ಸಚಿವ ರಾಜಣ್ಣ ಹನಿಟ್ರ್ಯಾಪ್ ಕುರಿತು ಮಾತನಾಡಿದ ಮಹದೇವಪ್ಪ, ಹನಿಟ್ರ್ಯಾಪ್ ಮಾಡುವವರಿಗೆ ಸಿಎಂ ಪರ ವಿರುದ್ಧ ಎಂಬುದು ಇರೋಲ್ಲ. ಸಿದ್ದರಾಮಯ್ಯ ಅವರೇ ಮುಂದಿನ ಮೂರು ಬಜೆಟ್ ಮಂಡಿಸುತ್ತಾರೆ ಎಂದರು. ಹನಿ ಟ್ರ್ಯಾಪ್ ಮಾಡೋರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಮೈಸೂರು (ಮಾ.22): ಸಿಎಂ ಬಗ್ಗೆ ಮಾತನಾಡಿದರೆ ಕೆಲವರಿಗೆ ಹೊಟ್ಟೆ ಕಿಚ್ಚು ಆಗಬಹುದು. ಸಣ್ಣ ಮನಸ್ಸಿನ ಜನರಿಗೆ ಆ ತರಹದ ಮನಸ್ಥಿತಿ ಇದೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮೃ ವಿರುದ್ಧ ಸಚಿವ ಡಾ ಎಚ್‌ಸಿ ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ರಾಜಣ್ಣ ಹನಿಟ್ರ್ಯಾಪ್ ಕುರಿತು ನೀಡಿರುವ ಹೇಳಿಕೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹನಿಟ್ರ್ಯಾಪ್ ಮಾಡುವವರಿಗೆ ಸಿಎಂ ಪರ ವಿರುದ್ಧ ಎಂಬುದು ಯಾವುದೂ ಇರೋಲ್ಲ. ನಾವು ಸಿಎಂ ಪರ ಇರೋದಕ್ಕೆ ಟಾರ್ಗೆಟ್ ಆಗುತ್ತೇವೆ ಎಂಬ ವಾದ ನಾನಂತೂ ಒಪ್ಪುವುದಿಲ್ಲ. ಹನಿಟ್ರ್ಯಾಪ್‌ನಿಂದ ರಾಜಣ್ಣ ಅವರ ಅಗ್ರೆಸಿವ್‌ನೆಸ್ ಏನೂ ಕಡಿಮೆ ಆಗೋಲ್ಲ. ಅವರಿಗೆ ಹಿಂದಿನ ಅಗ್ರೆಸಿವ್‌ನೆಸ್ ಈಗಲೂ ಇದೆ ಎಂದರು. 

ಇದನ್ನೂ ಓದಿ:ಹನಿಟ್ರ್ಯಾಪ್ ಪ್ರಕರಣ: ಯಾರೇ ಆಗಿದ್ದರೂ ಸುಮ್ಮನೆ ಬಿಡೋಲ್ಲ, ಮಟ್ಠಹಾಕುತ್ತೇವೆ, ಸಿಎಂ ಖಡಕ್ ವಾರ್ನಿಂಗ್!

ಅನುಮಾನ ಬೇಡ ಸಿದ್ದರಾಮಯ್ಯ ಅವರೇ ಸಿಎಂ:

ಸಿಎಂ ಅವರ ರಾಜಕೀಯ ಆರೋಗ್ಯ ಬಹಳ ಚೆನ್ನಾಗಿದೆ. ನಮ್ಮ ಸರ್ಕಾರದ ಅವಧಿ ಇನ್ನೂ ಮೂರು ವರ್ಷ ಇದೆ. ಸಿದ್ದರಾಮಯ್ಯನವರೇ ಆರ್ಥಿಕ ಸಚಿವರಾಗಿರುವ ಕಾರಣ ಮುಂದಿನ ಮೂರು ಬಜೆಟ್ ಕೂಡ ಅವರೇ ಮಂಡಿಸುತ್ತಾರೆ. ಇದರಲ್ಲಿ ಯಾವ ಆನುಮಾನಗಳು ಯಾರಿಗೂ ಬೇಡ ಎಂದರು. ಮತ್ತೆ ಈ ಪ್ರಶ್ನೆ ಕೇಳುವ ವಿಚಾರವೂ ಅಲ್ಲ. ಅವರೇ ಆರ್ಥಿಕ ಸಚಿವರಾದ ಮೇಲೆ ಅವರೇ ಬಜೆಟ್ ಮಂಡಿಸಬೇಕು ತಾನೇ. ಬಿಜೆಪಿಯವರು ಸುಮ್ಮನೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅವರು ಮೊದಲು ಅವರ ಪಕ್ಷವನ್ನ ಶಿಸ್ತಾಗಿ ಇಟ್ಟುಕೊಳ್ಳಲಿ. ನಮ್ಮ ಬಗ್ಗೆ ಯಾಕೆ ಅವರಿಗೆ ಚಿಂತೆ ಎನ್ನುವ ಮೂಲಕ ಅಧಿಕಾರ ಹಸ್ತಾಂತರ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಹನಿ ಟ್ರ್ಯಾಪ್ ಮಾಡೋರಿಗೆ ಕಠಿಣ ಶಿಕ್ಷೆ:

