ಬೆಂಗಳೂರು, (ಫೆ.16): ಇತ್ತೀಚೆಗಷ್ಟೇ 9 ಜಿಲ್ಲಾಧಿಕಾರಿಗಳು ಸೇರಿದಂತೆ 41 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಹೌದು... ರಾಜ್ಯ ಸರ್ಕಾರ ಇಂದು (ಮಂಗಳವಾರ) ಮತ್ತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆ ಹಿಂದೆ ದೊಡ್ಡ ದಂಧೆ ಇದೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಐಪಿಎಸ್ ಟ್ರಾನ್ಸ್‌ಫರ್ ಪಟ್ಟಿ ರೆಡಿಯಾಗಿದೆ ಎಂದು ಮೊದಲೇ ಹೇಳಿದ್ದರು.

ಅದರಂತೆ ಮಂಗಳವಾರ) ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ
* ಭಾಸ್ಕರರಾವ್ -ಎಡಿಜಿಪಿ ರೈಲ್ವೆ,
* ಪ್ರಶಾಂತ್ ಕುಮಾರ್ ಠಾಕೂರ್ -ಎಡಿಜಿಪಿ ಲೋಕಾಯುಕ್ತ,
* ಡಾ.ಎಸ್. ಮೂರ್ತಿ - ಎಡಿಜಿಪಿ ಮತ್ತು ಎಂಡಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ,
* ಡಾ.ಕೆ. ರಾಮಚಂದ್ರರಾವ್ -ಎಡಿಜಿಪಿ ಬಿಎಂಟಿಎಫ್
* ಅರುಣ್ ಚಕ್ರವರ್ತಿ -ಎಡಿಜಿಪಿ ಆಂತರಿಕ ಭದ್ರತಾ ವಿಭಾಗ.