ಕರ್ನಾಟಕ ಉಚ್ಚ ನ್ಯಾಯಾಲಯವು ಬೆಂಗಳೂರಿನಲ್ಲಿ ಖಾಲಿ ಇರುವ 21 ಡೇಟಾ ಎಂಟ್ರಿ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ ₹25,500 ರಿಂದ ₹81,100 ವರೆಗೆ ವೇತನ ನೀಡಲಾಗುತ್ತದೆ.

ಕರ್ನಾಟಕ ಉಚ್ಚ ನ್ಯಾಯಾಲಯವು (Karnataka High Court) ಖಾಲಿ ಇರುವ ಡೇಟಾ ಎಂಟ್ರಿ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: ಕರ್ನಾಟಕ ಹೈಕೋರ್ಟ್

ಹುದ್ದೆಯ ಹೆಸರು: ಡೇಟಾ ಎಂಟ್ರಿ ಸಹಾಯಕ

ಒಟ್ಟು ಹುದ್ದೆಗಳು: 21

ಕೆಲಸದ ಸ್ಥಳ: ಬೆಂಗಳೂರು (ಕರ್ನಾಟಕ)

ವಿದ್ಯಾರ್ಹತೆ:

ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ಮಾಸಿಕ ವೇತನ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,500-81,100 ವೇತನ ನೀಡಲಾಗುತ್ತದೆ. 

ವಯೋಮಿತಿ:

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 40 ವರ್ಷಗಳು

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: 350 ರು.

ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: 200

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

ಟೈಪಿಂಗ್ ಪರೀಕ್ಷೆ

ನೇರ ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಜೂನ್‌ 29-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ-28-2026

ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜುಲೈ 28-2026

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಹೈಕೋರ್ಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ.

ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಅಗತ್ಯ ದಾಖಲೆಗಳನ್ನು (ID ಪ್ರೂಫ್, ವಿದ್ಯಾರ್ಹತೆ ಸರ್ಟಿಫಿಕೇಟ್, ಫೋಟೋ) ರೆಡಿ ಇಟ್ಟುಕೊಳ್ಳಿ.

ಕೆಳಗೆ ನೀಡಿರುವ ಲಿಂಕ್ ಬಳಸಿ ಆನ್‌ಲೈನ್ ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

https://judiciary.karnataka.gov.in/

ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ ‘Submit’ ಬಟನ್ ಒತ್ತಿ.