Asianet Suvarna News Asianet Suvarna News

ಕೈದಿಗಳಿಗೆ ನ.1ರಿಂದ ಜೈಲಲ್ಲಿ ಅಕ್ಷರ ಕಲಿಕೆ

  • ರಾಜ್ಯದ ಜೈಲುಗಳಲ್ಲಿರುವ ಸುಮಾರು ಆರು ಸಾವಿರ ಅನಕ್ಷರಸ್ಥ ಕೈದಿಗಳಿಗೆ ನವೆಂಬರ್‌ ಒಂದರಿಂದ ಜೈಲಿನಲ್ಲೇ ಶಿಕ್ಷಣ 
  • ಸಾಕ್ಷರತಾ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದೇವೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ 
Karnataka Govt set to launch literacy programme in jail snr
Author
Bengaluru, First Published Oct 31, 2021, 6:25 AM IST

 ಬೆಂಗಳೂರು (ಅ.31):  ರಾಜ್ಯದ ಜೈಲುಗಳಲ್ಲಿರುವ (Jail) ಸುಮಾರು ಆರು ಸಾವಿರ ಅನಕ್ಷರಸ್ಥ (illiterate) ಕೈದಿಗಳಿಗೆ ನವೆಂಬರ್‌ ಒಂದರಿಂದ ಜೈಲಿನಲ್ಲೇ ಶಿಕ್ಷಣ (Education) ನೀಡುವ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

ಅಲ್ಲದೆ, ನವೆಂಬರ್‌ 1ರಿಂದ ಪೊಲೀಸ್‌ (police) ಕವಾಯತು ವೇಳೆ ಇಂಗ್ಲೀಷ್‌ (english ) ಬದಲಿಗೆ ಕನ್ನಡದಲ್ಲೇ ಕಾಷನ್‌ (ಸೂಚನೆ) ನೀಡಬೇಕು. ಇದನ್ನು ಕಡ್ಡಾಯ ಮಾಡಲಿದ್ದು, ಯಾವ್ಯಾವ ಪದಕ್ಕೆ ಯಾವ್ಯಾವ ಕನ್ನಡ ಪದ ಬಳಕೆ ಮಾಡಬೇಕು ಎಂಬ ಬಗ್ಗೆ ಪಟ್ಟಿಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗೆ ಕಲಾ ಸ್ಪರ್ಶ, ಹೈಟೆಕ್ ಲುಕ್, ಒಳ ಹೋದರೆ ರಾಜ್ಯ ಸುತ್ತಿದ ಅನುಭವ..!

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರು ವಾಪಸು ಹೋಗುವಾಗ ಸಹಿ (signature) ಹಾಕಿಯೇ ಹೋಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕಾರ್ಯಕ್ರಮ ರೂಪಿಸಿದ್ದೇವೆ. ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಕೈದಿಗಳು ಸೇರಿದಂತೆ 2-3 ತಿಂಗಳಿಂದ ಹಿಡಿದು ಎಷ್ಟು ವರ್ಷದವರೆಗೆ ಜೈಲಿನಲ್ಲಿ ಇರುತ್ತಾರೋ ಅಷ್ಟೂ ವರ್ಷ ಕಲಿಕಾ ತರಗತಿಗಳು ನಡೆಯಲಿವೆ. ಕನಿಷ್ಠ ಎರಡು ತಿಂಗಳು ಜೈಲಿನಲ್ಲಿದ್ದರೂ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿಸಿ ಕಳುಹಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.

ರಾಜ್ಯದಲ್ಲಿನ (Karnataka) ಜೈಲುಗಳಲ್ಲಿ ಒಟ್ಟು 16 ಸಾವಿರ ಮಂದಿ ಕೈದಿಗಳಿದ್ದಾರೆ. ಈ ಪೈಕಿ ಅನಕ್ಷರಸ್ಥ ಕೈದಿಗಳು (Prisons) ಎಷ್ಟು ಮಂದಿ ಇದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಯಲಾಗುತ್ತಿದೆ. ಪ್ರಾಥಮಿಕ ಮಾಹಿತಿ (Primary information) ಪ್ರಕಾರ 6 ಸಾವಿರ ಮಂದಿ ಅನಕ್ಷರಸ್ಥ ಕೈದಿಗಳಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಶಿಕ್ಷಣ ನೀಡಲು ಪೊಲೀಸ್‌ ಇಲಾಖೆ ರೂಪುರೇಷೆ ಸಿದ್ಧ ಪಡಿಸಿದೆ. ವಯಸ್ಕರ ಶಿಕ್ಷಣ ಸಮಿತಿಯನ್ನೂ ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನ್ನಡದಲ್ಲೇ ಕವಾಯತು ನಿರ್ದೇಶನ:

