ಏ.27ರಿಂದ 14 ದಿನಗಳ ಕಾಲ ಕರ್ನಾಟಕಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಬೆಂಗಳೂರು, (ಏ.27): ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾಗಿರುವ ಕಾರಣ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಗೈಡ್‌ಲೈನ್ಸ್‌ ಬಿಡುಗಡೆಗೊಳಿಸಿದೆ.

 ಮದ್ಯದಂಗಡಿಯಲ್ಲಿ ಕೇವಲ ಪಾರ್ಸೆಲ್​ಗೆ ಮಾತ್ರ ಅವಕಾಶವಿದ್ದು, ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದೆ. ಸೀಲ್ಡ್‌ ಬಾಟಲ್‌ಗಳಲ್ಲಿ =ಮಾತ್ರ ಮದ್ಯ ಪಾರ್ಸೆಲ್ ನೀಡಬೇಕು. ಎಂಆರ್‌ಪಿ ದರದಲ್ಲಿ ಮಾತ್ರ ಮದ್ಯ ಮಾರಾಟ ಮಾಡಬೇಕು. ಗರಿಷ್ಟ 2 ಲೀಟರ್ ಬಿಯರ್ ಮಾತ್ರ ಪಾರ್ಸೆಲ್‌ ನೀಡಬೇಕು. ಅದರಲ್ಲೂ ಬಾಟಲ್‌ ಬಿಯರ್‌ಗಳನ್ನು ಮಾತ್ರ ಮಾರಾಟ ಮಾಡಬಹುದು. ಆದರೆ ದೊಡ್ಡ ಕಂಟೇನರ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮವನ್ನು ಸರ್ಕಾರ ರೂಪಿಸಿದೆ.

ಲಾಕ್ ಡೌನ್ ಭಯಕ್ಕೆ ಬೆದರಿದ ಮದ್ಯಪ್ರಿಯರು.. ಅಂಗಡಿ ಮುಂದೆ ಸಾಲೋ ಸಾಲು

ಮಾಲ್‌, ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರುವಂತಿಲ್ಲ. ಮದ್ಯ ಮಾರಾಟ ವೇಳೆ ಕೊವಿಡ್ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಲೈಸೆನ್ಸ್‌ ಅಮಾನತು, ರದ್ದು ಮಾಡುವ ಎಚ್ಚರಿಕೆಯನ್ನು ಮಾರ್ಗದರ್ಶಿ ಸೂತ್ರದಲ್ಲಿ ವಿಧಿಸಲಾಗಿದೆ. ಮೇ 12ರವರೆಗೆ ಈ ಮಾರ್ಗಸೂಚಿಯ ಅನ್ವಯ ಮದ್ಯ ಮಾರಾಟ ಮಾಡಬಹುದಾಗಿದೆ. ಮದ್ಯ ಮಾರಾಟ ವೇಳೆ ಕೊವಿಡ್ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಲೈಸೆನ್ಸ್‌ ಅಮಾನತು, ರದ್ದು ಮಾಡುವ ಎಚ್ಚರಿಕೆಯನ್ನು ಮಾರ್ಗದರ್ಶಿ ಸೂತ್ರದಲ್ಲಿ ವಿಧಿಸಲಾಗಿದೆ.

ಕೊರೊನಾ ಮೊದಲನೆ ಅಲೆ ಕಾಣಿಸಿಕೊಂಡಾಗ ಏಕಾಏಕಿ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದರು.ಮದ್ಯಪ್ರಿಯರು ಆಲ್ಕೋಹಾಲ್​ಗಾಗಿ ತುಂಬಾನೇ ಪರದಾಡಿದ್ರು, ಅಲ್ಲದೇ ಕೆಲವರು ಆತ್ಮಹತ್ಯೆಯನ್ನು ಸಹ ಮಾಡಿಕೊಂಡರು. ಇನ್ನೂ ಕೆಲರು. ಸ್ಯಾನಿಟೈಸರ್​ನಲ್ಲಿ ಆಲ್ಕೋಹಾಲ್ ಅಂಶ​ ಇರುತ್ತದೆ ಎಂದು ಅನೇಕರು ಅದನ್ನೇ ಕುಡಿದಿರುವ ಉದಾಹರಣೆಗಳಿವೆ.

ಆದರೆ, ಈ ಬಾರಿ ಹೀಗೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ 14 ದಿನಗಳ ಕೊವಿಡ್​ ಕರ್ಫ್ಯೂನಲ್ಲಿ ಪಾರ್ಸೆಲ್‌ಗೆ ಅವಕಾಶ ಮಾಡಿಕೊಡಲಾಗಿದೆ.​