ಬೆಂಗಳೂರು(ಏ.24): ರಾಜ್ಯದಲ್ಲಿ ಸದ್ಯ ಬರೋಬ್ಬರಿ 57 ತಾಸುಗಳ ಮ್ಯಾರಥಾನ್ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆ ಅಗತ್ಯ ಹಾಗೂ ತುರ್ತು ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗಗೆ ಕಡಿವಾಣ ಬಿದ್ದಿದೆ. ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಈ ಕರ್ಫ್ಯೂಗೆ ಜನರಿಂದಲೂ ಉತ್ಯಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕರ್ಪ[್ಯೂ, ಆಕ್ಸಿಜನ್ ಪೂರೈಕೆ ಹಾಗೂ ಉಚಿತ ಲಸಿಕೆ ನೀಡುವ ಬಗ್ಗೆ ಮಾತನಾಡಿದ್ದಾರೆ.

ಸರ್ಕಾರದ ಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ

ನೈಟ್‌ ಕರ್ಫ್ಯೂ ಹಾಗೂ ವೀಕೆಂಡ್‌ ಕರ್ಫ್ಯೂ ಬಗ್ಗೆ ಮಾಧ್ಯಮಗೋಂದಿಗೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ಕೊರೋನಾ ಚೈನ್ ಲಿಂಕ್ ಮುರಿಯುವುದಕ್ಕೆ ಇದು ಅತ್ಯಗತ್ಯ. ಜನ ಸಹಕಾರ ಕೊಡ್ತಿದ್ದಾರೆ, ಜನರಲ್ಲೂ ಅರಿವು ಮೂಡಿದೆ. ಕೊರೋನಾ ಕಳೆದ ಬಾರಿಗಿಂತ ಹೆಚ್ಚು ತೀವ್ರವಾಗಿದೆ. ಪೊಲೀಸರು ಕೂಡ ಕರ್ತವ್ಯ ನಿಷ್ಡೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆಕ್ಸಿಜನ್ ಪೂರೈಕೆ ಬಗ್ಗೆಯೂ ಮಾತನಾಡಿದ ಅವರು 'ಆಕ್ಸಿಜನ್ ಸಲುವಾಗಿ ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ, ನಿನ್ನೆ ಮೂರು ತಾಸು ಸಭೆ ಮಾಡಿದ್ದೇವೆ. ಸುಮಾರು 800 ಮೆಟ್ರಿಕ್ ಟನ್ ಸರಬರಾಜು ಆಗ್ತಿದೆ. ಪ್ರತಿನಿತ್ಯ ಬೇಡಿಕೆ ಹೆಚ್ಚಾಗ್ತಿದೆ. ಚೀಫ್ ಸೆಕ್ರೆಟರಿ ಆಕ್ಸಿಜನ್ ಉತ್ಪಾದಕರ ಬಳಿ ಮಾತನಾಡಿ ಹೆಚ್ಚುವರಿ 100 ಟನ್ ಪಡೆದುಕೊಂಡಿದ್ದೇವೆ. ನಮ್ಮ ಪವರ್ ಪ್ಲ್ಯಾಂಟ್ ನಲ್ಲೂ ಆಕ್ಸಿಜನ್ ಉತ್ಪಾದನೆ ಮಾಡ್ತೇವೆ. ಕೆಲವು ಸಿಮೆಂಟ್ ಫ್ಯಾಕ್ಟರಿಗಳಲ್ಲೂ ಉತ್ಪಾದನೆ ಆಗಿದ್ದನ್ನು ಮೆಡಿಕಲ್ ಪರ್ಪಸ್ ಗೆ ಬಳಸ್ತೇವೆ. ಒಟ್ಟಾರೆ ನಮ್ಮ ಪ್ರಯತ್ನ ಮಾಡಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಫ್ರೀ ಲಸಿಕೆ

ಇದೇ ವೇಳೆ ಉಚಿತ ಲಸಿಕೆ ನೀಡುವ ವಿಚಾರವಾಗಿಯೂ ಮಾತನಾಡಿದ ಗೃಹ ಸಚಿವರು 'ರಾಜ್ಯದಲ್ಲೂ ಉಚಿತವಾಗಿ ಲಸಿಕೆ ನೀಡಬೇಕೋ, ಅಥಾವಾ ದರ ನಿಗದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಿರ್ಧರಿಸ್ತೇವೆ ಎಂದಿದ್ದಾರೆ. ಈ ಮೂಲಕ ಉಚಿತ ಲಸಿಕೆ ನೀಡುವ ಸಾಧ್ಯತೆಗಳಿವೆ ಎಂಬ ಸುಳಿವು ನಿಡಿದ್ದಾರೆ.