Asianet Suvarna News Asianet Suvarna News

ಬಿಗ್ ಶಾಕಿಂಗ್: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊರಬಿತ್ತು ಆಘಾತಕಾರಿ ಸುದ್ದಿ

ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಮತ್ತೊಂದೆಡೆ ಇಂದು ಭಾನುವಾರ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲವಾಗಿದ್ದು, ದೇಶೆದೆಲ್ಲಡೆ ಜನರು ತಮ್ಮ ಮನೆ, ಬಾಲ್ಕಾನಿಗಳಲ್ಲಿ ನಿಂತು ಚಪ್ಪಾಳೆ ಹೊಡೆಯುವುದರ ಮೂಲಕ ವೈದ್ಯರಿಗೆ ಸೆಲ್ಯೂಟ್ ಹೇಳಿದ್ದಾರೆ. ಇದರ ಮಧ್ಯೆ  ಕರ್ನಾಟಕ ಆರೋಗ್ಯ ಇಲಾಖೆಯಿಂದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

Karnataka has 6 new Coronavirus cases In Single Day On March 22
Author
Bengaluru, First Published Mar 22, 2020, 7:42 PM IST

ಬೆಂಗಳೂರು, (ಮಾ.22):  ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇವತ್ತು ಅಂದ್ರೆ ಭಾನುವಾರ ಒಂದೇ ದಿನ ಕರ್ನಾಟಕದಲ್ಲಿ 6 ಕೊರೋನಾ ವೈರಸ್ ಸೋಂಕು ಕೇಸ್‌ಗಳು ಪತ್ತೆಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

ಶನಿವಾರ ಒಂದೇ ದಿನದಲ್ಲಿ 5 ಕೊರೋನಾ ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಆದ್ರೆ, ಇಂದು ಒಂದೇ ದಿನದಕ್ಕೆ ಬರೊಬ್ಬರಿ ಆರು ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. 

ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ರೋಗಿ 21 
- 35 ವರ್ಷ ವಯಸ್ಸಿನ ಧಾರವಾಡ ಮೂಲದ ಪುರುಷ ರೋಗಿ
- ‎ದುಬೈನಿಂದ ಗೋವಾ ಮೂಲಕ 11 ಮಾರ್ಚ್ ಪ್ರಯಾಣ ಮಾಡಿದ್ದರು

ರೋಗಿ 22
- 64 ವರ್ಷದ ಮಹಿಳೆ ಮೆಕ್ಕಾ ಪ್ರವಾಸದಿಂದ ಆಗಮಿಸಿದ್ದರು
- ‎ತಮ್ಮ ಮಗ ರೋಗಿ 19 ಜೊತೆಯಲ್ಲೇ‌ ಮೆಕ್ಕಾದಿಂದ ಪ್ರಯಾಣಿಸಿದ್ದರು. 
- ‎ಮಾರ್ಚ್ 14 ರಂದು ಹೈದರಾಬಾದ್ ನಿಂದ ಹಿಂದುಪುರಕ್ಕೆ ರೈಲಿನ ಮೂಲಕ ಆಗಮಿಸಿದ್ದರು
- ‎ಹಿಂದುಪುರದಿಂದ ಗೌರಿಬಿದನೂರಿಗೆ 15 ಮಾರ್ಚ್ ಬಸ್ಸಿನಲ್ಲಿ ಪ್ರಯಾಣಿಸಿದ್ದರು

ರೋಗಿ 23
- ಬೆಂಗಳೂರು ಮೂಲದ 36 ವರ್ಷದ ಮಹಿಳೆ ಗೆ‌ ಕೊರೋನ ದೃಢ
- ‎ಸ್ವಿಟ್ಜರ್ಲೆಂಡ್‌‌ ನಿಂದ 9 ಮಾರ್ಚ್ ಬೆಂಗಳೂರಿಗೆ ಮರಳಿದ್ದರು

ರೋಗಿ 24
- ಬೆಂಗಳೂರು ಮೂಲದ 27 ವರ್ಷದ ಯುವಕನಿಗೆ ಕೊರೋನಾ ಸೋಂಕು ದೃಢ
- ‎ಮಾರ್ಚ್ 14 ರಂದು ಜರ್ಮನಿಯಿಂದ ಮರಳಿದ್ದ ಯುವಕ

ರೋಗಿ 25
- ಬೆಂಗಳೂರು ಮೂಲದ 51 ವರ್ಷದ ಪುರುಷನಲ್ಲಿ ಕೊರೋನ ಸೋಂಕು ದೃಢ
- ‎ಲಂಡನ್ನಿನಿಂದ ಮಾರ್ಚ್ 13 ರಂದು ಮರಳಿದ್ದರು ವ್ಯಕ್ತಿ

ರೋಗಿ 26
- ಭಟ್ಕಳ ಮೂಲದ 21 ವರ್ಷದ ವ್ಯಕ್ತಿಯಲ್ಲಿ ಕೊರೋನಾ‌ ದೃಢ
- ಮಾರ್ಚ್ 19 ರಂದು ದುಬೈನಿಂದ ಮರಳಿದ್ದರು
- ‎ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

 

Follow Us:
Download App:
  • android
  • ios