ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಸಿಎಂ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ದೊರೆತಿದೆ. ದೂರುದಾರರ ತಾಯಿ ಆರೋಪಗಳನ್ನು ಸುಳ್ಳೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೂರುದಾರರು ಹಲವರ ವಿರುದ್ಧ ದೂರು ನೀಡುವ ಹವ್ಯಾಸ ಹೊಂದಿದ್ದಾರೆ ಎಂದು ಯಡಿಯೂರಪ್ಪ ಪರ ವಕೀಲರು ವಾದಿಸಿದ್ದರು. ನ್ಯಾಯಾಲಯ ಸಾಕ್ಷ್ಯಗಳ ವಿಶ್ವಾಸಾರ್ಹತೆ ಪರಿಶೀಲಿಸಬೇಕಿದೆ.

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಮೂಲಕ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಈ ಮೂಲಕ ತನಿಖೆ ಮುಂದುವರೆಯಲಿದೆ. 

ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದರು. ಯಡಿಯೂರಪ್ಪ ಅವರು ತನ್ನ ಅಪ್ರಾಪ್ತ ಮಗಳನ್ನು ಕೊಣೆಯೊಳಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ದೂರುದಾರೆ ದೂರು ನೀಡಿದ್ದಾರೆ. ಅಡುಗೆ ಸಹಾಯಕರು, ಪರಿಚಾರಕರು, ಅಂಗರಕ್ಷಕರು, ಭೇಟಿ ಮಾಡಲು ಬಂದವರು ಸೇರಿ ಅನೇಕರು ಅರ್ಜಿದಾರರ ಸುತ್ತಮುತ್ತ ಕಣ್ಣಳತೆಯ ದೂರದಲ್ಲಿದ್ದರು. ಮೇಲಾಗಿ ಅವರಿಗೆ 82 ವರ್ಷ. ಫ್ಯಾನ್‌, ಲೈಟ್‌ ಸ್ವಿಚ್‌ ಒತ್ತಲಿಕ್ಕೂ ಆಗದು. ಹೀಗಿರುವಾಗ ಅವರು ಸಂತ್ರಸ್ತೆಯನ್ನು ಕೊಣೆಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಸ್ಪರ್ಶಿಸಿದ್ದಾರೆಂದರೆ ಹೇಗೆ? ಸಂತ್ರಸ್ತೆ ತಾಯಿ ಆರೋಪಗಳೆಲ್ಲವೂ ಸುಳ್ಳು ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. 

ಅಲ್ಲದೆ ದೂರುದಾರೆ ರಾಜಕಾರಣಿಗಳು, ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಿಗೆ ದೂರು ನೀಡುವುದು ಹವ್ಯಾಸವಾಗಿತ್ತು. ತನ್ನ ಗಂಡ, ಮಗನ ವಿರುದ್ಧವೇ ಆಕೆ ಕಳ್ಳತನದ ದೂರು ಕೊಟ್ಟಿದ್ದಾರೆ. ಆದ್ದರಿಂದ ಅರ್ಜಿದಾರರ ಸೂಚನೆಯಂತೆ ಪೊಲೀಸ್‌ ಆಯುಕ್ತರ ಬಳಿ ಹೋಗಿದ್ದ ದೂರುದಾರೆ, ಅರ್ಜಿದಾರರ ವಿರುದ್ಧ ಏನೂ ಹೇಳಿಕೆ ನೀಡಿಲ್ಲ. ಆದ್ದರಿಂದ ತನಿಖಾಧಿಕಾರಿಗಳು ಯಡಿಯೂರಪ್ಪ ವಿರುದ್ಧ ಸಂಗ್ರಹಿಸಿದ್ದಾರೆ ಎನ್ನಲಾದ ಸಾಕ್ಷ್ಯ ವಿಶ್ವಸಾರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣೀಸಬೇಕಿದೆ ಎಂದು ಕೋರಿದ್ದರು.