Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಲಾಕ್‌ಡೌನ್ 5.0 ಹೊಸ ಗೈಡ್‌ಲೈನ್ಸ್ ರಿಲೀಸ್: ಏನಿರುತ್ತೆ? ಏನಿರಲ್ಲ?

ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ಐದನೇ ಹಂತದ ಲಾಕ್‌ಡೌನ್‌ ಗೈಡ್‌ಲೈನ್ಸ್‌ ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಮಾರ್ಗಸೂಚಿ ಅನ್ವಯ ಏನಿರುತ್ತೆ? ಏನಿರಲ್ಲ? ಎನ್ನುವ ವಿವರ ಈ ಕೆಳಗಿನಂತಿದೆ.

Karnataka Govt releases lockdown 5 Fresh guide lines
Author
Bengaluru, First Published May 31, 2020, 5:29 PM IST

ಬೆಂಗಳೂರು, (ಮೇ.31): ಕೋವಿಡ್ 19 ವೈರಸ್  ಲಾಕ್‌ಡೌನ್‌ ಜೂನ್ 30ರ ವರೆಗೆ ವಿಸ್ತರಿಸಲಾಗಿದ್ದು, 5ನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

"

ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ತನ್ನ ಹೊಸ ಗೈಡ್‌ಲೈನ್ಸ್‌ ಸಹ ಇಂದು (ಭಾನುವಾರ) ರಿಲೀಸ್ ಮಾಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಯಥಾವತ್‌ ರಾಜ್ಯ ಸರ್ಕಾರ ಪಾಲಿಸಿದೆ, ಹಾಗಾದ್ರೆ, ಈ ಮಾರ್ಗಸೂಚಿ ಅನ್ವಯ ಏನಿರುತ್ತೆ? ಏನಿರಲ್ಲ? ಎನ್ನುವುದು ಈ ಕೆಳಗಿನಂತಿದೆ.

"

ದೀಪಿಕಾ ಹೇಳಿದ ದಾಂಪತ್ಯ ಜೀವನದ ಗುಟ್ಟು, ಏನಾಯ್ತು ಲಡಾಖ್ ಬಿಕ್ಕಟ್ಟು? ಮೇ.31ರ ಟಾಪ್ 10 ಸುದ್ದಿ!

*ರಾಜ್ಯ ಸರ್ಕಾರದಿಂದಲೂ ಜೂನ್ 30ರ ವರೆಗೆ ಲಾಕ್‌ಡೌನ್
* ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್
* ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ತೆರೆಯಲು ಅನುಮತಿ
* ಚಿತ್ರಮಂದಿರ, ಮೆಟ್ರೋ ಸಂಚಾರ, ಮನೋರಂಜನೆ ಸ್ಥಳಗಳಿಗೆ ನಿರ್ಬಂಧ
* ಶಾಲಾ-ಕಾಲೇಜು ಓಪನ್ ಇರಲ್ಲ 
* ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಇರಲಿದೆ.
* ಮದ್ವೆಗೆ 50ಜನ, ಅಂತ್ಯ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ
* ಹೋಟೆಲ್, ರೆಸ್ಟೋರೆಂಟ್  ಲಭ್ಯ
* ಶಾಪಿಂಗ್ ಮಾಲ್ ತೆರೆಯಲು ಒಪ್ಪಿಗೆ
* 65 ವರ್ಷ ಮೆಲ್ಪಟ್ಟವರು, ಗರ್ಭಿಣಿಯರು, 10 ವರ್ಷದೊಳಗಿನವರು ಹೊರಬರುವಂತಿಲ್ಲ.
* ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ
* ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್

"

Follow Us:
Download App:
  • android
  • ios