ಡಿ.ಕೆ. ಶಿವಕುಮಾರ್ ಮೇಲೆ ತೂಗುಗತ್ತಿ: ಅಕ್ರಮ ಆಸ್ತಿ ಗಳಿಕೆ ಕೇಸ್ ಮುಂದುವರಿಕೆ ಸಾಧ್ಯತೆ!
ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ವಾಪಸಾತಿಗೆ ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಯಾವುದೇ ಆದೇಶ ಕಾಯ್ದಿರಿಸಿದೆ. ಆದರೆ, ಡಿ.ಕೆ.ಶಿವಕುಮಾರ ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವ ಅರ್ಜಿ ಹಿಂಪಡೆದಿದ್ದರಿಂದ ಸಿಬಿಐ ತನಿಖೆ ಮುಂದುವರೆಯಲಿದೆ.
ಬೆಂಗಳೂರು (ನ.29): ರಾಜ್ಯದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೊಟ್ಟಿತ್ತು. ಈವರೆಗೆ ಸಿಬಿಐ ತನಿಖೆ ಪೂರ್ಣಗೊಂಡಿಲ್ಲ. ಆದರೆ, ಸಿಬಿಐ ತನಿಖೆ ನಡೆಯುತ್ತಿರುವಾಗಲೇ ಕಳೆದ 6 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಸಿಬಿಐಗೆ ಕೊಟ್ಟಿರುವ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪಗ್ರಕರಣವನ್ನೇ ವಾಪಸ್ ಪಡೆಯಲು ತೀರ್ಮಾನಿಸಿದೆ. ಈ ಪ್ರಕರಣ ಈಗ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿ,ಕೆ. ಶಿವಕುಮಾರ್ ಅವರು ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿ ಹಿಂಪಡೆದಿದ್ದಾರೆ. ಆದ್ದರಿಂದ ಸಿಬಿಐ ತನಿಖೆ ಈ ಹಿಂದಿನಂತೆ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಸ2013ರಿಂದ 2018ರವರೆಗಿನ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದಾರೆಂದು ಪ್ರಕರಣದ ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ಮಾಡುವಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರೀಯ ತನಿಖಾ ದಳಕ್ಕೆ ನೀಡಲಾಗಿತ್ತು. ಈ ಪ್ರಕರಣದಡಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದರು. ನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತವಾಗಿ ಸಿಬಿಐ ತನಿಖೆ ನಡೆಸುವುದಕ್ಕೆ ತಾತ್ಕಾಲಿಕ ತಡೆಯನ್ನು ಪಡೆದುಕೊಂಡಿದ್ದರು. ಚುನಾವಣೆ ಮುಗಿದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಮುಂದುವರೆಸಲು ಹೈಕೋರ್ಟ್‌ನಿಂದ ಆದೇಶ ನೀಡಿದ್ದು, 3 ತಿಂಗಳಲ್ಲಿ ಸಂಪೂರ್ಣ ವರದಿ ಸಲ್ಲಿಸಲು ಗಡುವು ನೀಡಲಾಗಿತ್ತು.
ಡಿಕೆಶಿ ತನಿಖೆ ವಾಪಸ್ ವಿರುದ್ಧ ಶಾಸಕ ಯತ್ನಾಳ್ ಹೈಕೋರ್ಟ್‌ಗೆ
ಹೈಕೋರ್ಟ್‌ನಿಂದ ಸಿಬಿಐಗೆ ನಿಗದಿತ ಗಡುವು ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಸರ್ಕಾರ ಇರುವುದರಿಂದ ತಮ್ಮ ವಿರುದ್ಧವಾಗಿ ಸರ್ಕಾರದಿಂದ ಸಿಬಿಐಗೆ ಕೊಟ್ಟಿದ್ದ ಪ್ರಕರಣವನ್ನು ವಾಪಸ್ ಪಡೆಯುವುದಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಇದರ ಆಧಾರದಲ್ಲಿ ಸಿಬಿಐಗೆ ಕೊಟ್ಟದ್ದ ಅಕ್ರಮ ಆಸ್ತಿ ಗಳಿಕ ಪ್ರಕರಣವನ್ನು ವಾಪಸ್ ಕೇಳಲು ಮುಂದಾದಾಗ ಸಿಬಿಐ ನ್ಯಾಯಾಲಯದ ಮೊರೆ ಹೋಗಿದ್ದು, ಕೇಸ್ ಹಿಂಪಡೆಯಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ.
