Asianet Suvarna News Asianet Suvarna News

border dispute: ರಾಜ್ಯದ ಒಂದಿಂಚೂ ಭೂಮಿ ಬಿಡಲ್ಲ: ಬೊಮ್ಮಾಯಿ

ಕರ್ನಾಟಕದ ಭೂಮಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಠರಾವು ಪಾಸ್‌ ಮಾಡಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಒಂದು ಇಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

karnataka maharashtra border dispute cm bommai statement at belagavi rav
Author
First Published Dec 27, 2022, 11:55 PM IST

ಸುವರ್ಣಸೌಧ (ಡಿ.27) : ಕರ್ನಾಟಕದ ಭೂಮಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಠರಾವು ಪಾಸ್‌ ಮಾಡಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಒಂದು ಇಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸುವರ್ಣಸೌಧ(Suvarna soudha)ದಲ್ಲಿ ಮಾಧ್ಯಮ(Media)ಗಳೊಂದಿಗೆ ಮಾತನಾಡಿದ ಅವರು, 1956ರಲ್ಲೇ ರಾಜ್ಯಗಳು ಪುನರ್‌ ರಚನೆಯಾಗಿವೆ. ಅದಾಗಿ ಇಷ್ಟುವರ್ಷವಾಗಿವೆ. ಎರಡು ಕಡೆಗಳಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ, ಮಹಾರಾಷ್ಟ್ರ(Maharashtra) ಸರ್ಕಾರ ಗಡಿ ಕ್ಯಾತೆ ತೆಗೆಯುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತಹ, ಜವಾಬ್ದಾರಿಯುತವಲ್ಲದ ಠರಾವು ಪಾಸು ಮಾಡಿದೆ. ಠರಾವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಬೆಳಗಾವಿ, ಕಾರವಾರ, ಬೀದರ್ ಸೇರಿ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು: ಮಹಾ ಸದನದಲ್ಲಿ ನಿರ್ಣಯ

ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಜತೆಗೆ ಗಡಿಯಾಚೆಗೆ ಇರುವ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ವ್ಯಾಜ್ಯ ಸುಪ್ರೀಂಕೋರ್ಟ್‌ನಲ್ಲಿ(Supreme court) ಇದೆ. ನಮ್ಮ ಠರಾವು, ಅವರ ಠರಾವಿನಲ್ಲಿ ಎಷ್ಟುವ್ಯತ್ಯಾಸವಿದೆ ನೋಡಿ ಎಂದ ಅವರು, ನಾವು ಕರ್ನಾಟಕ(Karnataka)ದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಠರಾವು ಮಾಡಿದರೆ, ಅವರು ಕರ್ನಾಟಕದ ಭೂಮಿಯನ್ನು ತೆಗೆದುಕೊಳ್ಳುತ್ತೇವೆ ಎಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ನಮ್ಮದು ಸಂವಿಧಾನ ಹಾಗೂ ಕಾನೂನು ಬದ್ಧ ನಿರ್ಣಯ. ಅವರದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ನಿರ್ಣಯ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಗಡಿ ವಿವಾದ: ಕರ್ನಾಟಕದ ವಿರುದ್ಧ ಇಂದು ಮಹಾರಾಷ್ಟ್ರ ಖಂಡನಾ ನಿರ್ಣಯ

Follow Us:
Download App:
  • android
  • ios