ಕೋಲಾರದಲ್ಲಿ ದೇಸಿ ಫ್ರಿಡ್ಜ್ ಗಳಿಗೆ ಭಾರಿ ಬೇಡಿಕೆ!
* ಕೋಲಾರದಲ್ಲಿ ದೇಸಿ ಟ್ರೆಂಡ್ ನ ಹವಾ.
* ಬಿರು ಬಿಸಿಲಿಗೆ ಜನರ ನೆತ್ತಿ ಸುಡ್ತಿದೆ
* ಭಾರಿ ಬೇಡಿಕೆ ಪಡೆದುಕೊಂಡ ಮಣ್ಣಿನ ಮಡಿಕೆಗಳು
ವರದಿ : ದೀಪಕ್,ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಮೇ. 3): ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರು ದೇಸಿ ಫ್ರಿಡ್ಜ್ ಗಳದ್ದೇ ಹವಾ.ಕರೆಂಟ್ ಇಲ್ಲದೆ ತಂಪು ನೀರು ಕೊಡೋ ದೇಸಿ ಫ್ರಿಡ್ಜ್ ಗಳಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ.ಹೌದು ಈ ವರ್ಷ ನಿರೀಕ್ಷೆಗೂ ಮೀರಿ ಸೂರ್ಯ ನೆತ್ತಿ ಸುಡ್ತಿದ್ದಾನೆ,ಬಿಸಿಲ ಬೇಗೆ ಜನರನ್ನು ಸಾಕು ಸಾಕಾಗಿ ಮಾಡಿ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.ಇದರ ನಡುವೆ ಜನರ ಆರೋಗ್ಯದ ದೃಷ್ಟಿಯಿಂದ ಕೃತಕ ಫ್ರಿಡ್ಜ್ ಗಿಂತ ನಮಗೆ ಮಣ್ಣಿನ ಮಡಿಕೆಯೇ ಮೇಲು ಅಂತ ಜನರು ದೇಸಿ ಫ್ರಿಡ್ಜ್ ಅಂದ್ರೆ ಮಣ್ಣಿನ ಮಡಿಕೆಗಳ (Mud Pot) ಮಾರು ಹೋಗಿದ್ದಾರೆ.ಕೋಲಾರದಲಂತೂ ಮಣ್ಣಿನ ಮಡಿಕೆಗಳಿಗೆ ಬಾರಿ ಡಿಮ್ಯಾಂಡ್ ಹೆಚ್ಚಾಗಿದೆ.
ನೆತ್ತಿ ಸುಡುವ ಬಿಸಿಲಿಗೆ ತಂಪು ಮಾಡಿಕೊಳ್ಳಲು ಹಣವಂತರು ಆಧುನಿಕ ರೆಫ್ರಿಜರೇಟರ್ ಮೊರೆ ಹೋದ್ರೆ, ಮಧ್ಯಮ ಹಾಗೂ ಕೆಳ ವರ್ಗದ ಜನರು ನಮ್ಮ ದೇಸಿ ಮಡಿಕೆಗಳ (refrigerator) ಮೊರೆ ಹೋಗ್ತಿದ್ದಾರೆ.ಆಧುನಿಕ ರೆಫ್ರಿಜರೇಟರ್ ಬಳಸಿ ನೀರು ತಂಪು ಮಾಡಿಕೊಂಡು ಕುಡಿದ್ರೆ ಆರೋಗ್ಯ ಹಾನಿಯಾಗುವ ಸಾಧ್ಯತೆ ಇರುತ್ತೆ.ಆದ್ರಲ್ಲೂ ಬೇಸಿಗೆಯಲ್ಲಿ ಕರೆಂಟ್ ಇಲ್ಲಾ ಅಂದ್ರೆ ತಂಪಾದ ಕುಡಿಯುವ ನೀರು ಸಿಗೋದಿಲ್ಲ.ಆದ್ರೆ ಈ ದೇಸಿ ಮಣ್ಣಿನ ಮಡಿಕೆಯಲ್ಲಿ ಕರೆಂಟ್ ಇಲ್ಲ ಅಂದ್ರು ತಂಪಾದ ಕುಡಿಯುವ ನೀರು ಸಿಗುತ್ತದೆ.ಸುಡುವ ಬಿಸಿಲಿನಲ್ಲೂ ಮೊದಲಿಂದಲೂ ತನ್ನದೇ ಆದ ಆರೋಗ್ಯಕರ ಇತಿಹಾಸ ಹೊಂದಿರುವ ಮಡಿಕೆಗೆ ಕೋಲಾರದಲ್ಲಿ ಭಾರಿ ಬೇಡಿಕೆ ಶುರುವಾಗಿದೆ.
ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಳ ಒಂದು ಕಡೆ ಆದ್ರೆ,ಇತ್ತ ವ್ಯಾಪಾರಸ್ಥರು ಬೆಲೆಯೂ ಹೆಚ್ಚಳ ಮಾಡಿದ್ದಾರೆ.ಗ್ರಾಹಕರನ್ನು ಸೆಳೆಯಲು ಮಡಿಕೆ ತಯಾರಿಸುವವರು ಸಹ ವಿವಿಧ ಆಕಾರಗಳ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆಧಾಯಗಳಿಸುತ್ತಿದ್ದಾರೆ. ಕೊರೊನಾ ಶುರುವಾದಗಿನಿಂದಲೂ ಮಡಿಕೆ ಕೊಳ್ಳುವವರು ಇಲ್ಲದೆ ಭಾರಿ ನಷ್ಟದಲ್ಲಿದ್ದ ಮಡಿಕೆ ತಯಾರಕರು ಈ ಬಾರಿ ಚೇತರಿಸಿಕೊಳ್ತಿದ್ದಾರೆ.ಮಾರಾಟ ಮಾಡಲು ಸ್ಟಾಕ್ ಮಾಡಿಕೊಂಡ ಬಳಿಕ ಲಾಕ್ ಡೌನ್ ಶುರುವಾಗಿದ್ದ ಪರಿಣಾಮ ಮಾರಾಟವಾಗದೆ ಮನೆ ನಡೆಸೋದಕ್ಕೂ ಪರದಾಟ ಪಡಬೇಕಾಯ್ತು.
ಇನ್ನು ಮೊದಲೆಲ್ಲಾ ಮಣ್ಣಿನ ಮಡಿಕೆಗಳು ಹಳ್ಳಿಯವರಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಇದೀಗ ನಗರ ನಿವಾಸಿಗಳು ಸಹ ಹೆಚ್ಚಿನದಾಗಿ ಖರೀದಿ ಮಾಡುವ ಮೂಲಕ ದೇಸಿ ಫ್ರಿಡ್ಜ್ ಗಳ ಮೊರೆ ಹೋಗಿದ್ದಾರೆ.ಈಗಾಗಿ ದೇಸಿ ಟ್ರೆಂಡ್ ನ ತಕ್ಕಂತೆ ನೀರಿನ ಮಡಿಕೆ,ಅಡಿಕೆ ಮಾಡುವ ಪಾತ್ರೆ, ಬಾಟಲ್,ಜಗ್,ಗ್ಲಾಸ್ ಸೇರಿದಂತೆ ಬಗೆ ಬಗೆಯ ವಸ್ತುಗಳನ್ನು ತಯಾರು ಮಾಡಿ ಮಾರಾಟ ಮಾಡಿ ವ್ಯಾಪಾರಸ್ಥರು ಒಳ್ಳೆಯ ಆಧಾಯ ಗಳಿಸುತ್ತಿದ್ದಾರೆ.
KOLARA ಬಸವ ಜಯಂತಿ ಆಚರಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ
ಇನ್ನು ಇದರ ನಡುವೆ ಕೋಲಾರದಲ್ಲಿ(Kolar) ಮೊದಲು ಅಲ್ಲೇ ಮಡಿಕೆ ತಯಾರಿಕೆ ಮಾಡಿ ಮಾರಾಟ ಮಾಡ್ತಿದ್ರು.ಆದ್ರೆ ವೃತ್ತಿಯನ್ನು ಬಿಟ್ಟು ಕೆಲವರು ಉದ್ಯೋಗ ಹರಸಿ ಬೆಂಗಳೂರು ಕಡೆಗೆ ಮುಖ ಮಾಡಿರೋದ್ರಿಂದ ವ್ಯಾಪಾರಸ್ಥರು ತಮಿಳುನಾಡಿನ ಕೃಷ್ಣಗಿರಿ,ದೇವನಹಳ್ಳಿ ಹಾಗೂ ಮುಳಬಾಗಿಲು ಕಡೆಗಳಿಂದ ತರಿಸಿ ಮಾರಾಟ ಮಾಡ್ತಿರೋದ್ರಿಂದ ಹೆಚ್ಚಿನ ಬೆಲೆ ಕೊಟ್ಟು ಮಡಿಕೆ ಖರೀದಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ.
Tomato Price: ಕೋಲಾರದಲ್ಲಿ ಏರಿಕೆ ಕಂಡ ಟೊಮೆಟೊ ಬೆಲೆ: ದರ ಏರಿಕೆಯಿಂದ ರೈತರಿಗಿಲ್ಲ ಲಾಭ
ಒಟ್ಟಾರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಅವನತಿ ಹಾದಿ ಹಿಡಿದಿದ್ದ ಕುಂಬಾರಿಕೆಗೆ ಹಾಗೂ ಮಣ್ಣಿನ ಮಡಿಕೆಗೆ ಒಳ್ಳೆಯ ಡಿಮ್ಯಾಂಡ್ ಬಂದಿದೆ.ಇದಕ್ಕೆ ಒಂದು ಕಡೆ ನೆತ್ತಿ ಸುಡುವ ಬಿರು ಬಿಸಿಲು ಕಾರಣವಾದ್ರೆ,ಮತ್ತೊಂದೆಡೆ ಕೊರೊನಾ ನಂತರದಲ್ಲಿ ಜನರಿಗೆ ಹೆಚ್ಚಾಗಿರುವ ತಮ್ಮ ಆರೋಗ್ಯದ ಮೇಲಿನ ಕಾಳಜಿ ಅಂದ್ರೂ ತಪ್ಪಾಗೋದಿಲ್ಲ.