ಬೆಂಗಳೂರು (ಮೇ.06): ನಾನೂ ಈಗಾಗಲೇ ರಾಜೀನಾಮೆ ಕೊಟ್ಟೇ ಇಲ್ಲಿ ಬಂದಿದ್ದು, ರಾಜೀನೇಮೆ ಕೊಟ್ಟ ಕಷ್ಟವನ್ನೂ ಅನುಭವಿಸಿದ್ದೇನೆ. ಇದರಿಂದ ಸರ್ಕಾರನೂ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ವಿರುದ್ಧ ಸಚಿವ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್, ಚಾಮರಾಜನಗರದ ಆಕ್ಸಿಜನ್ ದುರಂತ ಹಿನ್ನೆಲೆ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.  ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಲ್ಲ. ನಾನು ರಾಜೀನಾಮೆ ಕೊಟ್ಟು ಬಂದಿದ್ದು ಇದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದಿದ್ದು, ತಾವೂ ಕಮಲ ಪಾಳಯ ಅಧಿಕಾರಕ್ಕೆ ಏರಲು ಕಾರಣರೆಂಬುದರ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಚಾಮರಾಜನಗರ ಆಸ್ಪತ್ರೆ ದುರಂತ: ಆಕ್ಸಿಜನ್‌ನಿಂದ ಸತ್ತಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟ ಸಚಿವರು ..

ನಾನು ಕೊರೋನ ಯೋಧನ ರೀತಿ ಆಗಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ.  ಈ ಸಮಯದಲ್ಲಿ ‌ನಾನು ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ . ಕೊರೋನಾ ಮುಗಿಯುವವರೆಗೂ ನಾನು ಯಾವ ಬೇಸರವನ್ನು ವ್ಯಕ್ತಪಡಿಸುವುದಿಲ್ಲ.  ನನಗೆ ಯಾವ ಆಸೆಯೂ ಇಲ್ಲ. ಸರ್ಕಾರ ಮತ್ತು ಪಕ್ಷ ಕೊಡೋ ಆದೇಶದಂತೆ ಕೆಲಸ ಮಾಡುತ್ತೇನೆ ಎಂದು ಸುಧಾಕರ್ ಹೇಳಿದರು. 

ಜನತಾ ಕರ್ಫ್ಯೂ ವಿಫಲ, ಪೂರ್ಣ ಲಾಕ್‌ಡೌನ್‌ಗೆ ಚಿಂತನೆ: ಡಾ.ಸುಧಾಕರ್

ಯಾರ ವೈಯಕ್ತಿಕ ವಿಚಾರವನ್ನು ನಾನು ಮಾತನಾಡುವುದಿಲ್ಲ.  ಯಾರ ಬಗ್ಗೆಯೂ ನಾನು ಹಗುರವಾಗಿ ಮಾತಾಡುವುದಿಲ್ಲ. ರೇಣುಕಾಚಾರ್ಯ ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿದ್ದು, ಆದರೆ ನನಗೆ ಈಗಲೂ ಅವರ ಬಗ್ಗೆ ಗೌರವ ಇದೆ ಎಂದರು.  

ಸಚಿವರಿಗೆ ಅಧಿಕಾರ ಹಂಚಿಕೆ ಮಾಡಿರುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಸುಧಾಕರ್ ಇದರಿಂದ ನನಗೆ ಯಾವುದೇ ಬೇಸರವಿಲ್ಲ.  ನನಗೆ ಇನ್ನು ಒಳ್ಳೆಯದಾಗಿದೆ. ನನ್ನ ಕೆಲಸಕ್ಕೆ ಹೆಚ್ಚು ಬಲ ಸಿಕ್ಕಂತಾಗಿದೆ. ಹಿರಿಯ ಸಚಿವರುಗಳು ಹೆಚ್ಚು ಸಹಕಾರ ಕೊಡುತ್ತಿದ್ದಾರೆ.  ಅವರ ಕೆಲಸ ಉತ್ತಮವಾಗಿ ಮಾಡುತ್ತಿದ್ದಾರೆ.  ಎರಡು‌-ಮೂರು ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನ ಸರಿ ಮಾಡುತ್ತಾರೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona