ಕರ್ನಾಟಕದ ನರೇಗಾ ಕೂಲಿ 349 ರು.ಗೆ ಹೆಚ್ಚಳ

ಕರ್ನಾಟಕಕ್ಕೆ ನೀಡುವ ನೆರವನ್ನು ಶೇ.10ರಷ್ಟು ಏರಿಕೆ ಮಾಡಿದೆ. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಒಬ್ಬರಿಗೆ ಒಂದು ದಿನಕ್ಕೆ ನೀಡುವ ಕೂಲಿ ಹಣ 33 ರು. ಏರಿಕೆಯಾಗಿದೆ. ಅಂದರೆ ಈ ಹಿಂದೆ ಇದ್ದ 316 ರು. ಈಗ 349 ರು.ಗೆ ಏರಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯ ದರ ನಿಗದಿಪಡಿಸಿದೆ. 

Karnataka Narega Salary Increase to 349 Rs grg

ನವದೆಹಲಿ(ಮಾ.29):  ದೇಶದ ವಿವಿಧ ರಾಜ್ಯಗಳಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ(ಎಂ-ನರೇಗಾ) ಯೋಜನೆಯಡಿ ನೀಡುವ ಪ್ರತಿ ದಿನದ ಕೂಲಿಯ ಅನುದಾನವನ್ನು ಕೇಂದ್ರ ಸರ್ಕಾರ ಶೇ.4-ಶೇ.10ರಷ್ಟು ಏರಿಕೆ ಮಾಡಿದೆ.  ಕರ್ನಾಟಕಕ್ಕೆ ನೀಡುವ ನೆರವನ್ನು ಶೇ.10ರಷ್ಟು ಏರಿಕೆ ಮಾಡಿದೆ. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಒಬ್ಬರಿಗೆ ಒಂದು ದಿನಕ್ಕೆ ನೀಡುವ ಕೂಲಿ ಹಣ 33 ರು. ಏರಿಕೆಯಾಗಿದೆ. ಅಂದರೆ ಈ ಹಿಂದೆ ಇದ್ದ 316 ರು. ಈಗ 349 ರು.ಗೆ ಏರಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯ ದರ ನಿಗದಿಪಡಿಸಿದೆ. 

ಹರ್ಯಾಣಕ್ಕೆ ಅತ್ಯಂತ ಗರಿಷ್ಠ 374 ರು. ನಿಗದಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಗೆ ಅತಿ ಕಡಿಮೆ 234 ರು. ನಿಗದಿಯಾಗಿದೆ. ಇದು ಮಾ.27ರಂದು ಏರಿಕೆ ಮಾಡಿದ ನಂತರದ ದರವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪರಿಷ್ಕೃತ ದರಗಳಿಗೆ ಸಂಬಂಧಿಸಿದ ಆದೇಶ ಪ್ರಕಟಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಅತಿ ಕಡಿಮೆ 7 ರು. ಏರಿಕೆ ಮಾಡಲಾಗಿದೆ. ಆ ರಾಜ್ಯಗಳಿಗೆ ನೀಡುವ ಕೂಲಿ ದರ 237 ರು.ಗೆ ಏರಿಕೆಯಾಗಿದೆ.

ನರೇಗಾ ಫೇಸ್ ಅಥೆಂಟಿಫಿಕೇಷನ್‌ಗೆ ಲೋಕಸಮರ ಅಡ್ಡಿ..!

ಕಾಂಗ್ರೆಸ್ ಟೀಕೆ: 

ಉದ್ಯೋಗ ಖಾತ್ರಿ ವೇತನದಲ್ಲಿನ ಏರಿಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಉದ್ಯೋಗ ಖಾತ್ರಿ ವೇತನವನ್ನು 400 ರು.ಗೆ ಏರಿಸುವ ಭರವಸೆ ನೀಡಿದ್ದೇವೆ. ಈಗಿನ ಏರಿಕೆಯ ನಂತರವೂ ಕೇಂದ್ರ ಸರ್ಕಾರ ನೀಡುವ ವೇತನ ನಮ್ಮ ಭರವಸೆಯನ್ನು ತಲುಪಿಲ್ಲ ಎಂದು ಹೇಳಿದೆ.

Latest Videos
Follow Us:
Download App:
  • android
  • ios