ಭದ್ರತೆ ದೃಷ್ಟಿಯಿಂದ ಬಳ್ಳಾರಿ ಜೈಲಿಗೆ ಶಿಫ್ಟ್; ದರ್ಶನ್ ತಲುಪಿದ್ದಾರೋ ಇಲ್ವೋ ನನಗೆ ಮಾಹಿತಿ ಇಲ್ಲ: ಗೃಹ ಸಚಿವ
ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಘಟನೆ ಆದ ನಂತರ ಜೈಲಾಧಿಕಾರಿಗಳು ಇವರನ್ನೆಲ್ಲ ಸ್ಥಳಾಂತರ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ತಲುಪಿದ್ದಾರೋ ಏನೋ ಗೊತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರು (ಆ.29): ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಘಟನೆ ಆದ ನಂತರ ಜೈಲಾಧಿಕಾರಿಗಳು ಇವರನ್ನೆಲ್ಲ ಸ್ಥಳಾಂತರ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ತಲುಪಿದ್ದಾರೋ ಏನೋ ಗೊತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಇರೋ ಕಾರಣಕ್ಕೆ ದರ್ಶನ್‌ರನ್ನ ಬಳ್ಳಾರಿಗೆ ಶಿಫ್ಟ್ ಮಾಡಿದ್ದಾರೆಂದು ಆರೋಪ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಮೀರು ಉಸ್ತುವಾರಿ ಸಚಿವರಾಗಿರೋದಕ್ಕೆ ಅಲ್ಲಿಗೆ ಶಿಫ್ಟ್ ಮಾಡಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು. ಭದ್ರತೆ ದೃಷ್ಟಿಯಿಂದ ಯಾರಾರು ಯಾವ ಜೈಲಿಗೆ ಹಾಕಬೇಕೋ ಅದನ್ನ ಜೈಲಾಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಎಂಟು ಹತ್ತು ಜನರನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಆರೋಪಿಗಳು ತಲುಪಿದ್ದಾರಾ ಇಲ್ಲವೋ ನನಗೆ ಮಾಹಿತಿ ಬಂದಿಲ್ಲ. ಬಳ್ಳಾರಿ ಜೈಲಿಗೇ ನಿರ್ದಿಷ್ಟವಾಗಿ ದರ್ಶನ್ ಶಿಫ್ಟ್ ಮಾಡಬೇಕು ಅಂತೇನಿಲ್ಲ. ಭದ್ರತೆ ದೃಷ್ಟಿಯಿಂದ ಯಾವ್ಯಾವ ಕಾರಾಗೃಹಕ್ಕೆ ಕಳಿಸಬೇಕು ಅದನ್ನ ಜೈಲಾಧಿಕಾರಿಗಳೇ ನಿರ್ಧಾರ ಮಾಡಿರೋದು. ಬಳ್ಳಾರಿ ಉಸ್ತುವಾರಿ ಜಮೀರ್ ಆಗಿರುವುದಕ್ಕೂ ದರ್ಶನ್ ಸ್ಥಳಾಂತರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ದರ್ಶನ್‌ಗೆ ಬಳ್ಳಾರಿ ಸೇಫ್ ಅಲ್ಲ, ತಿಹಾರ್ ಜೈಲ್‌ಗೆ ಶಿಫ್ಟ್ ಮಾಡಿ: ಮಾಜಿ ಕೈದಿ ಶಿಗ್ಲಿ ಬಸ್ಯಾ ಸ್ಫೋಟಕ ಹೇಳಿಕೆ
ದರ್ಶನ್‌ರನ್ನ ಯಾವುದೇ ಜಿಲ್ಲೆಯ ಜೈಲಿಗೆ ಕಳಿಸಿದರೂ ಅಲ್ಲೊಬ್ಬರು ಉಸ್ತುವಾರಿ ಸಚಿವರು ಇದ್ದೇ ಇರ್ತಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಜಮೀರ್ ಅಹಮದ್ ದರ್ಶನ್ ಗೆ ಆಪ್ತರು ಇದ್ದರೇನಂತೆ. ಯಾರೇ ಇದ್ರೂ ಕಾನೂನು ಪ್ರಕಾರ ಕ್ರಮ ತಗೋತೀವಿ. ಅವರು ಉಸ್ತುವಾರಿ ಆಗಿದ್ದಾರೆ, ಏನೋ ಆಗಿಬಿಡಬಹುದು ಅನ್ನೋದು ಸತ್ಯಕ್ಕೆ ದೂರವಾದ ವಿಚಾರ ಎಂದರು.