ನಿವೃತ್ತ ನೌಕರರ ವಿಚಾರಣೆಗೆ ಹೈಕೋರ್ಟ್ ಬ್ರೇಕ್‌  4 ವರ್ಷಕ್ಕಿಂತ ಹಿಂದಿನ ಘಟನೆ ಬಗ್ಗೆ ನಿವೃತ್ತರ ವಿಚಾರಣೆಗಿಲ್ಲ ಅವಕಾಶ  ಕೆಎಚ್‌ಬಿ ನಿವೃತ್ತ ಅಧಿಕಾರಿಗಳ ಪ್ರಕರಣದಲ್ಲಿ ಹೈಕೋರ್ಟ್ ಆದೇಶ

ಬೆಂಗಳೂರು (ನ.30) : ನಾಲ್ಕು ವರ್ಷಕ್ಕಿಂತ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನೌಕರನ ವಿರುದ್ಧ ಯಾವುದೇ ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

2005-06ರ ವೇಳೆ ಪ್ರಕರಣವೊಂದರಲ್ಲಿ ಕರ್ತವ್ಯ ಲೋಪವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ 2022ರಲ್ಲಿ ನೀಡಲಾಗಿದ್ದ ಚಾರ್ಜ್ ಮೆಮೋ’ ಪ್ರಶ್ನಿಸಿ ಕರ್ನಾಟಕ ಗೃಹ ಮಂಡಳಿಯ (ಕೆಎಚ್‌ಬಿ) ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಅನಿಲ್‌ ಕುಮಾರ್‌ ಹಾಗೂ ಟಿ.ಮಲ್ಲಣ್ಣಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಅವರ ಪೀಠ, ಅರ್ಜಿದಾರರು ನಿವೃತ್ತ ನೌಕರರಾಗಿದ್ದಾರೆ. 2005-06ರಲ್ಲಿ ನಡೆದಿರುವ ಘಟನೆ ಕುರಿತು ತನಿಖೆ ಆರಂಭಿಸುವ ಹಾಗೂ ತನಿಖಾ ಪ್ರಕ್ರಿಯೆ ಬಗ್ಗೆ 2022ರ ಜೂ.21ರಂದು ಚಾಜ್‌ರ್‍ ಮೆಮೋ ಹೊರಡಿಸಲಾಗಿದೆ. ನಾಲ್ಕು ವರ್ಷಕ್ಕಿಂತ ಹಳೆಯ ಪ್ರಕರಣಗಳಲ್ಲಿ ನಿವೃತ್ತ ನೌಕರರ ವಿರುದ್ಧ ಚಾಜ್‌ರ್‍ ಮೆಮೋ ಹೊರಡಿಸಲು ಕರ್ನಾಟಕ ನಾಗರಿಕ ಸೇವೆಗಳ ಅಧಿನಿಯಮದ (ಕೆಸಿಎಸ್‌ಆರ್‌) ನಿಯಮ 214 (2)(ಬಿ) (2)ರ ಅಡಿಯಲ್ಲಿ ನಿರ್ಬಂಧವಿದೆ ಎಂದು ತಿಳಿಸಿದೆ.

ಪಿಎಫ್‌ಐ ಬ್ಯಾನ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌!

ಅಲ್ಲದೆ, ಅರ್ಜಿದಾರರ ವಿರುದ್ಧದ ಚಾಜ್‌ರ್‍ ಮೆಮೋ ಹಾಗೂ ಹಾಗೂ ಪ್ರಕರಣದ ತನಿಖೆಗೆ ಅಧಿಕಾರಿ ನೇಮಕ ಮಾಡಿ ಆ.8ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.

ಏನಿದು ಪ್ರಕರಣ?:

ಕೆಎಚ್‌ಬಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಜಿದಾರರು, ಕ್ರಮವಾಗಿ 2018ರ ಜೂ.30 ಹಾಗೂ 2020ರ ಆ.31ರಂದು ನಿವೃತ್ತರಾಗಿದ್ದರು. ಈ ಮಧ್ಯೆ, 2006ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ 2022ರ ಜೂ.21ರಂದು ಚಾಜ್‌ರ್‍ ಮೆಮೋ ಜಾರಿಗೊಳಿಸಿ, ಆರೋಪದ ತನಿಖೆಗೆ ಅಧಿಕಾರಿಯನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ರಾಯಚೂರು ಗೌಸ್ ಪ್ರಕರಣ: ಇ​ನ್ನೊ​ಬ್ಬರು ಬೆದ​ರಿಕೆ ಹಾಕಿ​ದರೆ ಬೇಲ್‌ ರದ್ದತಿ ಇಲ್ಲ: ಹೈಕೋರ್ಟ್