ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು 8 ತಂಡಗಳನ್ನು ರಚನೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು
ಬೆಂಗಳೂರು (ಮಾ.3) ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು 8 ತಂಡಗಳನ್ನು ರಚನೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಪ್ರಕರಣದ ಕುರಿತು ಕೆಲವು ಮಾಹಿತಿಗಳು ಲಭ್ಯವಾಗಿವೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. FSL ಅವರು ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡಿ ಟೆಕ್ನಿಕಲ್ ಮಾಹಿತಿ ಕಲೆ ಹಾಕ್ತಿದ್ದಾರೆ. ಸ್ಪೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ ಆದಷ್ಟು ಬೇಗ ಹಿಡಿಯುತ್ತೇವೆ. ಒಂದೆರಡು ದಿನ ಆಗಬಹುದು ಆದರೆ ಖಂಡಿತ ಆರೋಪಿಯನ್ನು ಬಿಡುವುದಿಲ್ಲ ಎಂದು ತಿಳಿಸಿದರು.
ಕುಕ್ಕರ್ ಬಾಂಬ್ ಬಗ್ಗೆ ಈಗ ಡಿಕೆಶಿ ಏನೆನ್ನುತ್ತಾರೆ?: ಸಿಎಂ ಬೊಮ್ಮಾಯಿ ತಿರುಗೇಟು
ಆರೋಪಿ ಯಾವುದೇ ಸಂಘಟನೆಗೆ ಸೇರಿದ್ದಾನೆಯೇ ಅಥವಾ ಬೇರೆ ಕಾರಣಗಳಿದ್ದವೆ ಎಂಬ ಬಗ್ಗೆ ತನಿಖೆ ನಡೆಸಲಾಗ್ತಿದೆ. ನಾನು ಘಟನೆ ನಡೆದ ಸ್ಥಳಕ್ಕೆ ಹೋದಾಗ ಹೋಟೆಲ್‌ನವರು ಯಶಸ್ವಿಯಾಗಿದ್ದಾರೆ. 11 ಕಡೆ ಹೋಟೆಲ್ ಪ್ರಾರಂಭ ಮಾಡಿದ್ದಾರೆ. 12ನೇ ಕಡೆ ಓಪನ್ ಮಾಡುತ್ತಿದ್ದರು ಇದನ್ನು ಸಹಿಸಲಾಗದೆ ಈ ರೀತಿ ಮಾಡಿದ್ದಾರೆ ಎಂದು ಅಲ್ಲಿನ ಜನ ಮಾತನಾಡುತ್ತಿದ್ದರು. ಇದಲ್ಲದೆ ಚುನಾವಣೆ ಬರುತ್ತದೆ. ಈ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನ ಅನ್ ಸೇಫ್ ನಗರ ಮಾಡಬೇಕು ಅಂತ ಹೀಗೆ ಮಾಡಿದ್ರಾ ಅಂತನೂ ತನಿಖೆ ಮಾಡ್ತಿದ್ದೇವೆ. ಬೆಂಗಳೂರಿಗೆ ಹೂಡಿಕೆದಾರರು ಬರ್ತಿದ್ದಾರೆ. ಈ ಸಮಯದಲ್ಲಿ ಹೀಗೆ ಮಾಡಿದ್ರೆ ಬಂಡವಾಳ ಹಾಕೋರು ಬರಲ್ಲ ಅಂತ ಹೀಗೆ ಮಾಡಿರಬಹುದು ಏನೇ ಆಗಿರಲಿ ಎಷ್ಟೇ ಕಷ್ಟ ಆದ್ರೂ ಕೇಸ್ ಬೇಧಿಸುತ್ತೇವೆ ಎಂದರು.
ಈ ಬ್ಲಾಸ್ಟ್ ಗೂ ಬೇರೆ ಬ್ಲಾಸ್ಟ್ ಗೂ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೆ ಟೆಕ್ನಿಕಲ್ ಅದೇ ರೀತಿ ಜೋಡಿಸಿದ್ದಾರೆ. ಹಾಗಂತ ಅವರೆ ಮಾಡಿದ್ದಾರೆ ಅಂಥ ಅರ್ಥ ಅಲ್ಲ. ಟೆಕ್ನಿಕಲಿ ಬ್ಯಾಟರಿ ಯೂಸ್ ಮಾಡಿರೋದು, ಮೊಳೆ, ಟೈಮರ್ ಎಲ್ಲಾ ನೋಡಿದ್ರೆ ಸಾಮ್ಯತೆ ಇದೆ. ಇದನ್ನ ಇನ್ನು ತನಿಖೆ ಮಾಡಬೇಕು. ಆ ಜನರೇ ಮಾಡಿದ್ದಾರಾ ನಮಗೆ ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ನಾನು ಎಲ್ಲರಿಗೂ ವಿನಂತಿ ಮಾಡ್ತೀನಿ. ಸಿಎಂ ಅಥವಾ ನಾನು ಹೇಳಿದ್ರೆ ಮಾತ್ರ ಅಧಿಕೃತ ಹೇಳಿಕೆ ಅಂತ ಪರಿಗಣಸಿಬೇಕು ಎಂದರು.