ಇನ್ನು ಸರ್ಕಾರದ ವತಿಯಿಂದ ಸಿಬಿಐಗೆ ಕೊಟ್ಟಿರುವ ಕೇಸ್ ಹಿಂಪಡೆಯಲು ಅವಕಾಶ ನೀಡುವಂತೆ ಹೈಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಈ ಕುರಿತು ಸರ್ಕಾರದ ಪರವಾಗಿ (ಡಿ.ಕೆ. ಶಿವಕುಮಾರ್ ಪರವೂ) ಕಪಿಲ್ ಸಿಬಲ್ ಅವರು ವಾದ ಮಂಡಿಸಿ ಸರ್ಕಾರದ ತೀರ್ಮಾನವನ್ನು ಊರ್ಜಿತಗೊಳಿಸಿ ಸಿಬಿಐನಿಂದ ಪ್ರಕರಣವನ್ನು ವಾಪಸ್ ಕೊಡಿಸಬೇಕು. ದೆಹಲಿ ಪೊಲೀಸ್ ಎಸ್ಠಬ್ಲಿಷ್ಮೆಂಟ್ ಆ್ಯಕ್ಟ್ ಅಡಿ ಅನುಮತಿ ಹಿಂಪಡೆಯಲು ಅವಕಾಶ ಇದೆ ಎಂದು ವಾದ ಮಂಡಿಸಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಅವರು, ಈ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿರುವಾಗ ಪ್ರಕರಣ ವಾಪಸ್ ಪಡೆಯುವ ತೀರ್ಮಾನ ಸರಿಯಾದುದಲ್ಲ. ಕ್ಯಾಬಿನೆಟ್ ನಿರ್ಧಾರವನ್ನು ಮಾನ್ಯ ಮಾಡಬಾರದು ಎಂದು ವಾದವನ್ನು ಮಂಡಿಸಿದ್ದಾರೆ.
39 ಶಾಸಕರಿಗೆ ನಿಗಮಾಧ್ಯಕ್ಷ ಪಟ್ಟ: ಸುರ್ಜೇವಾಲಾ, ಸಿದ್ದು, ಡಿಕೆಶಿ ಸಭೆಯಲ್ಲಿ ಪಟ್ಟಿ ಫೈನಲ್!
ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಹಾಗೂ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಅವರ ವಾದವನ್ನು ಆಲಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಕೃಷ್ಣಾ ಎಸ್.ದೀಕ್ಷೀತ್ ಅವರು ಸರ್ಕಾರದ ಕ್ಯಾಬಿನೆಟ್‌ನಿಂದ ಕೈಗೊಳ್ಳಲಾದ ಕಾನೂನಾತ್ಮಕ ನಿರ್ಣಯದ ಬಗ್ಗೆ ಯಾವುದೇ ಹೈಕೋರ್ಟ್‌ನಲ್ಲಿ ಯಾವುದೇ ತೀರ್ಮಾನವನ್ನೂ ಕೈಗೊಂಡಿಲ್ಲ. ಆದರೆ, ಈ ಪ್ರಕರಣ ಈಗ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿ,ಕೆ. ಶಿವಕುಮಾರ್ ಅವರು ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿ ಹಿಂಪಡೆಯಲು ಅನುಮತಿ ನೀಡಿದ್ದಾರೆ. ಆದ್ದರಿಂದ ಸಿಬಿಐ ತನಿಖೆ ಈ ಹಿಂದಿನಂತೆ ಮುಂದುವರೆಯಲಿದೆ.