ಕನ್ನಡ ರಾಜ್ಯೋತ್ಸವ (Kannada rajyotsava) ಅಂಗವಾಗಿ ನವೆಂಬರ್‌ 1ರಿಂದ ಕವಾಯತು ನಿರ್ದೇಶನಗಳನ್ನು ಇಂಗ್ಲೀಷ್‌ ಬದಲಿಗೆ ಕನ್ನಡದಲ್ಲೇ ನೀಡಬೇಕು ಎಂದು ಸೂಚಿಸಲಾಗಿದೆ. ಇಡೀ ಪೊಲೀಸ್‌ ಇಲಾಖೆಯಲ್ಲಿ ಇದನ್ನು ಅಳವಡಿಕೆ ಮಾಡಲಾಗುವುದು. ನಾನೂ ಸಹ ಎನ್‌ಸಿಸಿ ಪೆರೇಡ್‌ಗಳಲ್ಲಿ ಹಿಂದಿ ನಿರ್ದೇಶನಗಳನ್ನು ಪಾಲಿಸಬೇಕಾಗಿತ್ತು. ಇದೀಗ ನಾನೂ ಸಹ ಕನ್ನಡ ನಿರ್ದೇಶನಗಳನ್ನು ಕಲಿಯುತ್ತೇನೆ. ಇದೊಂದು ವಿಶೇಷ ಪ್ರಯತ್ನವಾಗಲಿದ್ದು, ಇನ್ನು ಮುಂದೆ ಕವಾಯತು ನಿರ್ದೇಶನಗಳು ಕನ್ನಡದಲ್ಲೇ ಇರಬೇಕು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

 

  • ರಾಜ್ಯದ ಜೈಲುಗಳಲ್ಲಿರುವ ಸುಮಾರು ಆರು ಸಾವಿರ ಅನಕ್ಷರಸ್ಥ ಕೈದಿಗಳಿಗೆ ನವೆಂಬರ್‌ ಒಂದರಿಂದ ಜೈಲಿನಲ್ಲೇ ಶಿಕ್ಷಣ 
  • ಸಾಕ್ಷರತಾ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ
  • ನವೆಂಬರ್‌ 1ರಿಂದ ಪೊಲೀಸ್‌ ಕವಾಯತು ವೇಳೆ ಇಂಗ್ಲೀಷ್‌ ಬದಲಿಗೆ ಕನ್ನಡದಲ್ಲೇ ಕಾಷನ್‌ 
  •  ಕಡ್ಡಾಯ ಮಾಡಲಿದ್ದು, ಯಾವ್ಯಾವ ಪದಕ್ಕೆ ಯಾವ್ಯಾವ ಕನ್ನಡ ಪದ ಬಳಕೆ ಮಾಡಬೇಕು ಎಂಬ ಬಗ್ಗೆ ಪಟ್ಟಿ ಸಿದ್ಧ
  • ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರು ವಾಪಸು ಹೋಗುವಾಗ ಸಹಿ ಹಾಕಿಯೇ ಹೋಗಬೇಕು
  •   2-3 ತಿಂಗಳಿಂದ ಹಿಡಿದು ಎಷ್ಟು ವರ್ಷದವರೆಗೆ ಜೈಲಿನಲ್ಲಿ ಇರುತ್ತಾರೋ ಅಷ್ಟೂ ವರ್ಷ ಕಲಿಕಾ ತರಗತಿಗಳು ನಡೆಯಲಿವೆ. 
  • ರಾಜ್ಯದಲ್ಲಿನ ಜೈಲುಗಳಲ್ಲಿ ಒಟ್ಟು 16 ಸಾವಿರ ಮಂದಿ ಕೈದಿಗಳಿದ್ದಾರೆ
  • ಅನಕ್ಷರಸ್ಥ ಕೈದಿಗಳು ಎಷ್ಟುಮಂದಿ ಇದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಯಲಾಗುತ್ತಿದೆ. 
Follow Us:
Download App:
  • android
  • ios