ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ: ಮತ್ತೆಲ್ಲವೂ ಬಂದ್

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಏಪ್ರಿಲ್‌-21 ರಿಂದ ಮೇ-4ರ ವರೆಗೆ  ವಾರಾಂತ್ಯ & ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅನುಮತಿಸಲಾದ ಹಾಗೂ ನಿರ್ಭಂಧಿಸಲಾದ ಚಟುವಟಿಕೆಗಳು ಹೀಗಿವೆ.

Karnataka Govt Published revised guidance only necessary services will be permitted rbj

ಬೆಂಗಳೂರು, (ಏ.22): ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು (ಗುರುವಾರ) ಪರಿಶ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲವನ್ನೂ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದರೊಂದಿಗೆ ಅರ್ಧ ಕರ್ನಾಟಕ ಲಾಕ್‌ ಆದಂತೆ.

ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಸೇರಿ ಎಲ್ಲವನ್ನೂ ಬಂದ್ ಮಾಡಬೇಕಿದೆ.

ಕೊರೋನಾ ರಿಪೋರ್ಟ್‌ ಮಾರಾಟ: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸುಧಾಕರ್ ಪ್ರತಿಕ್ರಿಯೆ

 ಏಪ್ರಿಲ್‌-21 ರಿಂದ ಮೇ-4ರ ವರೆಗೆ  ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅನುಮತಿಸಲಾದ ಹಾಗೂ ನಿರ್ಭಂಧಿಸಲಾದ ಚಟುವಟಿಕೆಗಳು ಈ ಕೆಳಗಿನಂತಿವೆ.

ಹೋಟೆಲ್ , ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸಲ್ ತರಲಷ್ತೇ ಅವಕಾಶವಿದೆ. ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ.

ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪೇಪರ್, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು, ಇ-ಕಾಮರ್ಸ್ ಸೇವೆ, ಖಾಸಗಿ ಸೆಕ್ಯೂರಿಟಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿಸಲಾಗಿದೆ.

ಇನ್ನು ಪ್ರಮುಖವಾಗಿ ಪೊಲೀಸರು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಏಕಾಏಕಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ಗೊಂದಲ ಸೃಷ್ಟಿಸಿದೆ. ಸರ್ಕಾರ ಹೀಗೆ ಮಾಡುತ್ತಿರುವುದ್ಯಾಕೆ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

Latest Videos
Follow Us:
Download App:
  • android
  • ios