ಬೆಂಗಳೂರು(ಮೇ.03) ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ಸೇವೆ ಒದಗಿಸಬೇಕೆಂಬ ಆಗ್ರಹಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಮುಂದಿನ ಮೂರು ದಿನಗಳವರೆಗೆ ಸರ್ಕಾರದಿಂದ ಕಾರ್ಮಿಕರಿಗೆ ತಮ್ಮ ಊರಿಗೆ ತೆರಳಲು ಉಚಿತ ಬಸ್ ಸಂಚಾರ ಸೇವೆ ಇರಲಿದೆ.

ಲಾಕ್‌ಡೌನ್‌ ವೇಳೆ ಜನರ ಕಣ್ಣೀರು ಒರೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಊರಿಗೆ ಪ್ರಯಾಣಿಸುವ ಕಾರ್ಮಿಕರಿಗೆ ಡಬಲ್ ಚಾರ್ಜ್ ವಿಧಿಸಲಾಗುತ್ತದೆ ಎಂಬ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಇದನ್ನು ವಿರೋಧಿಸಿ ಸುವರ್ಣ ನ್ಯೂಸ್ ಈ ನಿರಂತರ ವರದಿ ಪ್ರಸಾರ ಮಾಡಿತ್ತು. ಕೊರೋನಾ ಲಾಕ್‌ಡೌನ್‌ನಿಂದ ಕಾರ್ಮಿಕರಿಗೆ ನಲ್ವತ್ತು ದಿನಗಳಿಂದ ಆದಾಯವಿಲ್ಲ. ಹೀಗಿರುವಾಗ ಡಬಲ್ ಚಾರ್ಜ್ ನೀಡುವುದು ಸಾಧ್ಯವಿಲ್ಲ ಎಂದು ಅಭಿಯಾನ ನಡೆಸಿತ್ತು. ಈ ಅಭಿಯಾನಕ್ಕೆ ಸ್ಪಂಧಿಸಿದ್ದ ರಾಜ್ಯ ಸರ್ಕಾರ ಕೆಲಲವೇ ಗಂಟೆಗಳಲ್ಲಿ ಸಿಂಗಲ್ ಫೇರ್ ಕೊಟ್ಟು ಪ್ರಯಾಣಿಸುವಂತೆ ಆದೇಶಿಸಿತ್ತು.

ಆದರೀಗ ಈ ಎಲ್ಲಾ ಬೆಳವಣಿಗೆ ನಡೆದ 24 ತಾಸಿನೊಳಗೆ ಊರಿಗೆ ಪ್ರಯಾಣಿಸುವ ಕಾರ್ಮಿಕರಿಗೆ ಮುಂದಿನ ಮೂರು ದಿನಗಳವರೆಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಇಂತಹುದ್ದೊಂದು ಆದೇಶ ಹೊರಡಿಸಿದ್ದಾರೆ. ಮುಂದಿನ ಮೂರು ದಿನಗಳವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಬಸ್ ಸಂಚಾರ ವ್ಯವಸ್ಥೆ ಇರಲಿದೆ. 

ಲಾಕ್‌ಡೌನ್‌ನಿಂದ ಗೂಡ್ಸ್‌ ವಾಹನದಲ್ಲಿಯೇ ಬಾಣಂತಿ ವಾಸ..!

ವಾರ್ಡ್‌ಗಳಿಂದ ತೆಗೆದುಕೊಳ್ಳಬೇಕು ಕ್ರಮ!

ಇನ್ನು ಸರ್ಕಾರದ ಈ ಆದೇಶದ ಬೆನ್ನಲ್ಲೇ ಅನೇಕ ಮಂದಿ ಕಾಲಗ್ನಡಿಗೆಯಲ್ಲೇ ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದತ್ತ ಹೊರಡಲಾರಂಭಿಸಿದ್ದು, ಜನಸಂದಣಿಯಾಗುವ ಸಾಧ್ಯತೆಗಳಿವೆ. ಈ ಮೂಲಕ ಲಾಕ್‌ಡೌನ್ ನಿಯಮ ಉಲ್ಲಂಘನೆಯಾಗುವ ಅಪಾಯವೂ ಇದೆ. ಈ ನಿಟ್ಟಿನಲ್ಲಿ ಆಯಾ ವಾರ್ಡ್‌ಗಳ ಕಾರ್ಪೋರೇಟರ್‌ಗಳು ಸರ್ಕಾರದೊಂದಿಗೆ ಮಾತುಕತೆ ನಡೆಸಿ ವಾರ್ಡ್‌ಗಳಿಂದಲೇ ಜನರಿಗೆ ಬಸ್ ಸಂಚಾರ ವ್ಯವಸ್ಥೆ ಮಾಡಿದರೆ ನಿಯಮ ಉಲ್ಲಂಘನೆಯೂ ತಪ್ಪುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ

ದಯವಿಟ್ಟು ಗಮನಿಸಿ...

ಇನ್ನು ಸರ್ಕಾರ ಈ ಸೇವೆ ದುಡಿಮೆ, ಆದಾಯವಿಲ್ಲದೇ ಕಂಗಾಲಾಗಿರುವ ವಲಸೆ ಕಾರ್ಮಿಕರಿಗಷ್ಟೇ. ಹೀಗಾಗಿ ಅಂತಹವರಿಗೆ ಈ ವ್ಯವಸ್ಥೆ ತಲುಪಿಸುವುದು ಹಾಗೂ ತಲುಪುವಂತೆ ಗಮನಹರಿಸುವುದು ನಮ್ಮ ಕರ್ತವ್ಯ.