ಪಟ್ಟದಕಲ್ಲಿನ ಶಿವನ ಮೂರ್ತಿ ಕೈಯಲ್ಲೂ ‘ಸೆಂಗೋಲ್’!
ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಿನ್ನದ ರಾಜದಂಡ ಹೋಲುವ ಸೆಂಗೋಲ್ ಮಾದರಿಯ ದಂಡವನ್ನು ನಾವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲಿನಲ್ಲೂ ಕಾಣಬಹುದು.
ಬಾದಾಮಿ (ಮೇ.29): ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಿನ್ನದ ರಾಜದಂಡ ಹೋಲುವ ಸೆಂಗೋಲ್ ಮಾದರಿಯ ದಂಡವನ್ನು ನಾವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದ ಕಲ್ಲಿನಲ್ಲೂ ಕಾಣಬಹುದು. ಚಾಲುಕ್ಯರ ಕಾಲದ ವಿರೂಪಾಕ್ಷ ದೇವಾಲಯದ ಗೋಡೆಯಲ್ಲಿ ಕೆತ್ತಲಾಗಿರುವ ಶಿವನ ಮೂರ್ತಿಯ ಎಡಗೈನಲ್ಲಿ ಸೆಂಗೋಲ್ ಮಾದರಿ ವಸ್ತು ಕಾಣಬಹುದಾಗಿದೆ. ಚತುರ್ಭುಜ ಹೊಂದಿರುವ ಶಿವನ ಮೂರ್ತಿ ಇದಾಗಿದ್ದು, ಅಜ್ಞಾನದ ಸಂಕೇತವಾಗಿರುವ ರಾಕ್ಷಸನನ್ನು ತುಳಿದು ನಟರಾಜನ ಭಂಗಿಯಲ್ಲಿ ನೃತ್ಯ ಮಾಡುವ ಕೆತ್ತನೆಯನ್ನು ನಾವು ಪಟ್ಟದಕಲ್ಲಿನಲ್ಲಿ ಕಾಣಬಹುದು.
ಸುಮಾರು ಕ್ರಿ.ಶ. 740ರಲ್ಲಿ ಚಾಲುಕ್ಯ ಅರಸರ ಕಾಲದಲ್ಲಿ ವಿರೂಪಾಕ್ಷ ದೇವಾಲಯ ನಿರ್ಮಾಣವಾಗಿದೆ. ಆ ಕಾಲದಲ್ಲೇ ಈ ಸೆಂಗೋಲ್ ದಂಡ ಜಾಲ್ತಿಯಲ್ಲಿತ್ತು ಎಂದು ಈ ಕೆತ್ತನೆ ದೃಢಪಡಿಸಿದೆ. ಇದೀಗ ಸಂಸತ್ ಭವನದಲ್ಲಿ ಈ ದಂಡ ಪ್ರತಿಷ್ಠಾಪನೆ ಮೂಲಕ ಮಹತ್ವ ಪಡೆದುಕೊಂಡಿದೆ. ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರದ ಧ್ಯೋತಕವಾಗಿ ಚಿನ್ನದ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ… ನೆಹರು ಅವರಿಗೆ ಹಸ್ತಾಂತರಿಸಲಾಗಿತ್ತು. ಈ ರಾಜದಂಡವನ್ನು ಸೆಂಗೋಲ್ ಎಂದು ಕರೆಯಲಾಗುತ್ತದೆ.
ಬಿಜೆಪಿ ಬ್ಯಾನರ್‌ನಲ್ಲಿ ಸಿಎಂ ಸಿದ್ದು ಪೋಟೋ: ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸೆಂಗೋಲ್ ಮಾದರಿಯ ಬೆಳ್ಳಿಯ ಧರ್ಮದಂಡ ಸಾರಂಗ ಮಠದಲ್ಲಿ: ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗ ಮಠದಲ್ಲೂ ಚಿನ್ನದ ಸೆಂಗೋಲ್ ಹೋಲುವ ಧರ್ಮದಂಡ ಇದೆ. ಭಾನುವಾರ ನೂತನ ಸಂಸತ್ತಿನಲ್ಲಿ ಇಡಲಾಗಿರುವ ಸೆಂಗೋಲ್ ಮಾದರಿಯ ಬೆಳ್ಳಿ ಧರ್ಮದಂಡ ಸಾರಂಗ ಮಠದಲ್ಲಿ ಇದ್ದು, ಉಜ್ಜಯಿನಿ ಪೀಠಕ್ಕೆ ಸೇರಿದ ನಂದಿ ಇರುವ ಧರ್ಮದಂಡ ಇದಾಗಿದೆ. ಸಿಂದಗಿ ಸಾರಂಗ ಮಠದ ಗುರುಗಳು ಹಿಡಿಯುವ ಸಂಗೋಲ್ ಮಾದರಿಯ ಧರ್ಮದಂಡವೂ ನ್ಯಾಯ ಮತ್ತು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಬಳಕೆಯಾಗುವ ಉಜ್ಜಯಿನಿ ಸದ್ಧರ್ಮ ಪೀಠದ ಧರ್ಮದಂಡ ಆಗಿದೆ.
ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಸ್ಪಂದಿಸಲು ಗುದ್ದಲಿ, ಮಚ್ಚು ಹಿಡಿದ ಟ್ರಾಫಿಕ್ ಪೊಲೀಸರು!
ಅಲ್ಲದೇ, ಉಜ್ಜಯಿನಿ ಪೀಠದಿಂದ ಅನುಸರಣಾ ಪೀಠಾಧಿಪತಿಗಳಿಗೆ ನೀಡಲಾಗಿರುವ ಬೆಳ್ಳಿ ನಂದಿ ಇರುವ ಧರ್ಮದಂಡವನ್ನು ಪೀಠಾಧಿಪತಿಗಳಿಂದ ಪೀಠಾಧಿಪತಿಗಳಿಗೆ ವರ್ಗಾಯಿಸುತ್ತ ಬರಲಾಗಿದೆ. ಕೆಳಗೆ ಬಿದರಿನ ದಂಡ, ಮೇಲೆ ಬೆಳ್ಳಿಯಲ್ಲಿ ಮಾಡಲಾಗಿರುವ ನಂದಿ ಮೂರ್ತಿ ಇರುವ ಬೆತ್ತ ಇದಾಗಿದೆ. ಈ ಧರ್ಮದಂಡ ಹಿಡಿದು ಭಕ್ತರ ಮನೆಗಳಿಗೆ, ಧಾರ್ಮಿಕ ಕಾರ್ಯಗಳಲ್ಲಿ ಸಾರಂಗ ಮಠದ ಸ್ವಾಮೀಜಿ ಪಾಲ್ಗೊಳ್ಳುವ ಪದ್ಧತಿ ಇದೆ ಎಂದು ಸಿಂದಗಿ ಸಾರಂಗಮಠದ ಪೀಠಾಧಿಕಾರಿ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.