ತಮಿಳು ಚಿತ್ರ ಕೊಚ್ಚಾಡಿಯನ್‌ ಸಿನಿಮಾ ನಷ್ಟಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣ 

ಬೆಂಗಳೂರು(ಆ.10): ನಟ ರಜನೀಕಾಂತ್‌ ಅವರ ಪತ್ನಿ ಲತಾ ವಿರುದ್ಧದ ಫೋರ್ಜರಿ ಪ್ರಕರಣವನ್ನು ಮುಂದುವರಿಸಲು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ತಮಿಳು ಚಿತ್ರ ಕೊಚ್ಚಾಡಿಯನ್‌ ಸಿನಿಮಾ ನಷ್ಟಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಲತಾ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ವಂಚನೆ ಹಾಗೂ ಸುಳ್ಳು ಪ್ರಕರಣವನ್ನು ಮಾತ್ರ ರದ್ದುಪಡಿಸಿದೆ. ಆದರೆ, ಫೋರ್ಜರಿ ಪ್ರಕರಣ ಮುಂದುವರಿಸಲು ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ ನಿರ್ದೇಶಿಸಿದೆ.

ರಜನಿ ಪುತ್ರಿ ಕೊಚ್ಚಾಡಿಯನ್‌ ಸಿನಿಮಾ ನಿರ್ದೇಶಿಸಿದ್ದರು. ಆ ಚಿತ್ರದ ಸಂಬಂಧ ಆ್ಯಡ್‌ ಬ್ಯೂರೋ ಅಡ್ವರ್‌ಟೈಸ್ಮೆಂಟ್‌ ಲಿ. ಮತ್ತು ಮೀಡಿಯಾ ಒನ್‌ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಲಿ. ನಡುವೆ ಆರ್ಥಿಕ ವಹಿವಾಟು ನಡೆದಿತ್ತು.

ಕನ್ನಡ ಅಭಿಮಾನಿ ಮದುವೆಗೆ ಮಿಸ್; ಮನೆಗೆ ಕರೆಸಿ ನವದಂಪತಿಗೆ ಆತಿಥ್ಯ ನೀಡಿದ ರಜನಿಕಾಂತ್

ಮೀಡಿಯಾ ಒನ್‌ ಕಂಪನಿ ಪರ ಲತಾ ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾಗಿದರೂ ಆ್ಯಡ್‌ ಬ್ಯೂರೋ ಕಂಪನಿಗೆ ನಷ್ಟಪರಿಹಾರ ತುಂಬಿಕೊಟ್ಟಿರಲಿಲ್ಲ. ಈ ವಿವಾದ ಮಾಧ್ಯಮದಲ್ಲಿ ಸಾಕಷ್ಟುಪ್ರಸಾರವಾಗಿತ್ತು. ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಿಸಿ ಎಂದು ಕೋರಿ ಲತಾ ಅವರು ಬೆಂಗಳೂರು ಸಿಟಿ ಸಿವಿಲ್‌-ಸೆಷನ್ಸ್‌ ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟು 2014ರ ಡಿ.2ರಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿತ್ತು. ಆದರೆ ಈ ಆದೇಶ ಪಡೆಯಲು ಲತಾ ನಕಲಿ ದಾಖಲೆ ಸಲ್ಲಿಸಿದ್ದರು ಎಂಬುದು ಆರೋಪ.