Asianet Suvarna News Asianet Suvarna News

ದರ್ಶನ್‌ಗೆ ಬಳ್ಳಾರಿ ಸೇಫ್ ಅಲ್ಲ, ತಿಹಾರ್ ಜೈಲ್‌ಗೆ ಶಿಫ್ಟ್ ಮಾಡಿ: ಮಾಜಿ ಕೈದಿ ಶಿಗ್ಲಿ ಬಸ್ಯಾ ಸ್ಫೋಟಕ ಹೇಳಿಕೆ

ನಟ ದರ್ಶನ್ ಅವರನ್ನ ಬಳ್ಳಾರಿ ಜೈಲಿನ ಬದಲು ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು. ಬಳ್ಳಾರಿ ಜೈಲು ಸೇಪ್ ಅಲ್ಲ ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯಲ್ಲಿ ಮಾಜಿ ಕೈದಿ ಶಿಗ್ಲಿ ಬಸ್ಯಾ ಹೇಳಿದ್ದಾರೆ.

kannada actor darshan shifted ballari jail from bengaluru jail in renukaswamy murder case shigli basya react rav
Author
First Published Aug 29, 2024, 11:45 AM IST | Last Updated Aug 29, 2024, 11:48 AM IST

ಗದಗ (ಆ.29); ನಟ ದರ್ಶನ್ ಅವರನ್ನ ಬಳ್ಳಾರಿ ಜೈಲಿನ ಬದಲು ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು. ಬಳ್ಳಾರಿ ಜೈಲು ಸೇಪ್ ಅಲ್ಲ ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯಲ್ಲಿ ಮಾಜಿ ಕೈದಿ ಶಿಗ್ಲಿ ಬಸ್ಯಾ ಹೇಳಿದ್ದಾರೆ.

ಬೆಂಗಳೂರು ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ಹಿನ್ನೆಲೆ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಆರೋಪಿ ದರ್ಶನ್‌ರನ್ನ ಶಿಫ್ಟ್ ಮಾಡಲಾಗಿದೆ. ಬಳ್ಳಾರಿ ಜೈಲು ಸುರಕ್ಷಿತವಾ? ಇಲ್ಲಿನ ಜೈಲಿನಲ್ಲಿ ರಾಜಾತಿಥ್ಯ ಸಿಗುವುದಿಲ್ಲವ? ಈ ವಿಚಾರವಾಗಿ ಮಾಜಿ ಕೈದಿ ಶಿಗ್ಲಿ ಬಸ್ಯಾನನ್ನು ಮಾತನಾಡಿದಾಗ, ದರ್ಶನ್‌ಗೆ ಬಳ್ಳಾರಿ ಜೈಲು ಸೇಫ್ ಅಲ್ಲ ಎಂದಿದ್ದಾರೆ.

ಜೈಲಲ್ಲಿ ರಾಜಾಥಿತ್ಯ: ನಟ ದರ್ಶನ್‌ ಸೇರಿ ಐವರನ್ನು ಪ್ರಶ್ನಿಸಿದ ಪೊಲೀಸರು

ಬಳ್ಳಾರಿ ಜೈಲಿನಲ್ಲೂ ನಟ ದರ್ಶನ್‌ಗೆ ನೂರಾರು ಅಭಿಮಾನಿಗಳಿದ್ದಾರೆ. ಬೆಂಗಳೂರಿನಂತೆ ಬಳ್ಳಾರಿ ಜೈಲ್ ನಲ್ಲೂ ದರ್ಶನ್‌ ಗೆ ರಾಜ್ಯಾದಿತ್ಯ ಸಿಗುತ್ತೆ. ಬಳ್ಳಾರಿ ಜೈಲಿನಿಂದ ಗ್ರೇಟ್ ಎಸ್ಕೇಪ್ ಆದವರೂ ಇದ್ದಾರೆ. ಇಂತಲ್ಲಿ ದರ್ಶನರನ್ನ ಶಿಫ್ಟ್ ಮಾಡಿರೋದು ತಪ್ಪು. ದರ್ಶನ್‌ಗೆ ಇದು ಸುರಕ್ಷಿತ ಜಾಗ ಅಲ್ಲ. ದರ್ಶನ್ ಇಲ್ಲಿಗೆ ಶಿಫ್ಟ್ ಆದ್ರೆ ಅಪರಾಧಗಳ ಮೇಲೆ ಅಪರಾಧ ಹೆಚ್ಚಾಗ್ತವೆ. ಅಲ್ಲದೆ. ಜೈಲಿನಲ್ಲಿ ಮೊಬೈಲ್, ಗಾಂಜಾ ಎಲ್ಲವೂ ಸಿಗುತ್ತೆ. ಬೆಂಗಳೂರು ಜೈಲಿನಲ್ಲಿ ಮಹಿಳಾ ಕೈದಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.  ದುಡ್ಡು ಕೊಟ್ರೆ ಜೈಲಿನಲ್ಲಿ ಬೇಡಿದ್ದು ಸಿಗುತ್ತೆ ಎಂದರು.

ಬೆಂಗಳೂರಿನಿಂದ ಇಲ್ಲಿಗೆ ಯಾವ ಕಾರಣಕ್ಕೆ ಶಿಫ್ಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ರಾಜಾತಿಥ್ಯ ಮಾಡಿದ್ದಕ್ಕೆ ಇಲ್ಲಿಗೆ ಶಿಫ್ಟ್ ಮಾಡಿದ್ರೆ ಸಿಗೊಲ್ಲ ಎಂದು ಮಾಡಿದ್ರೆ ಅದು ತಪ್ಪು ಇಲ್ಲಿನೂ ಸಾಕಷ್ಟು ಅಭಿಮಾನಿಗಳಿದ್ದಾರೆ ಇಲ್ಲಿಯೂ ರಾಜಾತಿಥ್ಯ ಸಿಗುತ್ತೆ. ಹೀಗಾಗಿ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಹಾಕುವ ಬದಲು ತಿಹಾರ್ ಜೈಲಿಗೆ ಶಿಫ್ಟ್ ಮಾಡಿ. ಅಲ್ಲಿ ದರ್ಶನ್‌ಗೆ ಮನಪರಿವರ್ತನೆ ಆಗಲಿ ಎಂದು ಹೇಳಿದ ಶಿಗ್ಲಿ ಬಸ್ಯಾ.

Latest Videos
Follow Us:
Download App:
  • android
  • ios