ಸಿಎಂ ಸಿದ್ದರಾಮಯ್ಯ ಹಾಕಿದ ಒಂದೇ ಅವಾಜ್‌ಗೆ ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡ 6 ನಕ್ಸಲರು!

ಕರ್ನಾಟಕದಲ್ಲಿ ನಕ್ಸಲರು ಸರ್ಕಾರಕ್ಕೆ ಶರಣಾಗಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ, ಆರು ನಕ್ಸಲರು ಶರಣಾಗತಿ ಪತ್ರ ಬರೆದಿದ್ದಾರೆ. ಒತ್ತುವರಿ ತೆರವು, ಕಸ್ತೂರಿರಂಗನ್ ವರದಿಗೆ ವಿರೋಧ, ವಿಕ್ರಂಗೌಡ ಎನ್ ಕೌಂಟರ್ ನ್ಯಾಯಾಂಗ ತನಿಖೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

Karnataka Kerala and Tamil Nadu 6 Naxalites agree to surrender to government sat

ಬೆಂಗಳೂರು/ಚಿಕ್ಕಮಗಳೂರು (ಡಿ.07): ಕಳೆದ ಒಂದು ವಾರದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಬಂದಿದ್ದ ನಕ್ಸಲರು ಕಾಡಿನಿಂದ ಮತ್ತೆ ತಪ್ಪಿಸಿಕೊಂಡು ಹೋಗು ನಕ್ಸಲ್ ಚಟುವಟಿಕೆಯನ್ನು ಆರಂಭಿಸಿದ್ದನ್ನು ನಾವು ಸಹಿಸುವುದಿಲ್ಲ. ನಿಮಗೆ ಇನ್ನೂ ಒಂದು ಚಾನ್ಸ್ ಕೊಡುತ್ತೇವೆ. ಕೂಡಲೇ ಬಂದು ಸರ್ಕಾರಕ್ಕೆ ಶರಣಾಗಿ, ನಿಮಗೆ ಸರ್ಕಾರದಿಂದ ಮುಖ್ಯವಾಹಿನಿಗೆ ತರಲು ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದ್ದರು. ಸಿದ್ದರಾಮಯ್ಯ ನೀಡಿದ ಒಂದೇ ಒಂದು ಅವಾಜ್‌ಗೆ ನಕ್ಸಲರು ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡು ಪತ್ರವನ್ನು ಬರೆದಿದ್ದಾರೆ.

ಈಗಾಗಲೇ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರೀಕ ಸಮಿತಿ ಸಂಪರ್ಕದಲ್ಲಿರುವ ನಕ್ಸಲರು. ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ), ವನಜಾಕ್ಷಿ (ಬಾಳೆಹೊಳೆ ಕಳಸ), ಸುಂದರಿ (ಕುಂತಲೂರು ದಕ್ಷಿಣ ಕನ್ನಡ), ಮಾರಪ್ಪ ಅರೋಳಿ (ಕರ್ನಾಟಕ), ವಸಂತ (ತಮಿಳುನಾಡು) ಹಾಗೂ ಎನ್.ಜೀಶಾ (ಕೇರಳ) ಶರಣಾಗತಿ ಆಗಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೆಲವೊಂದು ಬೇಡಿಕೆಗಳನ್ನಿಟ್ಟು ತಮ್ಮ ಬೆಡಿಕೆ ಈಡೇರಿಕೆಗೆ ಮನವಿ ಮಾಡಿದ್ದಾರೆ. 

ಜಯಣ್ಣ, ರಾಜಣ್ಣ ಇಬ್ಬರು ನಕ್ಸಲರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ನಾಳೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ ಶರಣಾಗತಿಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಒತ್ತುವರಿ ತೆರವು, ಕಸ್ತೂರಿರಂಗನ್ ವರದಿಗೆ ವಿರೋಧ, ವಿಕ್ರಂಗೌಡ ಎನ್ ಕೌಂಟರ್ ನ್ಯಾಯಂಗ ತನಿಖೆ ಬೇಡಿಕೆ ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬಂದ ಜೈಲಿನಲ್ಲಿರುವವರಿಗೆ ಪ್ಯಾಕೇಜ್ ನೀಡಬೇಕು. ಕೇರಳ ಜೈಲಿನಲ್ಲಿ ಬಿ.ಜಿ.ಕೃಷ್ಣಮೂರ್ತಿ, ಅಂಗಡಿ  ಮೂರ್ತಿ ಸದ್ಯಕ್ಕೆ ಕೇರಳ ಜೈಲಿನಲ್ಲಿದ್ದಾರೆ. ಈಗಾಗಲೇ ಮುಖ್ಯಕಾರ್ಯದರ್ಶಿ ಜೊತೆ ಸಮಿತಿ ಸಭೆಯಾಗಿದೆ. 6 ಜನ ಈಗಾಗಲೇ ಶಾಂತಿಗಾಗಿ ನಾಗರೀಕ ವೇದಿಕೆಗೆ ಶರಣಾಗತಿಗೆ ಪತ್ರ ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
ನಕ್ಸಲರ ಶರಣಾಗತಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಸಿದ್ದರಾಮಯ್ಯ ಅವರು, ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ  ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು  ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ನನ್ನನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ  ಶರಣಾಗತರಾಗಿ  ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ.

ಇದನ್ನೂ ಓದಿ: ಕರ್ನಾಟಕದ ನಕ್ಸಲರ ಶರಣಾಗತಿಗೆ ಮತ್ತೊಂದು ಚಾನ್ಸ್ ಕೊಟ್ಟ ಸಿಎಂ ಸಿದ್ದರಾಮಯ್ಯ!

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು  ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ , ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ. ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ ಮತ್ತು ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ.

ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ. ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ನಕಲಿ ಎನ್‌ಕೌಂಟರ್ ಆರೋಪ; ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ!

Latest Videos
Follow Us:
Download App:
  • android
  • ios