ಕರ್ನಾಟಕ ಸರ್ಕಾರವು 2024-25ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಗಳು ಸಂದಿವೆ. ಸಚಿವ ಶಿವರಾಜ್ ತಂಗಡಗಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು (ಫೆ.13): ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬಸವ ರಾಷ್ಟ್ರೀಯ ಪುರಸ್ಕಾರ - ಡಾ. ಎಸ್. ಆರ್. ಗುಂಜಾಳ ಧಾರವಾಡ.
ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ - ಪಂಡಿತರತ್ನ ಎ.ಶಾಂತಿರಾಜ., ಶಾಸ್ತ್ರೀ ಟ್ರಸ್ಟ್ ಬೆಂಗಳೂರು
ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ - ಬಸಪ್ಪ ಎಚ್ ಭಜಂತ್ರಿ ಬಾಗಲಕೋಟ
ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ - ಬೇಗಂ ಪರ್ವೀನ್ ಸುಲ್ತಾನ್ ಮುಂಬಯಿ
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ - ಕೆ ರಾಜಕುಮಾರ ಕೋಲಾರ
ಅಕ್ಕಮಹಾದೇವಿ ಪ್ರಶಸ್ತಿ - ಡಾ ಹೇಮಾ ಪಟ್ಟಣಶೆಟ್ಟಿ ಧಾರವಾಡ
ಪಂಪ ಪ್ರಶಸ್ತಿ - ಡಾ ಬಿ ಎ ವಿವೇಕ ರೈ ದಕ್ಷಿಣ ಕನ್ನಡ
ಪ್ರೋ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ - ಸ.ರಘುನಾಥ್, ಕೋಲಾರ
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ - ಡಾ. ವೈ. ಸಿ. ಭಾನುಮತಿ, ಹಾಸನ
ಬಿ.ವಿ. ಕಾರಂತ ಪ್ರಶಸ್ತಿ - ಜೆ. ಲೋಕೇಶ್, ಬೆಂಗಳೂರು
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ - ಕೆ. ನಾಗರತ್ನಮ್ಮ, ಮರಿಯಮ್ಮನಹಳ್ಳಿ ವಿಜಯನಗರ
ಡಾ.ಸಿದ್ಧಲಿಂಗಯ್ಯ ಸಾಹಿತ್ಯ ಪ್ರಶಸ್ತಿ - ಡಾ.ಎಲ್ ಹನುಮಂತಯ್ಯ ಬೆಂಗಳೂರು
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ - ಎಂ ಜೆ ಕಮಲಾಕ್ಷಿ, ಬೆಂಗಳೂರು
ಜಕಣಾಚಾರಿ ಪ್ರಶಸ್ತಿ - ಎಂ. ರಾಮಮೂರ್ತಿ, ಬೆಂಗಳೂರು
ಜಾನಪದ ಶ್ರೀ ಪ್ರಶಸ್ತಿ - ನಿಂಗಪ್ಪ ಭಜಂತ್ರಿ ಕಲ್ಬುರ್ಗಿ ಮತ್ತು ದೊಡ್ಡಗವಿಬಸಪ್ಪ, ಚಾಮರಾಜನಗರ
ನಿಜಗುಣ ಪುರಂದರ ಪ್ರಶಸ್ತಿ - ಅನಂತ ತೆರದಾಳ, ಬೆಳಗಾವಿ ( ಹಿಂದುಸ್ತಾನಿ ಗಾಯನ )
ಕುಮಾರವ್ಯಾಸ ಪ್ರಶಸ್ತಿ - ಡಾ.ಎ ವಿ ಪ್ರಸನ್ನ, ಹಾಸನ ( ಗಮಕ ವ್ಯಾಖ್ಯಾನ)
ಶಾಂತಲಾ ನಾಟ್ಯ ಪ್ರಶಸ್ತಿ - ಪದ್ಮಿನಿ ರವಿ, ಬೆಂಗಳೂರು ( ಭರತನಾಟ್ಯ)
ಸಂತ ಶಿಶುನಾಳ ಷರೀಫ್ ಪ್ರಶಸ್ತಿ - ಪ್ರೋ. ಮಲ್ಲಣ್ಣ, ಚಾಮರಾಜನಗರ ( ಸುಗಮ ಸಂಗೀತ )
ಇದನ್ನೂ ಓದಿ: ದರ ಇಳಿಕೆಗೆ ಮುಂದಾದ ನಮ್ಮ ಮೆಟ್ರೋ; ಎಷ್ಟು ಕಡಿಮೆಯಾಗುತ್ತೆ? BMRCL ಎಂಡಿ ಹೇಳಿದ್ದೇನು?
