ಬೆಂಗಳೂರು(ಜು.06): ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಪುನಃ ಲಾಕ್‌ಡೌನ್‌ ಮಾಡುವ ಯಾವುದೇ ನಿರ್ಧಾರಕ್ಕೆ ಸರ್ಕಾರ ಬಂದಿಲ್ಲ. ಮತ್ತೆ ಲಾಕ್‌ಡೌನ್‌ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಜನತೆ ವಿನಾಕಾರಣ ಭಯಬೀಳಬಾರದು. ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನುವ ಮೂಲಕ ಲಾಕ್‌ಡೌನ್‌ ಕುರಿತಂತೆ ಜನರಲ್ಲಿರುವ ಗೊಂದಲಕ್ಕೆ ತೆರೆ ಎಳೆದರು.

ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

ಲಾಕ್‌ಡೌನ್‌ ವದಂತಿ, ಕೋವಿಡ್‌ 19 ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ಸಾಕಷ್ಟುಸಂಖ್ಯೆಯ ಜನರು ಬೆಂಗಳೂರು ತೊರೆದು ತಮ್ಮ ತಮ್ಮ ಗ್ರಾಮಗಳತ್ತ ತೆರಳುತ್ತಿದ್ದಾರೆ. ಮಾಧ್ಯಮಗಳು ಲಾಕ್‌ಡೌನ್‌ ಬಗೆಗಿನ ಸರ್ಕಾರದ ನಿಲುವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಬೊಮ್ಮಾಯಿ ವಿನಂತಿ ಮಾಡಿದರು.