ವೀರ್ ಸಾವರ್ಕರ್ ಕ್ಷಮಾಪಣಾ ಪತ್ರದ ಸತ್ಯ ಬಹಿರಂಗಪಡಿಸಿದ ಸಾಹಿತಿ ಎಸ್.ಎಲ್. ಭೈರಪ್ಪ
ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರಿಗೆ 52 ವರ್ಷ ಕಾಲಾಪಾನಿ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ವೇಳೆ ರಾಜಕೀಯ ಸಂಬಂಧಿತವಾಗಿ ಬರೆದುಕೊಟ್ಟ ಪತ್ರವನ್ನು ಕ್ಷಮಾಪಣಾ ಪತ್ರವೆಂದು ಹೇಳಲಾಗುತ್ತಿದೆ.
ಮೈಸೂರು (ಜೂ.03): ದೇಶದ ಸ್ವಾತಂತ್ರ್ಯ ಹೋರಾಟದ ಪ್ರತಿಷ್ಠಿತ ನಾಯಕ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ ಸರ್ಕಾರ ಏನಾದರೂ ಮಾಡಿ ಡೀ ಗ್ರೇಡ್ ಮಾಡಬೇಕು ಎಂದುಕೊಂಡಿದೆ. ಬ್ರಿಟೀಷರು ಸಾವರ್ಕರ್ ಅವರಿಗೆ 52 ವರ್ಷ ಕಾಲಾಪಾನಿಯಲ್ಲಿ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಹೋಗುವುದಿಲ್ಲ ಎಂಬ ಪತ್ರವನ್ನು ಬರೆದುಕೊಟ್ಟಿದ್ದಾರೆ. ಇದನ್ನೇ ಕ್ಷಮಾಪಣಾ ಪತ್ರ ಎಂದು ಹೇಳಲಾಗುತ್ತಿದೆ ಎಂದು ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸಾವರ್ಕರ್ ಪ್ರತಿಷ್ಠಾನದಿಂದ ಶನಿವಾರ ನಡೆದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಈ ಹಿಂದೆ ನಮ್ಮನ್ನಾಳುತ್ತಿದ್ದ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್ ಅವರು ಬಂಧಿತರಾಗುತ್ತಾರೆ. ಅವರಿಗೆ ಬ್ರಿಟೀಷ್ ಸರ್ಕಾರ ಬರೋಬ್ಬರಿ 52 ವರ್ಷಗಳ ಕಾಲ ಕಾಲಾಪಾನಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಈ ವೇಳೆ ಅವರಿಗೆ ಇನ್ನುಮುಂದೆ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಹೋಗಲ್ಲ ಎಂದು ಪತ್ರವನ್ನು ಬರೆದುಕೊಡುವಂತೆ ಬ್ರಿಟೀಷರು ಕೇಳುತ್ತಾರೆ. ಆಗ, ಜೀವನದ ಬಹುಕಾಲ ಜೈಲಿನಲ್ಲಿಯೇ ಕಳೆಯಲಿದ್ದು, ರಾಜಕೀಯಕ್ಕೆ ಹೋಗಿ ಸಾಧಿಸುವುದಾದರೂ ಏನಿದೆ ಎಂದು ಭಾವಿಸಿ "ರಾಜಕೀಯಕ್ಕೆ ಹೋಗಲ್ಲ" ಎಂದು ಬರೆದುಕೊಡುತ್ತಾರೆ. ಇದನ್ನೇ ಕ್ಷಮಾಪಣಾ ಪತ್ರವೆಂದು ಹೇಳುತ್ತಿದ್ದಾರೆ ಎಂದು ಭೈರಪ್ಪ ಹೇಳಿದರು.
ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!
ಜನರು ಯಾವ ಪುಸ್ತಕ ಕೊಂಡುಕೊಳ್ತಾರೆ ಗೊತ್ತಿದೆ: ಇನ್ನು ಸಾವರ್ಕರ್ ಅವರ ಕುರಿತು ವಿಕ್ರಂ ಅವರು ಎರಡು ಸಂಪುಟವನ್ನು ಬರೆದಿದ್ದಾರೆ. ಇದು ಕನ್ನಡಕ್ಕೆ ಬರಬೇಕು. ಈ ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಕನ್ನಡಕ್ಕೆ ತರುವ ಜವಾಬ್ದಾರಿ ತೆಗೆದುಕೊಳ್ಳುಬೇಕು. ಅನುವಾದ ವೇಳೆ ಚಕ್ರವರ್ತಿ ಸೊಲಿಬೆಲೆಯವರ ಸಹಾಯ ಪಡೆಯಬೇಕು. ಈ ಪುಸ್ತಕ ಕನ್ನಡಕ್ಕೆ ಬಂದರೆ ತುಂಬಾ ಚೆನ್ನಾಗಿ ವ್ಯಾಪಾರ ಆಗುತ್ತದೆ. ನಾಡಿನ ಓದುಗರಿಗೆ ತಲುಪುವ ಜೊತೆಗೆ, ಪ್ರತಿಷ್ಠಾನ್ಕೆ ಒಳ್ಳೆಯ ಲಾಭ ಕೂಡ ಬರುತ್ತದೆ. ಮುಂದಿನ ವರ್ಷಗಳಲ್ಲಿ ಸಾವರ್ಕರ್ ಪ್ರತಿಷ್ಠಾನದ ಪ್ರಶಸ್ತಿ ಕೊಡಲು ಪುಸ್ತಕ ಮಾರಾಟದಿಂದ ದುಡ್ಡು ಬರುತ್ತದೆ. ನಮ್ಮ ಜನರು ಯಾವ ಪುಸ್ತಕವನ್ನು ಕೊಂಡುಕೊಳ್ಳುತ್ತಾರೆ ಎಂದು ನನಗೆ ಚೆನ್ನಾಗಿ ಗೊತ್ತು ಎಂದು ಮಾಹಿತಿ ನೀಡಿದರು.
ದೇಶದ ಫಿಲಾಸಫಿಯನ್ನು ಯುವಕರು ತಪ್ಪಾಗಿ ತಿಳಿದಿದ್ದಾರೆ: ದೇಶದಲ್ಲಿ ಗಾಂಧಿ ಯುಗ ಅಹಿಂಸಾತ್ಮಕ ಚಳುವಳಿಯಲ್ಲಿ ಇತ್ತು. ನಮ್ಮ ದೇಶದ ಫಿಲಾಸಫಿಯನ್ನು ಯುವಕರು ತಪ್ಪಾಗಿ ತಿಳಿದರು. ಜೈಲಿನಲ್ಲಿ ಇದ್ದವರು ಕ್ರಿಮಿನಲ್ ಅಲ್ಲ, ದೇಶಕ್ಕಾಗಿ ಇರುವವರು ಎಂದು ಅರ್ಥ ಮಾಡಿಕೊಂಡರು. ಗಾಂಧಿಯವರ ರಾಜಕೀಯಕ್ಕೆ ವಿರುದ್ಧವಾಗಿ ಹೋಗಲಾರದ ಪರಿಸ್ಥಿತಿ ಬಂದಿತ್ತು. ಆಗ ನಮ್ಮ ದೇಶದಲ್ಲಿ ಪುಕ್ಕಲತನ ಬೆಳೆದು ಹೋಗಿತ್ತು. ಇನ್ನು ಈವರೆಗೆ ವೀರ್ ಸಾವರ್ಕರ್ ಬಗ್ಗೆ ಮಾಡುವ ಅಪಪ್ರಚಾರ ಬರೀ ಸುಳ್ಳು, ಈಗ ಅಧಿಕಾರಕ್ಕೆ ಬಂದಿರುವ ಸರ್ಕಾರ ಸಾವರ್ಕರ್ ಅವರನ್ನು ಯಾರಿಗೆ ಹೋಲಿಸುತ್ತಾರೆ ಎಂದು ನೋಡಬೇಕು ಎಂದರು.
