ಬೆಂಗಳೂರು,(ಆ.25): ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ನಡೆಸಿರುವ ಸರ್ಕಾರ,13 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸ ಆದೇಶ ಹೊರಡಿಸಿದೆ.

ಕಳೆದ ಹಲವು ದಿನಗಳಿಂದ ಆಯಾ ಕಟ್ಟಿನ ಹುದ್ದೆಯಲ್ಲಿದ್ದ ಅಧಿಕಾರಿಗಳನ್ನು ಇಂದು (ಮಂಗಳವಾರ) ಸರ್ಕಾರ ವರ್ಗಾವಣೆಗೊಳಿಸಿದೆ. ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ದಂಧೆ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದರು.

ವರ್ಗಾವಣೆಯ ಭಾರೀ ದಂಧೆ : 100 ಅಧಿಕಾರಿಗಳ ವರ್ಗಾವಣೆಗೆ 75 ಕೋಟಿ ರು. ಲಂಚ

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಧಿಕಾರಿಗಣೆ ವರ್ಗಾವಣೆ ಮುಂದುವರಿಸಿದ್ದು,  ವ ರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ.

1.ನಂದಿನಿ ಕೆ.ಆರ್- ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಬಳ್ಳಾರಿ.
2.ಅಕ್ಷಯ್ ಶ್ರೀಧರ್-ಆಯುಕ್ತರು, ಮಂಗಳೂರು ಮಹಾನಗರ
3.ಲೊಕಾಂಡೆ ಸ್ನೇಹಲ್ ಸುಧಾಕರ್-ಆಯುಕ್ತರು, ಕಲಬುರಗಿ ಮಹಾನಗರ ಪಾಲಿಕೆ
4.ಬನ್ವರ್ ಸಿಂಗ್ ಲೀನಾ- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮಡಿಕೇರಿ.
5. ಡಾ.ಗಿರೀಶ್ ದಿಲೀಪ್ ಬಡೋಲೆ- ಸಹಾಯಕ ಆಯುಕ್ತರು, ಕೊಳ್ಳೆಗಾಲ ಉಪವಿಭಾಗ, ಕೊಳ್ಳೆಗಾಲ
6. ಆಕೃತಿ ಬನ್ಸಾಲ್- ಸಹಾಯಕ ಆಯುಕ್ತರು, ಶಿರಸಿ ಉಪವಿಭಾಗ, ಶಿರಸಿ
7. ದಿಗ್ವಿಜಯ್ ಬೋಡ್ಕೆ- ಸಹಾಯಕ ಆಯುಕ್ತರು, ತಿಪಟೂರು ಉಪವಿಭಾಗ, ತಿಪಟೂರು
8. ರಾಹುಲ್ ಸಿಂಧೆ- ಸಹಾಯಕ ಆಯುಕ್ತರು, ಇಂಡಿ ಉಪವಿಭಾಗ, ಇಂಡಿ
9. ಈಶ್ವರ್ ಕುಮಾರ್ ಖಂಡೋ- ಸಹಾಯಕ ಆಯುಕ್ತರು,ಮಡಿಕೇರಿ ಉಪವಿಭಾಗ, ಮಡಿಕೇರಿ
10. ಗರಿಮಾ ಪನ್ವರ್ - ಸಹಾಯಕ ಆಯುಕ್ತರು, ಬೀದರ್ ಉಪವಿಭಾಗ, ಬೀದರ್
11. ಡಾ.ಗೋಪಾಲಕೃಷ್ಣ -ಸಹಾಯಕ ಆಯುಕ್ತರು, ಧಾರವಾಡ ಉಪವಿಭಾಗ, ಧಾರವಾಡ
12. ಉಕೇಶ್‍ಕುಮಾರ್- ಸಹಾಯಕ ಆಯುಕ್ತರು, ಚಿಕ್ಕೋಡಿ ಉಪವಿಭಾಗ, ಚಿಕ್ಕೋಡಿ
13. ಪಟೇಲ್ ಭುವನೇಶ್ ದೇವಿದಾಸ್- ಸಹಾಯಕ ಆಯುಕ್ತರು, ಬಸವ ಕಲ್ಯಾಣ ಉಪವಿಭಾಗ, ಬಸವಕಲ್ಯಾಣ