Asianet Suvarna News Asianet Suvarna News

ಮುಸ್ಲಿಮರ ಜನಸಂಖ್ಯೆ ಶೇ.14 ಇದ್ದರೂ ಬಜೆಟ್‌ನಲ್ಲಿ ಕೇವಲ ಶೇ.0.8% ಅನುದಾನ ಕೊಟ್ಟಿದ್ದೇವೆ; ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಶೇ.14 ಪರ್ಸೆಂಟ್ ಮುಸ್ಲಿಮರಿದ್ದರೂ, ಬಜೆಟ್‌ನಲ್ಲಿ ಅವರಿಗೆ ಶೇ.0.8ರಷ್ಟು ಅನುದಾನ ಮಾತ್ರ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Karnataka have 14 percent Muslims but 0 8 percent grants given in budget says CM Siddaramaiah sat
Author
First Published Feb 17, 2024, 7:34 PM IST

ಮಂಗಳೂರು (ಫೆ.17): ರಾಜ್ಯದ ಬಜೆಟ್ ವಿರೋಧ ಮಾಡುವವರಿಗೆ ಬಜೆಟ್ ಗಾತ್ರದ ಬಗ್ಗೆ ಗೋತ್ತೇನ್ರಿ.. ಏನೂ ಗೊತ್ತಿಲ್ಲದೇ ಸುಮ್ಮನೆ ಅವರು ಹೇಳಿದ್ದೇ ಸತ್ಯ ಅಲ್ಲ. ರಾಜ್ಯುದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14 ಇದ್ದರರೂ ಕೂಡ, ನಾನು ಬಜೆಟ್‌ನಲ್ಲಿ ಶೇ.0.8 ಪರ್ಸೆಂಟ್ ಅನುದಾನವನ್ನು ಮಾತ್ರ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಾನು ಬರೋ ಮೊದಲು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರೆ, ಅದು ನನ್ನ ವಿರುದ್ದ ಅಲ್ಲ. ನಾನು ಬಂದ ಮೇಲೆ ಕಪ್ಪು ಬಾವುಟ ಪ್ರದರ್ಶನ ಮಾಡಬೇಕು. ನಾನು ಬರೋ ಮೊದಲು ಮಾಡಿದ್ರೆ ಅದು ನನ್ನ ವಿರುದ್ದ ಅಲ್ಲ. ನನ್ನ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಇವರಿಗೆ ಬಜೆಟ್ ಗಾತ್ರ ಗೊತ್ತೇನ್ರಿ. ಏನೂ ಗೊತ್ತಿಲ್ಲದೇ ಸುಮ್ಮನೆ ಅವರು ಹೇಳಿದ್ದೇ ಸತ್ಯ ಅಲ್ಲ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರಗೆ ಡಬಲ್ ಧಮಾಕ; ವೀರಶೈವ ನಿಗಮ ಅಧ್ಯಕ್ಷ ಸ್ಥಾನದೊಂದಿಗೆ ಸಂಪುಟ ದರ್ಜೆ ಸ್ಥಾನಮಾನ!

ರಾಜ್ಯದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿರೋದು ಕೇವಲ 3,000 ಕೋಟಿ ರೂಪಾಯಿ ಮಾತ್ರ. ಅಂದರೆ, ರಾಜ್ಯದ ಒಟ್ಟಾರೆ ಬಜೆಟ್ ಗಾತ್ರದ ಶೇ.1 ಪರ್ಸೆಂಟ್ ಕೂಡ ಇಲ್ಲ. ಇನ್ನು ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.14 ಪರ್ಸೆಂಟ್ ಇದೆ. ಆದರೆ, ನಾನು ಮುಸ್ಲಿಂ ಸಮುದಾಯಕ್ಕೆ ಶೇ.0.8 ಪರ್ಸೆಂಟ್ ಅನುದಾನವನ್ನು ಮಾತ್ರ ಕೊಟ್ಟಿದ್ದೇನೆ. ನನ್ನ ವಿರುದ್ಧ ಪ್ರತಿಭಟನೆ ಮಾಡುವ ಬಿಜೆಪಿಗರಿಗೆ ‌ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಬೌದ್ಧರನ್ನು ಕಂಡರೆ ಆಗುವುದಿಲ್ಲ. ಅವರು ಪ್ರಚಾರ ಮತ್ತು ರಾಜಕ್ಕೀಯಕ್ಕೋಸ್ಕರ ಹೀಗೆ ಹೇಳುತ್ತಿದ್ದಾರೆ. ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಗ್ಯಾರಂಟಿ ಯೋಜನೆಗೆ ಕೊಡಲಾದ 52 ಸಾವಿರ ಕೋಟಿ ರೂಪಾಯಿಯನ್ನು ಅವರೊಬ್ಬರಿಗೇ ಕೊಟ್ಟಿದ್ದೀವಾ? ಎಂದು ಕಿಡಿಕಾರಿದರು.

ಮೈಸೂರು ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ! ಡಾಲಿ ಧನಂಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ರೆ ಪ್ರತಾಪ್ ಸಿಂಹ ವಿರುದ್ಧ ಕಣಕ್ಕೆ?

ರೈತರಿಗಾಗಿ ಸ್ವಾಮಿನಾಥನ್ ಶಿಫಾರಸ್ಸು ಮಾಡಿ ಅಂತ ಹೇಳಿದೆ. ಬಜೆಟ್ ನಲ್ಲಿ ಮೀನುಗಾರರಿಗೆ 3,000 ಕೋಟಿ ರೂ. ಕೊಟ್ಟಿದ್ದೇನೆ. ನಮ್ಮಲ್ಲಿ ಮೊದಲ ಬಾರಿ ಸಮುದ್ರ ಅಂಬ್ಯುಲೆನ್ಸ್ ಮಾಡಿದ್ದೇವೆ. ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿಯ ಹೇಳಿಕೆ ವಿವಾದದಲ್ಲಿ ಹೋರಾಟ ಮಾಡಲು ನಮ್ಮ ತಕರಾರಿಲ್ಲ. ಈ ಬಗ್ಗೆ ಎಫ್ಐಆರ್ ಆಗಿದೆ, ತನಿಖೆ ಆಗಿ ಏನು ವರದಿ ಬರುತ್ತೆ ನೋಡೋಣ. ಇನ್ನು ಇಂಡಿಯಾ ಮೈತ್ರಿಕೂಟ  ಕಮಲ್ ನಾಥ್ ವೈಯಕ್ತಿಕ ಕಾರಣಕ್ಕೆ ಬಿಜೆಪಿ ಸೇರಬಹುದು. ಬಿಜೆಪಿಯವರು ಆಪರೇಷನ್ ಕಮಲ ಮಾಡಿದರು. ಅವರು 50 ಕೋಟಿ ರೂ. ಆಫರ್ ಕೊಡ್ತಾರೆ, ಇಲ್ಲಾಂದ್ರೆ ಇಡಿ ಮೂಲಕ ಹೆದರಿಸ್ತಾರೆ ಎಂದು ಹೇಳಿದರು.

Follow Us:
Download App:
  • android
  • ios