ಕಾಂತರಾಜ್ ವರದಿ ಜಾತಿ ಜನಗಣತಿಯೇ ಅಲ್ಲ: ರಾಜಕಾರಣದಲ್ಲಿ ಭರ್ಜರಿ ಟ್ವಿಸ್ಟ್ ಕೊಟ್ಟ ಸಚಿವ ಶಿವರಾಜ್‌ ತಂಗಡಗಿ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್‌ ಸಿದ್ಧಪಡಿಸಿದ ವರದಿ ಜಾತಿಗಣತಿಯಲ್ಲ ಎಂದು ಸಚಿವ ಶಿವರಾಜ್‌ ತಂಗಡಗಿ ಟ್ವಿಸ್ಟ್‌ ನೀಡಿದ್ದಾರೆ.

Karnataka minister Shivraj Thangadagi gave big twist Kantaraj report is not caste census sat

ಬೆಂಗಳೂರು (ನ.09): ರಾಜ್ಯದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಲಾದ ಕಾಂತರಾಜ್‌ ವರದಿಯು ಜಾತಿ ಗಣತಿ ವರದಿಯೇ ಅಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ. ಮುಂದೆ ಅಗತ್ಯ ಬಿದ್ದರೆ ಜಾತಿಗಣತಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂತರಾಜ್‌ ಮಾಡಿರುವ ವರದಿ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಾಗಿದೆ. ಮತ್ತೆ ಮತ್ತೆ ಹೇಳ್ತೀನಿ ಅದು ಜಾತಿ ಜನಣಗತಿಯೇ ಅಲ್ಲ. ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಮಾಡಬೇಕು ಎಂದಿದ್ದಾರೆ. ಮುಂದೆ ಅಗತ್ಯ ಬಿದ್ದರೆ ಹೊಸದಾಗಿ ಜಾತಿ ಸಮೀಕ್ಷೆ ಮಾಡುತ್ತೇವೆ. ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಆದೇಶ ಮಾಡುವಾಗಲೇ ಇದನ್ನು ಜಾತಿ ಜನಗಣತಿ ಎಂದು ಆದೇಶ ಮಾಡಿಲ್ಲ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಎಂದೇ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಸುರಂಗ ರಸ್ತೆ ನಿರ್ಮಿಸದಂತೆ ಸಂಸದ ತೇಜಸ್ವಿ ಸೂರ್ಯ ಮನವಿ: ಡಿಕೆಶಿ ಕನಸಿನ ಯೋಜನೆಗೆ ಕೊಳ್ಳಿ!

ಕ್ಷೇತ್ರದ ಕೆಲಸ, ಲೋಕಸಭಾ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಿದ ಸಚಿವರು, ಶಾಸಕರಿಗೆ ಸಮಯ ಕೊಡಬೇಕು ಎಂದು ತೀರ್ಮಾನ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಭೇಟಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಾತ್ರ ಶಾಸಕರಿಗೆ ಪ್ರತ್ಯೇಕವಾಗಿ ಸಮಯ ಕೊಡಲು ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಎಲ್ಲ ಶಾಸಕರಿಗೆ ಸಮಯ ನೀಡಿದ್ದರು. ಹೀಗಾಗಿ, ರಾಜ್ಯದ ನಿಗದಿತ ಭಾಗಗಳ ಶಾಸಕರೊಂದಿಗೆ ಚರ್ಚೆ ಮಾಡಿ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ, ಶಾಸಕರ ಅಹವಾಲು ಜೊತೆಗೆ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಕುರಿತು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಜಾತಿಗಣತಿ ವರದಿಯನ್ನು ಜಾರಿಗೆ ತರಬೇಕು ಎಂದು ಸ್ವಪಕ್ಷೀಯರೇ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇನ್ನು ನನ್ನ ಅಧಿಕಾರಾವಧಿ ನವೆಂಬರ್‌ 24ಕ್ಕೆ ಮುಕ್ತಾಯ ಆಗಲಿದ್ದು, ಅಷ್ಟರೊಳಗೆ ಜಾತಿಗಣತಿ ವರದಿ ಎಂದು ಹೇಳಲಾಗುತ್ತಿರುವ ಕಾಂತರಾಜ್‌ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇನೆಂದು ತಿಳಿಸಿದ್ದಾರೆ. ಇನ್ನು ಸರ್ಕಾರೂ ಕೂಡ ಕಾಂತರಾಜ್‌ ವರದಿಯನ್ನು ಪಡೆಯಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದು, ಅದನ್ನು ಪರಿಶೀಲನೆ ಮಾಡಿ ಜಾರಿಗೆ ತರುವ ಬಗ್ಗೆ ನಿರ್ಧಾರ ಮಾಡಲಿದೆ. ಆದರೆ, ಈಗ ಕಾಂತರಾಜ್‌ ವರದಿ ಜಾತಿಗಣತಿ ವರದಿಯೇ ಅಲ್ಲ ಎನ್ನುವುದು ರಾಜ್ಯದ ಜನತೆಗೆ ಬಿಗ್‌ ಟ್ವಿಸ್ಟ್‌ ನೀಡಿದಂತಾಗಿದೆ.

ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸಿಕ್ತು ಕಂತೆ ಕಂತೆ ಡಾಲರ್‌ ನೋಟುಗಳು!

ಲಿಂಗಾಯತ, ಒಕ್ಕಲಿಗರ ವಿರೋಧದ ಬೆನ್ನಲ್ಲೇ ವರಸೆ ಬದಲು: ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆದಿದ್ದ 'ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ)' ಅವಾಸ್ತವಿಕವಾಗಿದೆ. ಕಾಂತರಾಜ್‌ ಅವರ ವರದಿ ಸದುದ್ದೇಶದಿಂದ ಕೂಡಿಲ್ಲ. ಇದೇ ಕಾರಣಕ್ಕೆ ಅಂದಿನ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಆಕ್ಷೇಪ ಎತ್ತಿದೆ. ಜೊತೆಗೆ 8 ವರ್ಷಗಳ ಹಿಂದಿನ ವರದಿಯನ್ನು ಈಗ ಸ್ವೀಕರಿಸುವುದು ಎಷ್ಟರ ಮಟ್ಟಿಗೆ ಪ್ರಸ್ತುತ ಎಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ವಿರೋಧ ಮಾಡಿತ್ತಿದೆ. ಇದರ ಬೆನ್ನಲ್ಲಿಯೇ ಇದು ಜಾತಿಗಣತಿಯಲ್ಲ ಎಂದು ಸಚಿವ ಶಿವರಾಜ್‌ ತಂಗಡಗಿ ಹೊಸ ವರಸೆಯನ್ನು ಆರಂಭಿಸಿದ್ದಾರೆ.

Latest Videos
Follow Us:
Download App:
  • android
  • ios