ಪ್ರಕರಣ ಕುರಿತು ಬಹಳ ಜನ ಏನೇನೋ ಮಾತಾಡ್ತಿದ್ದಾರೆ. ನಮಗೂ ಅದರಿಂದ ಸ್ವಲ್ಪ ಇಕ್ಕಟ್ಟು ಆಗುತ್ತೆ. ಹೀಗಾಗಿ ನಾನು, ಸಿಎಂ, ಗೃಹ ಇಲಾಖೆ ಆ ಬಗ್ಗೆ ಮಾತಾಡಿದ್ರೆ ಮಾತ್ರ ಅಧಿಕೃತ ಎಂದು ಪರಿಗಣಿಸಬೇಕು ಎಂದರು. ಇದೇ ವೇಳೆ ಬಾಂಬ್ ತೀವ್ರತೆ ಹೇಗಿದೆ ಎಂಬ ಪ್ರಶ್ನೆಗೆ, ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ ದೊಡ್ಡ ಅನಾಹುತ ಆಗಿಲ್ಲ. ಕ್ವಾಂಟಿಟಿ ಕಡಿಮೆ ಇರಬಹುಉದು. ಹೆಚ್ಚು ಕ್ವಾಂಟಿಟಿ ಯೂಸ್ ಮಾಡಿದ್ರೆ ಇಂಪ್ಯಾಕ್ಟ್ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನೆಟ್ ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಸೈಡಿಗೆ ಸಿಡಿದಿದ್ದರೆ ಬಹಳ ಜನರಿಗೆ ಪ್ರಾಣಾಪಾಯ ಆಗ್ತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ.
ಕೆಫೆ ಬ್ಲಾಸ್ಟ್ ಪ್ರಕರಣ ಸಂಬಂಧ NIA, NSG ಇಬ್ಬರೂ ಬಂದು ತನಿಖೆ ಮಾಡ್ತಿದ್ದಾರೆ. ನ್ಯಾಷನಲ್ ಸಂಘಟನೆ ಇದ್ದಾ ಅಂತ ತನಿಖೆ ಮಾಡ್ತಿದ್ದಾರೆ. ಅವರಿಗೂ ಇಂತಹ ಘಟನೆ ಬಗ್ಗೆ ಯಾವ ಸಂಘಟನೆ ಅಂತ ಮಾಹಿತಿ ಇರುತ್ತೆ. ಅ ಬಗ್ಗೆ ತನಿಖೆ ಮಾಡಲಾಗ್ತಿದೆ. ಇದೊಂದು ನಮಗೆ ಸವಾಲು. ಚಾಲೆಂಜ್ ಇದೆ. NIA, NSGಗೂ ಚಾಲೆಂಜ್ ಇದೆ ಎಂದರು.
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ, ಐಇಡಿ ಬಳಕೆ ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು ಸೇಫ್ ಸಿಟಿ ಮಾಡೋಕೆ ನಾವು ಕೆಲಸ ಮಾಡ್ತಿದ್ದೇವೆ. ನಮ್ಮ ಸರ್ಕಾರ ಸೇಫ್ ಸಿಟಿ ಮಾಡಲು ಬಹಳ ಹಣ ಖರ್ಚು ಮಾಡಿದೆ, ಎಲ್ಲೆಡೆ ಕ್ಯಾಮೆರಾ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡುತ್ತಿದ್ದೇವೆ. ಬೆಂಗಳೂರು ಈಗ ಸೇಫ್ ನಲ್ಲಿ ಎಷ್ಟೋ ಉತ್ತಮವಾಗಿದೆ. ಹೊಯ್ಸಳ ಕೂಡಾ 7-8 ನಿಮಿಷಗಳಿಗೆ ಸ್ಥಳಕ್ಕೆ ಬರ್ತಿದೆ. ಬಾಂಬ್ ಬ್ಲಾಸ್ಟ್ ಸಂಬಂಧ ಎಲ್ಲಾ ಕ್ಯಾಮೆರಾಗಳನ್ನು ಪರಿಶೀಲನೆ ಮಾಡ್ತಿದ್ದೇವೆ. 40-50 ಕ್ಯಾಮರಾ ಪರಿಶೀಲನೆ ಮಾಡ್ತಿದ್ದೇವೆ. ಆರೋಪಿ ಬಿಎಂಟಿಸಿಯಲ್ಲಿ ಓಡಾಟ ನಡೆಸಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ 26 ಬಸ್ ಗಳು ಬ್ಲಾಸ್ಟ್ ಸಮಯದಲ್ಲಿ ಓಡಾಡಿವೆ. ಎಲ್ಲ ಬಸ್ ಕ್ಯಾಮೆರಾ ಪರಿಶೀಲನೆ ಮಾಡಲಾಗಿದೆ. ಆದರೆ ಒಂದು ಕ್ಯಾಮೆರಾದಲ್ಲಿ ಹೋಗಿರುವುದು ಕಂಡುಬಂದಿದೆ. ಅದರಲ್ಲಿ ಆತ ಮಾಸ್ಕ್, ಕ್ಯಾಪ್, ಗ್ಲಾಸ್ ಎಲ್ಲಾ ಹಾಕಿದ್ದಾನೆ. ಅಲ್ಲೂ ಕೂಡಾ ಅಷ್ಟು ಕ್ಲಾರಿಟಿ ಆಗ್ತಿಲ್ಲ. ತನಿಖೆ ಆಗ್ತಿದೆ. ಹೆಚ್ಚು ತಾಂತ್ರಿಕ ವಿಚಾರ ಹೇಳೋಕೆ ಆಗೊಲ್ಲ. ಆತ ಸಿಗೋವರೆಗೂ ಮಾಹಿತಿ ಕೊಡೋಕೆ ಆಗೊಲ್ಲ.ಎಂದರು.
