ಸಿಬಿಐ, ಐಟಿ, ಇಡಿ ಕತ್ತೆ ಕಾಯ್ತಿದವಾ? ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಖರ್ಗೆ ಕಿಡಿ 

ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದ್ರೆ ಸಿಬಿಐ, ಐಟಿ, ಇಡಿ ಏನು ಕತ್ತೆ ಕಾಯ್ತಿದೆಯಾ? ಯಾಕೆ ತಡೆಯೋಕೆ ಆಗ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Karnataka minister priyank kharge outraged against bjp at kalaburagi rav

ಕಲಬುರಗಿ (ಏ.15): ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದ್ರೆ ಸಿಬಿಐ, ಐಟಿ, ಇಡಿ ಏನು ಕತ್ತೆ ಕಾಯ್ತಿದೆಯಾ? ಯಾಕೆ ತಡೆಯೋಕೆ ಆಗ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಕರ್ನಾಟಕ, ಕಾಂಗ್ರೆಸ್‌ಗೆ ಎಟಿಎಂ ಆಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆ, ಕರ್ನಾಟಕದಿಂದ ಬ್ಲಾಕ್ ಮನಿ ಹೋಗ್ತಿದೆ ಅಂತಾ ಆರೋಪ ಮಾಡ್ತೀರಿ ಗೃಹಮಂತ್ರಿ ಅಮಿತ್ ಶಾ ಏನು ಮಾಡ್ತಿದ್ದಾರೆ? ಚುನಾವಣಾ ಆಯೋಗ ಏನಪ್ಪಾ ಮಾಡ್ತಿದೆ ಇವರೆಲ್ಲ ಬಿಡಿ ಮೋದಿಯವರೇ ನೀವು ಪ್ರಧಾನಿಯಾಗಿ ಏನು ಮಾಡ್ತಿದ್ದೀರಿ? ರಾಜ್ಯದಿಂದ ಬ್ಲಾಕ್ ಮನಿ ಹೋಗ್ತಿದ್ರೆ ತಡೆಯಬಹುದಲ್ಲ? ಎಂದು ಪ್ರಶ್ನಿಸಿದರು.

ಈ ಚುನಾವಣೇಲಿ 2047ರವರೆಗಿನ ಭವಿಷ್ಯ: ಮೋದಿ

ಬಿಜೆಪಿಯವರಿಗೆ ಈ ಬಗ್ಗೆ ಖಚಿತ ಮಾಹಿತಿ ಇದ್ರೆ ದೂರು ಕೊಡಲಿ. ಯಾಕೆ ಕೊಡ್ತಿಲ್ಲ? ಮೋದಿ ಒಬ್ಬ ಪ್ರಧಾನಿಯಾಗಿ  ಗಾಳಿಯಲ್ಲಿ ಗುಂಡು ಹಾರಿಸುವುದು ಬಿಟ್ಟು ನಿರ್ದಿಷ್ಟ ಕ್ರಮ ಕೈಗೊಳ್ಳಲಿ. ವಿಜಯೇಂದ್ರ, ಅಶೋಕಣ್ಣ ಈ ರೀತಿ ಹೇಳಿದ್ರೆ ಪರವಾ ಇಲ್ಲ, ಅವರಿಗೆ ಮಾಹಿತಿ ಇಲ್ಲ ಅಂದುಕೊಳ್ತಿವಿ. ಆದರೆ ಪ್ರಧಾನಿಯಾಗಿ ಈ ರೀತಿ ಹೇಳಿರೋದು ಸರಿಯಲ್ಲ. ರಾಜ್ಯದಿಂದ ಬ್ಲಾಕ್ ಮನಿ ಹೋಗಿದ್ರೆ ಅದರ ಬಗ್ಗೆ ಸಾಕ್ಷ್ಯ ಸಮೇತ ದಾಖಲೆ ಬಿಡುಗಡೆ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
 

Latest Videos
Follow Us:
Download App:
  • android
  • ios