ನೆಹರು ಜೈಲು ಶಿಕ್ಷೆ- ಸಾವರ್ಕರ್ ಜೈಲು ಶಿಕ್ಷೆ ಭಿನ್ನವಾಗಿದೆ: ಜವಾಹರಲಾಲ್ ನೆಹರು ಜೈಲಿನಲ್ಲಿ ಕಳೆದ ವಾತಾವರಣವನ್ನು ಅವರ ತಂಗಿ ಬಹಳ ಚೆನ್ನಾಗಿ ಬರೆದಿದ್ದಾರೆ. ಸೋಫಾ, ಮಂಚ, ಪುಸ್ತಕ, ಇದೆ ನಮ್ಮಣ್ಣನ ಬಡತನ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಆದರೆ, ಸಾವರ್ಕರ್ ಅನುಭವಿಸಿದ ಜೈಲಿನ ಸ್ಥಿತಿಯೇ ಬೇರೆಯದ್ದಾಗಿತ್ತು. ಮತ್ತೊಂದೆಡೆ ನೆಹರು ರವರ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ಬ್ರಿಟಿಷರು ಬರೆದಿರುವ ಪುಸ್ತಕ ನೋಡಿ ಬರೆಯಲಾಗಿದೆ. ಆದರೂ, ಇದು ಬಹಳ ಪ್ರಚಾರ ಪಡೆದಿತ್ತು. ಒಂದು ಚಲನಚಿತ್ರ ಸಹ ನಿರ್ಮಾಣ ಆಯಿತು. ನಾವು ಯಾರನ್ನು ಹೀರೂ ಎಂದುಕೊಳ್ತೀವೋ ಅವರನ್ನು ಹೊಸಕು ಹಾಕುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಸರ್ಕಾರದ ಯುವನಿಧಿ ಯೋಜನೆ ಮಾನದಂಡ ಪ್ರಕಟ: ಯಾರಿಗೆಲ್ಲ 3 ಸಾವಿರ ರೂ. ಸಿಗುತ್ತೆ
ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಮೈಸೂರಿನ ಕಾರ್ಯಕ್ರಮ ರದ್ದಾಗಲಿದೆ ಎಂದು ತಿಳಿದಿದ್ದೆವು. ವೀರ್ ಸಾವರ್ಕರ್ ಕಾರ್ಯಕ್ರಮ, ಸಾಹಿತಿ ಎಸ್.ಎಲ್. ಭೈರಪ್ಪ ಹಾಗೂ ನಾನು ಇದ್ದೇವೆ ಎಂದು ರದ್ದು ಪಡಿಸುವ ಕುತಂತ್ರವೂ ನಡೆದಿತ್ತು. ಆದರೆ, ಅದೃಷ್ಟವಶಾತ್ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವಾರವಾಗಿಲ್ಲ, ಅಷ್ಟರಲ್ಲಿ ಸಾವರ್ಕರ್ ಜಯಂತಿ ರದ್ದು ಮಾಡಲು ಹೊರಟಿದ್ದಾರೆ. ಇದು ಹಿಟ್ಲರ್ ಸರ್ಕಾರವಾಗಿದೆ. ದೇಶದಲ್ಲಿ ಪ್ರಧಾನಿ ಮೋದಿ ಬಗ್ಗೆ ದಿನ ಬೆಳಗಾದೆ ಏನೇನೋ ಮಾತನಾಡುತ್ತಾರೆ. ಆದರೆ ಒಬ್ಬರನ್ನು ಜೈಲಿಗೆ ಕಳುಹಿಸಿಲ್ಲ. ಆದರೆ ಯಾವುದೊ ಒಬ್ಬ ಶಿಕ್ಷಕ ಒಂದು ಪೋಸ್ಟ್ ಮಾಡಿದ ತಕ್ಷಣವೇ ಆತನನ್ನು ವಜಾಗೊಳಿಸುತ್ತಾರೆ. ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಕ್ರಮವಹಿಸುತ್ತಾರೆ. ಆದ್ದರಿಂದಲೇ ಇದು ಹಿಟ್ಲರ್ ಸರ್ಕಾರವಾಗಿದೆ. ಸಾವರ್ಕರ್ ಇವತ್ತಿಗೂ ಪ್ರಸ್ತುತ ಹಾಗೂ ಜೀವಂತ ಎಂದು ಹೇಳಿದರು.