Asianet Suvarna News Asianet Suvarna News

ಬ್ಯಾಂಕ್ ಖಾತೆ ಕ್ಲೋಸ್ : ಮಹತ್ವದ ಆದೇಶ

ಬ್ಯಾಂಕ್ ಖಾತೆ ಕ್ಲೋಸ್ ಸಂಬಂಧ ಇದೀಗ ಮಹತ್ವದ ಆದೇಶ ಹೊರಡಿಸಲಾಗಿದೆ. ಏನದು ಆದೇಶ..?

Karnataka High Court Order Over Bank Account Close snr
Author
Bengaluru, First Published Nov 10, 2020, 7:25 AM IST

ಬೆಂಗಳೂರು (ನ.10): ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ನ ಸಾಲಗಾರರ ಖಾತೆಗಳನ್ನು ಆಡಳಿತಾಧಿಕಾರಿ ಗಮನಕ್ಕೆ ತಾರದೇ ಮುಚ್ಚಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ.

ಠೇವಣಿದಾರರ ಹಣ ದುರ್ಬಳಕೆ ಹಗರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿ ಕೆ.ಆರ್‌. ನರಸಿಂಹ ಮೂರ್ತಿ ಮತ್ತಿತರರು ಸಲ್ಲಿಸಿರುವ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 517 ಕೋಟಿ ರೂ. ನಿವ್ವಳ ಲಾಭ! ...

ಅರ್ಜಿದಾರರ ಪರ ವಕೀಲ ವೆಂಕಟೇಶ್‌ ದಳವಾಯಿ ವಾದ ಮಂಡಿಸಿ, ಆಡಳಿತಾಧಿಕಾರಿ ಗಮನಕ್ಕೆ ತಾರದೆ ಅಂದಾಜು 50 ಸಾಲಗಾರರ ಖಾತೆಗಳನ್ನು ಮುಚ್ಚಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಡಳಿತಾಧಿಕಾರಿ ಗಮನಕ್ಕೆ ತರದೆಯೇ ಖಾತೆ ಮುಚ್ಚಿದರೆ ಅಪರಾಧವಾಗಲಿದೆ. ಆದ್ದರಿಂದ, ಯಾವ ಕಾರಣಕ್ಕೆ ಖಾತೆಗಳನ್ನು ಮುಚ್ಚಲಾಗಿದೆ? ಆ ಖಾತೆಗಳಲ್ಲಿ ಎಷ್ಟುಸಾಲ ನೀಡಲಾಗಿತ್ತು? ಎಷ್ಟುಸಾಲ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿತು.

Follow Us:
Download App:
  • android
  • ios