ಬೆಂಗಳೂರು(ಮೇ.26): ಕೊರೋನಾ ನಿಯಂತ್ರಿಇಸುವ ನಿಟ್ಟಿನ್ಲಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮ ಇಡೀ ದೇಶದ ಗಮನ ಸೆಳೆದಿತ್ತು. ಲಾಕ್‌ಡೌನ್‌ ಹೇರಿವುದರಿಂದ ಆರಂಭವಾಗಿ, ಪರೀಕ್ಷೆ, ಕ್ವಾರಂಟೈನ್, ಸೋಂಕಿತರು ಭೇಟಿಯಾದವರನ್ನು ಗುರುತಿಸುವುದು ಹೀಗೆ ಪ್ರತಿಯೊಂದು ವಿಚಾರವಾಗಿ ತೆಗೆದುಕೊಂಡ ಕ್ರಮ ಮೆಚ್ಚುಗೆಗೆ ಪಾತ್ರವಾಗಿತ್ತು. ಆರೀಗ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಮಾತುಗಳು ಮಾತ್ರ ಭಾರೀ ಆಘಾತ ಹುಟ್ಟಿಸುವಂತಿದೆ.

ಹೌದು ಲಾಕ್‌ಡೌನ್ ಸಡಿಲಿಕೆಯಿಂದ ಸದ್ಯ ದೇಶ ಹಾಗೂ ವಿದೇಶಗಳಿಂದ ಪ್ರಯಾಣಿಕರು ಮರಳಿ ಬರಲಾರಂಭಿಸಿದ್ದಾರೆ. ಹೀಗಿರುವಾ ಸರ್ಕಾರ ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಬೇಕೆಂಬ ನಿಯಮ ಜಾರಿಗೊಳಿಸಿತ್ತು. ಮಕ್ಕಳಿಗೆ, ಗರ್ಭಿಣಿಯರಿಗೆ ಮಾತ್ರ ವಿಶೇಷ ಪ್ರಕರಣ ಎಂಬ ನಿಟ್ಟಿನಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಲು ಅವಕಾಶ ನೀಡಿತ್ತು. ಆದರೀಗ ಸರ್ಕಾರ ಸಾಂಸ್ಥಿಕ ಕ್ವಾರಂಟೈನ್‌ ಅಂತ್ಯಗೊಳಿಸುವ ನಿರ್ಧಾರಕ್ಕೆ ಮುಂದಾಗಿದೆ. 

ಕತ್ತಲು ಕೋಣೆಗೊಯ್ದು ಬೆಲ್ಟ್‌ನಲ್ಲಿ ಥಳಿಸೋದು ಗೊತ್ತು: ಅಧಿಕಾರಿಗಳಿಗೆ ಕೇಂದ್ರ ಸಚಿವೆಯ ಧಮ್ಕಿ!

ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಅವರಿಗೆ ನೇರ ಹೋಮ್ ಕ್ವಾರಂಟೈನ್ ಗೆ ಕಳುಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಹೋಟೆಲ್  ಕೊಠಡಿಗಳ ಕೊರತೆ, ಕ್ವಾರಂಟೈನ್‌ನಲ್ಲಿ ಇರುವವ ಕೆಲವರಿಂದ ಅಸಹಕಾರ ಹಿನ್ನೆಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. 

ಹೋಮ್ ಕ್ವಾರಂಟೈನ್ ಬಗ್ಗೆ ಈಗಾಗಲೇ ಒಂದು ಹಂತದ ಚರ್ಚೆ ನಡೆದಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.