08:14 AM (IST) Oct 11

Karnataka News Live 11 October 2026 ಗುಡ್ ನ್ಯೂಸ್ - ಕರ್ನಾಟಕದ ಈ ಜಿಲ್ಲೆಯಲ್ಲಿ 5 ಸಾವಿರ ಜನರಿಗೆ ಉದ್ಯೋಗ, ಶೀಘ್ರದಲ್ಲೇ ಜವಳಿ ಪಾರ್ಕ್ ನಿರ್ಮಾಣ!

ಐದು ಸಾವಿರ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ. ಇಳಕಲ್ಲಿನ ಎಸ್.ವಿ.ಎಂ. ಸಂಘದ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶ್ರೀಗಳ ಆಶೀರ್ವಾದದಿಂದ ಸಚಿವನಾಗಿದ್ದೇನೆ ಎಂದರು.

Read Full Story
08:12 AM (IST) Oct 11

Karnataka News Live 11 October 2026 ಗಂಡನ ಸಾವಿನ ಆಘಾತಕ್ಕೆ ಪತ್ನಿಯೂ ಸಾವು - ಹಿರೇಹಳ್ಳಿ ಗ್ರಾಮದಲ್ಲಿ ಒಂದೇ ದಿನ ದಂಪತಿ ನಿಧನ

ಸರಗೂರು ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಪತಿ ವೆಂಕಟಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾದ ಪತ್ನಿ ಚಿನ್ನಮ್ಮ ಕೂಡ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಒಂದೇ ದಿನ ದಂಪತಿ ನಿಧನರಾಗಿದ್ದು, ಗ್ರಾಮದಲ್ಲಿ ತೀವ್ರ ದುಃಖ ಮಡುಗಟ್ಟಿದೆ.
Read Full Story
08:03 AM (IST) Oct 11

Karnataka News Live 11 October 2026 ನೀರಾವರಿ ಇಲಾಖೆಯ ಅಧಿಕಾರಿಯನ್ನೇ ಜೀಪಿನ ಬಾನೆಟ್ ಮೇಲೆ ಕೂರಿಸಿ ರೈತರಿಂದ ಪ್ರತಿಭಟನೆ

ಉಪ ಕಾಲುವೆ ಗೇಟುಗಳು ಕೆಟ್ಟು ಬೆಳೆಗಳಿಗೆ ನೀರು ಸಿಗದ ಕಾರಣ ಕೆಂಭಾವಿ ಸಮೀಪ ನೂರಾರು ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ರೈತರು ನೀರಾವರಿ ಇಲಾಖೆ ಅಧಿಕಾರಿಯನ್ನು ಜೀಪಿನ ಬಾನೆಟ್ ಮೇಲೆ ಕುಳ್ಳಿರಿಸಿ ರಸ್ತೆ ತಡೆದರು. ಪೊಲೀಸರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
Read Full Story
07:49 AM (IST) Oct 11

Karnataka News Live 11 October 2026 ಪಿಲಿಕುಳ ನಿಸರ್ಗಧಾಮದ ಜಾಗ ಮುಸ್ಲಿಮರ ಸ್ಮಶಾನಕ್ಕೆ ಆರೋಪ - ಹಿಂದೂ ಸಂಘಟನೆಗಳ ಪ್ರತಿಭಟನೆ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಭೂಮಿಯನ್ನು ಮುಸ್ಲಿಮರ ದಫನ ಕಾರ್ಯಕ್ಕೆ ಮಂಜೂರು ಮಾಡಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಅ.೧೨ರಂದು ಪ್ರತಿಭಟನೆಗೆ ಸಜ್ಜಾಗಿವೆ. ದೈವಸ್ಥಾನದ ಬಳಿ ಸ್ಮಶಾನ ನಿರ್ಮಾಣದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಈ ಜಾಗ ೧೯೯೪ರಲ್ಲೇ ವಕ್ಫ್ ಬೋರ್ಡ್‌ಗೆ ಸೇರಿತ್ತು ಎಂದು ಮಸೀದಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
Read Full Story
07:37 AM (IST) Oct 11

Karnataka News Live 11 October 2026 ಬೆಂಗಳೂರು & ಬೀದರ್ ನಡುವೆ 4 ವಿಶೇಷ ರೈಲುಗಳು; ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ?

ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಅಕ್ಟೋಬರ್ 10, 16 ಮತ್ತು 17 ರಂದು ಕಾರ್ಯಾಚರಣೆ ನಡೆಸಲಿದ್ದು, ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ

Read Full Story