ಸ್ವಾರ್ಥ ಸಾಧನೆಗೆ ಹನಿ ಟ್ರ್ಯಾಪ್ ಮಾಡುವವರಿಗೆ ಕಠಿಣ ಶಿಕ್ಷಯಾಗುವ ಕಾನೂನು ಜಾರಿಗೆ ಬರಬೇಕು. ಇದು ರಾಷ್ಟ್ರ ಮಟ್ಟದಲ್ಲೇ ಈ ಕಾಯ್ದೆ ಆಗಬೇಕು. ಇದು ರಾಜಕೀಯವಾಗಿ ಮಾತ್ರ ಅಲ್ಲ, ಎಲ್ಲಾ ಕ್ಷೇತ್ರದಲ್ಲಿ ಹನಿಟ್ರ್ಯಾಪ್ ಹೆಚ್ಚಾಗುತ್ತಿದೆ. ಖಾಸಗಿ ಕ್ಷಣಗಳನ್ನ ಬಹಿರಂಗ ಮಾಡಿ ವ್ಯಕ್ತಿತ್ವ ಹರಣ ಮಾಡುವ ಸಂಚು ಇದು. ಇದಕ್ಕೆ ತಕ್ಕೆ ಶಿಕ್ಷೆ ಆಗಬೇಕು. ಸದೃಢ ಕಾಯ್ದೆ ಜಾರಿಗೆ ನನ್ನ ಒತ್ತಾಯವೂ ಇದೆ. ರಾಜಣ್ಣ ಅವರ ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆಯಾಗುತ್ತದೆ. ತನಿಖೆಯಲ್ಲಿ ಮಾತ್ರ ಯಾರು ಮಾಡಿದರು, ಯಾಕೆ ಮಾಡಿದ್ರು, ಅವರ ಉದ್ದೇಶ ಏನು ಎಂಬುದು ಗೊತ್ತಾಗುತ್ತದೆ.
ಸುಮ್ಮನೆ ಊಹಾಪೋಹದ ಮಾತು ಬೇಡ ಎಂದರು.

ಇದನ್ನೂ ಓದಿ: ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಹಾಯ್ ಎಂದರೆ ಹಲೋ ಎನ್ನುತ್ತಾರೆ; ಅಲ್ಲಿಂದ ಹನಿ ಟ್ರ್ಯಾಪ್ ಶುರು ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲಾ ನನಗೆ ಗೊತ್ತಾಗುವುದಿಲ್ಲ. ನಾನು ಎಲ್ಲರಿಗೂ ಹಲೋ ಎನ್ನುತ್ತೇನೆ. ಎಲ್ಲರೂ ನನಗೆ ಪ್ರತಿಕ್ರಿಯೆ ಕೊಡುತ್ತಾರೆ.

ಅದರಿಂದ ಟ್ರ್ಯಾಪ್ ಅನ್ನೊದು ಹೇಗೆ? ನನಗೆ ಅಂತಹ ಯಾವ ವಿಚಾರಗಳು ಗೊತ್ತಾಗುವುದಿಲ್ಲ. ನನ್ನನ್ನು ತುಳಿಯುವ ಪ್ರಯತ್ನ ಯಾರ ಮಾಡುತ್ತಾರೋ, ಮಾಡಿದಾರೋ ಅದು ನನಗೆ ಗೊತ್ತಿಲ್ಲ.
ಆದರೆ ನಾನಂತೂ ಸದೃಡವಾಗಿ ಕುಳ್ತಿದ್ದೇನೆ ಎಂದರು. ಇದೇ ವೇಳೆ ಹನಿ ಟ್ರ್ಯಾಪ್ ವಿಚಾರದಲ್ಲಿ ರಾಜಣ್ಣ ಜೊತೆ ಪ್ರತ್ಯೇಕ ಸಭೆ ನಡೆಸುವ ಅಗತ್ಯ ಏನೂ ಇಲ್ಲ. ಏಕಂದರೆ ಈ ವಿಚಾರ ಈಗಾಗಲೇ ತೀರ್ಮಾನ ಆಗಿದೆ. ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದರು.