Asianet Suvarna News Asianet Suvarna News

ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧಿಸಲ್ಲವೆಂದ ಸರ್ಕಾರ: ರಿಲೀಫ್‌ ಕೊಟ್ಟ ಹೈಕೋರ್ಟ್‌!

'ಮುಸ್ಲಿಂ ಮಹಿಳೆಯರ ಪರ್ಮನೆಂಟ್‌ ಗಂಡ' ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಅವರನ್ನು ಸರ್ಕಾರ ಬಂಧಿಸಲ್ಲ ಎಂದು ಹೈಕೋರ್ಟ್‌ ಮುಂದೆ ಹೇಳಿಕೊಂಡಿದೆ.

Karnataka Govt was not ready for arrest RSS Leader Kalladka Prabhakar Bhat sat
Author
First Published Dec 28, 2023, 8:48 PM IST

ಬೆಂಗಳೂರು (ಡಿ.28): 'ಮುಸ್ಲಿಂ ಮಹಿಳೆಯರ ಪರ್ಮನೆಂಟ್‌ ಗಂಡ' ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಅವರನ್ನು ಸರ್ಕಾರ ಬಂಧಿಸಲ್ಲ ಎಂದು ಹೈಕೋರ್ಟ್‌ ಮುಂದೆ ಹೇಳಿಕೊಂಡಿದೆ.

'ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿರುವುದು ಮೋದಿ ಸರ್ಕಾರ ಕೊಟ್ಟಿದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಅವರ ವಿರುದ್ಧ ಶ್ರೀರಂಗಪಟ್ಟಣ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಇದರ ಬೆನ್ನಲ್ಲಿಯೇ ಕಲ್ಲಡ್ಕ ಪ್ರಭಾಕರ್ ಭಟ್‌ ಅವರು ತಮ್ಮ ವಿರುದ್ಧ ದಾಖಲಾದ ಮೊಕದ್ದಮೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯದ ಮುಂದೆ ಸ್ವತಃ ಸರ್ಕಾರವೇ ಪ್ರಭಾಕರ್ ಭಟ್ ಅವರನ್ನು ಬಂಧಿಸುವುದಿಲ್ಲ ಎಂದು ಹೇಳಿದೆ. ಸರ್ಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಪ್ರಭಾಕರ ಭಟ್‌ ಅವರ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿ, ವಿಚಾರಣೆಯನ್ನು ಜ.9ಕ್ಕೆ ಮುಂದೂಡಲಾಗಿದೆ.

'ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ' ಹೇಳಿಕೆಗೆ ಕಲ್ಲಡ್ಕ ಪ್ರಭಾಕರ್ ವಿರುದ್ಧ ಎಫ್‌ಐಆರ್!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ 'ಮುಸ್ಲಿಂ ಮಹಿಳೆಯರಿಗೆ ಮೊದಲು ಶಾಶ್ವತವಾದ ಗಂಡನಿರಲಿಲ್ಲ. ಅವರಿಗೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿರುವುದು ಮೋದಿ ಸರ್ಕಾರ. ಮುಸ್ಲಿಂ ಮಹಿಳೆಯರು ಲವ್‌ ಜಿಹಾದ್‌ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ' ಎಂದು ಹೇಳಿಕೆ ಕೊಟ್ಟ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಮಂಡ್ಯದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ದೂರು ನೀಡಿದ್ದರು. ಅವರ ದೂರಿನ ಅನ್ವಯ ವಿವಾದಾತ್ಮಕ ಹೇಳಿಕೆ ಕುರಿತು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲಿಯೇ ಪರಭಾಕರ್ ಭಟ್ ಅವರು ಮೊಕದ್ದಮೆ ರದ್ದತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. 

ಕಲ್ಲಡ್ಕ ಪ್ರಭಾಕರ್ ಭಟ್‌ರ ಅರ್ಜಿ ವಿಚಾರಣೆ ವೇಳೆ, ಅವರ ವಿರುದ್ಧ ದೂರು ದಾಖಲಿಸಿದ್ದವರ ಪರವಾಗಿ ವಾದ ಮಾಡಿದ ವಕೀಲ ಬಾಲನ್‌ ಅವರು, ಪ್ರಭಾಕರ್ ಭಟ್‌ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಅವಮಾನಕರ ಮಾತುಗಳನ್ನಾಡಿದ್ದಾರೆ. ಇವರು ಕೋಮುಗಲಭೆ ಸೃಷ್ಟಿಸುವಂತ ಹೇಳಿಕೆ ನೀಡಿದ್ದಾರೆ. ಇವರು ಸಮಾಜದಲ್ಲಿ ಭಯವನ್ನು ಉಂಟುಮಾಡುವ ಭಯೋತ್ಪಾದಕರಾಗಿದ್ದಾರೆ. ಪೊಲೀಸರು ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದಕೊಂಡಿದ್ದಾರೆ. ಇವರ ವಿರುದ್ಧ ಸರ್ಕಾರವೇ ರೌಡಿಶೀಟರ್ ಪ್ರಕರಣ ತೆರೆಯಲು ಚಿಂತನೆ ಮಾಡಿದೆ ಎಂದು ಹೇಳಿದರು.

ರೈತರ ಹಾಲು ಖರೀದಿ ದರ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ!

ನಂತರ ಸರ್ಕಾರದ ಪರ ವಕೀಲರಿಂದ ವಾದವನ್ನು ಮಂಡಿಸುತ್ತಾ, ಈ ಪ್ರಕರಣದಲ್ಲಿ ಸರ್ಕಾರದಿಂದ ಪ್ರಭಾಕರ್ ಭಟ್ ಅವರನ್ನು ಬಂಧಿಸಲ್ಲ. ಆದ್ದರಿಂದ ಈ ವಿಚಾರಣೆಗೆ ಮುಂದಿನ ದಿನಾಂಕವನ್ನು ನೀಡುವಂತೆ ಮನವಿ ಮಾಡಿದರು. ಸರ್ಕಾರವೇ ಸ್ವತಃ ಆರೋಪಿಯನ್ನು ಬಂಧಿಸಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದೆ. ಹಾಗಾಗಿ, ಈ ಪ್ರಕರಣಕ್ಕೆ ತಡೆ ನೀಡುವ ಅಗತ್ಯವಿಲ್ಲ. ಸರ್ಕಾರವೇ ಆರೋಪಿಯನ್ನು ಬಂಧಿಸಲ್ಲ ಎಂದ ಮೇಲೆ ಈ ಪ್ರಕರಣದ ವಿಚಾರಣೆ ಬೇಡವೆಂದ ನ್ಯಾಯಾಲಯ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿತು.

Follow Us:
Download App:
  • android
  • ios