ಇಸ್ರೋದಿಂದ ಆಕ್ಸಿಜನ್‌ ಪಡೀರಿ ಎಂದ HK ಪಾಟೀಲ್‌ಗೆ ಹೈಕೋರ್ಟ್‌ ತರಾಟೆ

* ಶಾಸಕರಾಗಿ ನೀವೇನು ಮಾಡಿದ್ದೀರಿ ಮೊದಲು ತಿಳಿಸಿ
* ಮತ್ತೊಬ್ಬರಿಗೆ ಹೇಳುವ ಮುನ್ನ ನಿಮ್ಮ ಕೊಡುಗೆ ವಿವರಿಸಿ
* ಇದು ಪಿಐಎಲ್‌ ಅಲ್ಲ, ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ
 

Karnataka High Court Slams Congress Leader HK Patil grg

ಬೆಂಗಳೂರು(ಮೇ.21): ರಾಜ್ಯದಲ್ಲಿ ಆಮ್ಲಜನಕ ಕೊರತೆಯನ್ನು ನೀಗಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಆಕ್ಸಿಜನ್‌ ಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ಅವರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

Karnataka High Court Slams Congress Leader HK Patil grgKarnataka High Court Slams Congress Leader HK Patil grg

ಕೊರೋನಾ ನಿರ್ವಹಣೆ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ, ಇಸ್ರೋದಿಂದ ಆಕ್ಸಿಜನ್‌ ಪಡೆಯಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದೀರಿ. ಆದರೆ, ಶಾಸಕರಾಗಿ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

"

ಮತ್ತೊಬ್ಬರಿಗೆ ಹೇಳುವ ಮುನ್ನ ನಿಮ್ಮ ಕೊಡುಗೆ ಏನೆಂದು ತಿಳಿಸಿ. ಕರ್ನಾಟಕದ ಜನತೆಗೆ ನೀವೇನು ಮಾಡಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಎಷ್ಟುಹಾಸಿಗೆಗಳನ್ನು ಒದಗಿಸಿದ್ದೀರಿ, ಒಂದಾದರೂ ಆಕ್ಸಿಜನ್‌ ಘಟಕ ಸ್ಥಾಪಿಸಿರುವಿರೇ, ಪ್ರಭಾವಿ ಹುದ್ದೆಯಲ್ಲಿರುವ ನೀವು ಕೆಲಸ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿತು.

ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ

ಸದನದಲ್ಲಿ ಪ್ರಶ್ನಿಸದೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೀರಿ. ಶಾಸಕರಾಗಿ ಆಗಿ ಜನರಿಗೆ ಏನೂ ಮಾಡುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಪ್ರಚಾರಕ್ಕಾಗಿ ಸಲ್ಲಿಸಿರುವುದಾಗಿದೆ. ದೊಡ್ಡ ಮೊತ್ತದ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಅರ್ಜಿ ಹಿಂಪಡೆಯುವ ಕುರಿತು ನಿರ್ಧಾರ ತಿಳಿಸುವಂತೆ ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು.

Karnataka High Court Slams Congress Leader HK Patil grgKarnataka High Court Slams Congress Leader HK Patil grg

ಮಧ್ಯಾಹ್ನ 1.30ರ ಸುಮಾರಿಗೆ ಎಚ್‌.ಕೆ. ಪಾಟೀಲ್‌ ಪರ ವಕೀಲರು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಂಪಡೆಯುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ದಾಖಲಿಸಿಕೊಂಡ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios