ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಗ್ರಾಹಕರು ಇನ್ನು ಮುಂದೆ ವಾಟ್ಸಪ್ ಮೂಲಕವೇ ವಿದ್ಯುತ್ ಕುರಿತ ಸಮಸ್ಯೆಗಳು ಬಗೆಹರಿಸಿಕೊಳ್ಳಬಹುದು. ವಾಟ್ಸಪ್ ಸಹಾಯವಾಣಿ ನೀಡಿದೆ, ಕರೆ ಅಥವಾ ಎಸ್‌ಎಂಎಸ್ ಮೂಲಕವೂ ಸಮಸ್ಯೆ ತಿಳಿಸಬಹುದಾಗಿದೆ

ಬೆಂಗಳೂರು (ಮೇ.9): ಇಷ್ಟು ದಿನಗಳ ಕಾಲ ರಣರಣ ಬಿಸಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಮಂದಿ ಇದೀಗ ಮೂರೇ ದಿನದಲ್ಲಿ ಮಳೆಯ ಅರ್ಭಟಕ್ಕೆ ನಡುಗಿ ಹೋಗಿದ್ದಾರೆ. ನಗರದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಒಂದೆಡೆ ಸಾಧಾರಣ ಮಳೆಗೆ ಮರಗಳು ಉರುಳಿಬಿದ್ದರೆ ಇನ್ನೊಂದೆಡೆ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ನಿಂತು ಜನ ಜೀವನ ಅಸ್ತವ್ಯಸ್ತವಾಗಿದ್ದು, ಕಳೆದ ಮೂರು ದಿನಗಳಲ್ಲೇ ಎಲ್ಲೆಡೆಯಿಂದ ಬೆಸ್ಕಾಂ ಸಹಾಯವಾಣಿಗೆ ದೂರುಗಳ ಪ್ರವಾಹವೇ ಹರಿದುಬರುತ್ತಿದೆ. 

ಬೆಸ್ಕಾಂ ಸಹಾಯವಾಣಿ 1912ಕ್ಕೆ ದಿನನಿತ್ಯ ಕರೆ ಮಾಡುತ್ತಿರುವ ಜನರು. ಕರೆಗಳ ಒತ್ತಡದಿಂದ ಗ್ರಾಹಕರ ಸಂಪರ್ಕ ಸಾಧ್ಯವಾಗುತ್ತಿಲ್ಲ ಹೀಗಾಗಿ ಮಳೆಗಾಲದಲ್ಲಿ ಗ್ರಾಹಕರಿಗೆ ಎದುರಾಗುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ವಾಟ್ಸಪ್ ಸಂಖ್ಯೆಗಳನ್ನ ನೀಡಲಾಗಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಬದಲಿಗೆ ನೇರವಾಗಿ ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಜೊತೆಗೆ ಎಸ್‌ಎಂಎಸ್ ಮಾಡಲು ಸಹ ಪ್ರತ್ಯೇಕವಾಗಿ ಮೊಬೈಲ್ ಸಂಖ್ಯೆ ನೀಡಲಾಗಿದೆ.

ಬೆಲೆ ಏರಿಕೆ ನಡುವೆ ವಿದ್ಯುತ್ ದರ ಇಳಿಕೆಯ ಖುಷಿ ನೀಡಿದ ಗ್ಯಾರಂಟಿ ಸರ್ಕಾರ; ಯೂನಿಟ್‌ಗೆ 1.10 ರೂ. ಇಳಿಕೆ

ಜಿಲ್ಲಾವಾರು ವಾಟ್ಸ್‌ ಆಪ್‌ ಸಂಖ್ಯೆಗಳು:

  • ಬೆಂಗಳೂರು ಪೂರ್ವ- 8277884013
  • ಬೆಂಗಳೂರು ಪಶ್ಚಿಮ- 8277884012
  • ಬೆಂಗಳೂರು ಉತ್ತರ- 8277884014
  • ಬೆಂಗಳೂರು ದಕ್ಷಿಣ- 8277884011
  • ಕೋಲಾರ- 8277884015
  • ಚಿಕ್ಕಬಳ್ಳಾಪುರ- 8277884016
  • ಬೆಂಗಳೂರು ಗ್ರಾಮಾಂತರ- 8277884017
  • ರಾಮನಗರ- 8277884018
  • ತುಮಕೂರು- 8277884019
  • ಚಿತ್ರದುರ್ಗ- 8277884020
  • ದಾವಣಗೆರೆ- 8277884021

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸಪ್ ಸಂಖ್ಯೆ - 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ- 9449844640.

ಎಸ್‌ಎಂಎಸ್‌ ಗಳಿಗೆ ಮೊಬೈಲ್ ಸಂಖ್ಯೆ: 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.