳದಿಂದ ಪರಾರಿಯಾಗುವ ಈ ತಂಡದ ಕೃತ್ಯಗಳಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: Bengaluru: ಬಾಸ್‌ನ 1.51 ಕೋಟಿ ಕದ್ದು, ದೇವಸ್ಥಾನದ ಹುಂಡಿಗೆ ಹಾಕಿದ ಡ್ರೈವರ್!
ಪೊಲೀಸರ ಕ್ರಮಕ್ಕೆ ಒತ್ತಾಯ: ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ಕಳ್ಳತನಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಈ ರೀತಿಯ ಘಟನೆಗಳು ಪದೇಪದೆ ಮರುಕಳಿಸುತ್ತಿರುವುದರಿಂದ ಸ್ಥಳೀಯರು ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದಾರೆ.


